More

    ‘ನೈಜ ಅಯೋಧ್ಯೆ ನೇಪಾಳದಲ್ಲಿದೆ…’ ಓಲಿ ಮಾತಿಗೆ ವಿಎಚ್​ಪಿ ಹೇಳಿದ್ದೇನು?

    ನವದೆಹಲಿ: ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ. ಶ್ರೀರಾಮ ನೇಪಾಳದ ರಾಜಕುಮಾರ…. ಇಂಥದ್ದೊಂದು ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದ್ದರು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ.

    ಈ ಹೇಳಿಕೆಗೆ ವಿಶ್ವದ ಬಹುತೇಕ ಕಡೆಗಳಿಂದ ಓಲಿ ವಿರೋಧ ಎದುರಿಸಬೇಕಾಯ್ತು. ಸದ್ಯ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿರುವ ವಿಶ್ವ ಹಿಂದು ಪರಿಷದ್​ ಓಲಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.

    ಇದನ್ನೂ ಓದಿ; ರಾಜಸ್ಥಾನ ಡಿಸಿಎಂ, ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಸಚಿನ್​ ಪೈಲಟ್​ಗೆ ಕೊಕ್

    ಭಾರತದೊಂದಿಗಿನ ನೇಪಾಳದ ಭಾವನಾತ್ಮಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಹಾಳುಗಡೆವಲು ಪ್ರಧಾನಿ ಇಂಥ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಎಚ್​ಪಿ ಅಧ್ಯಕ್ಷ ಅಲೋಕ್​ ಕುಮಾರ್​ ಹೇಳಿದ್ದಾರೆ.

    ಓಲಿ ಭಾರತ ವಿರೋಧಿ ನಿಲುವು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ರಾಮನನ್ನು ನಂಬುವ ನೇಪಾಳದ ಭಕ್ತರು ಪ್ರಧಾನಿ ಹೇಳಿಕೆಯನ್ನು ಅಲ್ಲಗೆಳೆಯುತ್ತಾರೆ ಹಾಗೂ ಇಂಥ ಜಾಲದಲ್ಲಿ ಸಿಲುಕುವುದಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…! 

    ಓಲಿ ಹೇಳಿಕೆಗೆ ನೇಪಾಳದ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಅನಾರೋಗ್ಯಕರ ಚಿಂತನೆ. ಪ್ರಧಾನಿಗೆ ಯಾವುದೇ ನಿರ್ಬಂಧಗಳಿಲ್ಲದೆ ಬಿಡುವುದು ಅಪಾಯಕಾರಿ ಕೂಡ ಎಂದು ಮಾಜಿ ಪ್ರಧಾನಿ ಬಾಬುರಾಮ್​ ಭಟ್ಟಾರೈ ಹೇಳಿದ್ದಾರೆ. ಒಟ್ಟಾರೆ, ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ಓಲಿ, ಭಾರತ ವಿರೋಧಿ ನಿಲುವನ್ನು ಪ್ರದರ್ಶಿಸುತ್ತಲೇ ಇದ್ದಾರೆ.

    ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts