More

    ಹೊಗೆ ರಹಿತ ವಾಹನ ಬಳಕೆಗೆ ಆದ್ಯತೆ ನೀಡಿ

    ರಾಯಚೂರು: ವಾಹನಗಳಿಗೆ ಕಲಬೆರಕೆ ಇಂಧನ ಬಳಕೆಯಿಂದಾಗಿ ವಾಯು ಮಾಲಿನ್ಯವುಂಟಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮವುಂಟಾಗುತ್ತಿದೆ. ಕಾರಣ ಹೊಗೆ ರಹಿತ ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಮುಂದಾಗಬೇಕು ಎಂದು ಸಾರಿಗೆ ಇಲಾಖೆ ಕಲಬುರಗಿ ವಿಭಾಗದ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ ಹೇಳಿದರು.
    ಸ್ಥಳೀಯ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಹನ ಸವಾರರು ಕಡ್ಡಾಯವಾಗಿ ವಾಯು ಮಾಲಿನ್ಯ ತಪಾಸಣಾ ಕೇಂದ್ರದಿಂದ ಪ್ರಮಾಣಪತ್ರ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದರು.
    ಕೆಲವು ವಾಹನಗಳು ದಟ್ಟವಾದ ಹೊಗೆಯನ್ನು ಬಿಟ್ಟು ವಾಯು ಮಾಲಿನ್ಯ ಉಂಟು ಮಾಡುತ್ತಿವೆ. ದೆಹಲಿಯಲ್ಲಿ ವಾಹನಗಳ ಹೊಗೆಯಿಂದ ಇಡೀ ನಗರವೇ ತೀವ್ರ ಮಾಲಿನ್ಯದಿಂದ ಬಳಲುತ್ತಿದೆ. ವಾಹನ ಸವಾರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸಿದ್ದಪ್ಪ ಕಲ್ಲೇರ ತಿಳಿಸಿದರು.
    ಪ್ರಾದೇಶಿಕ ಸಾರಿಗೆ ಅಕಾರಿ ವಿನಯಾ ಕಾಟೋಕರ್ ಮಾತನಾಡಿ, ವಾಹನ ಸವಾರರು ಕಲಬೆರಕೆ ಇಂಧನ ಉಪಯೋಗಿಸಬಾರದು. ವಾಹನ ಚಾಲಕರು ಶುದ್ಧ ಇಂಧನ ಬಳಸಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಎಸ್.ಸಿ.ನಾಗವಂದ, ಬುಗ್ಗಾರೆಡ್ಡಿ, ಅೀಕ್ಷಕರಾದ ವೌನೇಶ, ಜೀನತ್ ಸಾಜೀದ್ ಹಾಗೂ ಶಿಕ್ಷಕ ದಂಡಪ್ಪ ಬಿರಾದರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts