More

    ನಾಗರಿಕ ಸೇವಾ ಪರೀಕ್ಷೆ ಬರೆಯಲು ಬೇಕಿದೆ ಪ್ರೋತ್ಸಾಹ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯುವಜನತೆಯಲ್ಲಿ ನಾಗರಿಕ ಸೇವಾ ಪರೀಕ್ಷೆ ಬಗ್ಗೆ ಹೆಚ್ಚು ಅರಿವು ಮತ್ತು ಆಸಕ್ತಿ ಕಾಣುತ್ತಿಲ್ಲ. ಅವರಿಗೆ ಪ್ರೋತ್ಸಾಹದ ಅಗತ್ಯವಿದೆ. ಇಂತಹ ಕಾರ್ಯಕ್ರಮ ನಾಗರಿಕ ಸೇವೆ ಪರೀಕ್ಷೆಗಳಿಗೆ ಪ್ರಯತ್ನಿಸಲು ಪ್ರೇರಣೆಯಾಗಲಿ ಎಂದು ಅಶೋಕ ಲೈಲ್ಯಾಂಡ್ ಕಂಪನಿಯ ವಿಶ್ರಾಂತ ಹಿರಿಯ ಉಪಾಧ್ಯಕ್ಷ ನರಸಿಂಹ ಹೆಗಡೆ ಬಾಳೆಗದ್ದೆ ಹೇಳಿದರು.

    ನಗರದ ಎಂಇಎಸ್‌ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ, ಐಐಸಿ, ಪ್ಲೇಸ್ಮೆಂಟ್ ಸೆಲ್ ಮತ್ತು ಸ್ವರ್ಣವಲ್ಲೀ ಮಠದ ಸ್ವರ್ಣ ರಶ್ಮಿ (ಸ್ವಯಂ) ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

    ನಾಗರಿಕ ಸೇವೆಯಲ್ಲಿ ಕೆಲಸ ಮಾಡುವುದು ಕಾರ್ಪೊರೇಟ್ ಜಗತ್ತಿಗಿಂತಲೂ ಭಿನ್ನ ಮತ್ತು ಅದ್ಭುತ ಅನುಭವ ನೀಡುತ್ತದೆ. ನಾವೆಲ್ಲ ಹುಟ್ಟಿದ ತಕ್ಷಣದಿಂದ ಸಮಾಜದೊಂದಿಗೆ ಜೀವಿಸುತ್ತೇವೆ. ಹಾಗಾಗಿ, ಸಮಾಜಕ್ಕೆ ಉತ್ತಮ ಸೇವೆ ಕೊಡುಗೆ ನೀಡಲು ನಾಗರಿಕ ಸೇವೆಗೆ ಆಯ್ಕೆಯಾಗಲು ಪ್ರಯತ್ನಿಸಬೇಕು ಎಂದರು.

    ಸಂಪನ್ಮೂಲ ವ್ಯಕ್ತಿ, ಹುಬ್ಬಳ್ಳಿ ನೈರುತ್ಯ ರೈಲ್ವೆ ಅಧಿಕಾರಿ ಸಂತೋಷ ಹೆಗಡೆ ಮುರೇಗಾರ್ ಮಾತನಾಡಿ, ನಾಗರಿಕ ಸೇವೆಗಳಿಗೆ ಅರ್ಹತೆ ಪಡೆಯಲು ಕಠಿಣ ಪರಿಶ್ರಮದ ಜತೆಗೆ ಏಕಾಗ್ರತೆ ಮುಖ್ಯ. ಶ್ರಮಪಟ್ಟು ಓದಿದರೆ ಯಶಸ್ಸು ಸಾಧ್ಯವಿದೆ. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶವಿದೆ ಎಂದರು.

    ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೇಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಯಂನ ಶಿರಸಿ ತಾಲೂಕು ಅಧ್ಯಕ್ಷ ಆರ್.ಎಸ್. ಭಟ್, ಡಾ. ಎಸ್. ಎಸ್. ಭಟ್ ಇದ್ದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣೇಶ ಹೆಗಡೆ ನಿರೂಪಿಸಿದರು. ಸ್ವರ್ಣ ರಶ್ಮಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ವಂದಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts