More

    ಡ್ರ್ಯಾಗನ್ ಬೆನ್ನಲುಬು ಮುರಿಯೋದಕ್ಕೆ ಜಾಗೃತಿ ಅಭಿಯಾನ: ಮನೆಮನೆಗೆ ತೆರಳಲಿದ್ದಾರೆ ವಿಹಿಂಪ ಕಾರ್ಯಕರ್ತರು

    ನವದೆಹಲಿ: ಚೀನಾದ ಬೆನ್ನೆಲುಬು ಮುರಿಯುವುದಕ್ಕಾಗಿ ಚೀನಾ ಉತ್ಪನ್ನಗಳನ್ನು ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವ ಹಿಂದು ಪರಿಷದ್​ (ವಿಹಿಂಪ) ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಭಿಯಾನ ನಡೆಸಲಿದ್ದಾರೆ. ಗುರುವಾರ ಈ ಕುರಿತು ಮಹತ್ವದ ಘೋಷಣೆ ಮಾಡಿರುವ ವಿಹಿಂಪ, ಮೊಬೈಲ್​ಗಳು ಸೇರಿದಂತೆ ಚೀನಾದ ಎಲ್ಲ ಉತ್ಪನ್ನಗಳನ್ನೂ ಬಹಿಷ್ಕರಿಸುವಂತೆ ಕರೆ ನೀಡಿದೆ.

    ಬಿಜೆಪಿ ನೇತೃತ್ವದ ಸರ್ಕಾರ ಮತ್ತು ವೀರ ಯೋಧರು ದೇಶವನ್ನು ಮತ್ತು ದೇಶದ ನೆಲವನ್ನು ಕಾಪಾಡಬಲ್ಲರು. ಅವರಿಗೆ ಆ ಸಾಮರ್ಥ್ಯವಿದೆ. ಅದರಲ್ಲಿ ನಮಗೆ ನಂಬಿಕೆ ಇದೆ. ಸದ್ಯದ ಗಡಿ ಬಿಕ್ಕಟ್ಟನ್ನೂ ಸಮರ್ಥವಾಗಿ ನಿಭಾಯಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ವಿಹಿಂಪ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಡ್ರ್ಯಾಗನ್​ ಮೇಲೆ ಶ್ರೀರಾಮಚಂದ್ರ ದಾಳಿ ನಡೆಸಿದ ಚಿತ್ರ ಹಾಂಕಾಂಗ್​​ನಲ್ಲಿ ವೈರಲ್​, ತೈವಾನ್​ ನ್ಯೂಸ್​ ಪೋರ್ಟಲ್​ನಲ್ಲಿ ಫೋಟೋ ಆಫ್​ ದ ಡೇ!

    ಭಾರತೀಯ ಯೋಧರ ಮೇಲಿನ ಪೈಶಾಚಿಕ ಆಕ್ರಮಣವನ್ನು ಖಂಡಿಸಿದ ವಿಹಿಂಪ ಜನರಲ್ ಸೆಕ್ರಟರಿ ಮಿಲಿಂದ್ ಪರಾಂಡೆ, ಚೀನಾದ ಆಕ್ರಮಣಶೀಲ ನಡೆಯಿಂದ ಇಡೀ ದೇಶ ಸ್ತಂಭೀಭೂತವಾಗಿದೆ. ನೆರೆರಾಷ್ಟ್ರಕ್ಕೆ ಸರಿಯಾದ ಪಾಠ ಕಲಿಸಲು ಇದು ಸಕಾಲ. ಚೀನಾವನ್ನು ಬೆನ್ನೆಲುಬಿಲ್ಲದಂತೆ ಮಾಡುವುದಕ್ಕಾಗಿ ಭಾರತೀಯರೆಲ್ಲೂ ಚೀನಾದ ಎಲ್ಲ ಉತ್ಪನ್ನಗಳೆಲ್ಲವನ್ನೂ ಬಹಿಷ್ಕರಿಸಬೇಕು. ಅದರ ಆದಾಯಕ್ಕೆ ಹೊಡೆತ ನೀಡಬೇಕು ಎಂದು ಮನವಿ ಮಾಡಿದ್ದಾರೆ.
    ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಸಂಬಂಧಿಸಿ ಪ್ರಕ್ರಿಯಿಸಿರುವ ವಿಹಿಂಪದ ವಕ್ತಾರ ವಿನೋದ್ ಬನ್ಸಾಲ್​, ನಾವು ಬಜರಂಗದಳದ ಯುವ ಘಟಕದೊಂದಿಗೆ ಸೇರಿ ದೇಶಾದ್ಯಂತ ಮನೆ ಮನೆಗೆ ತೆರಳಿ ಚೀನಾ ಉತ್ಪನ್ನಗಳು, ಮೊಬೈಲ್ ಆ್ಯಪ್​ಗಳನ್ನು ಬಳಸದಂತೆ ಜಾಗೃತಿ ಮೂಡಿಸಿ ಮನವಿ ಮಾಡುತ್ತೇವೆ. (ಏಜೆನ್ಸೀಸ್)

    ವಿಷ ಕನ್ಯೆ| ಆಕೆಯ ತುಟಿಗೆ ಕಿಸ್​ ಕೊಟ್ಟ ವ್ಯಕ್ತಿಯ ಬದುಕೇ ಬದಲಾಗಿಬಿಟ್ಟಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts