More

    ವೆಟ್ರಿ ಮಾರನ್ ಜತೆ ಕೈ ಜೋಡಿಸಿದ ಸೇತುಪತಿ; ಬಹುಭಾಷೆಯಲ್ಲಿ ಸಿದ್ಧವಾಗಲಿದೆ ‘ವಿಡುದಲೈ’

    ಚೆನ್ನೈ: ವಿಜಯ್ ಸೇತುಪತಿ ಇದೀಗ ಮಾಸ್ಟರ್ ಆಗುತ್ತಿದ್ದಾರೆ. ಅಂದರೆ ಪ್ಯಾನ್​ ಇಂಡಿಯಾ ಪರಿಕಲ್ಪನೆಯಲ್ಲಿ ವಿದುತಲೈ ಚಿತ್ರದಲ್ಲಿ ನಾಯಕರಾಗಿ ನಟಿಸಲಿದ್ದಾರೆ. ವಿಡುದಲೈ ಎಂದರೆ ಬಿಡುಗಡೆ ಎಂದರ್ಥ. ಮೂಲ ತಮಿಳಿನ ಈ ಸಿನಿಮಾ ಸೌತ್ ಇಂಡಿಯನ್ ಭಾಷೆಗಳು ಸೇರಿ ಹಿಂದಿಯಲ್ಲಿಯೂ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಪೋಸ್ಟರ್​ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಕೋವಿಡ್ ಹೋರಾಟಕ್ಕೆ ಫಂಡ್‌ರೇಸರ್ ಪ್ರಾರಂಭಿಸಿದ ಪ್ರಿಯಾಂಕಾ

    ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಲ್ರೆಡ್​ ಕುಮಾರ್​ ಅವರ ಆರ್​ ಎಸ್​ ಇಂಫೋಟೈನ್​​ಮೆಂಟ್​ ಪ್ರೊಡಕ್ಷನ್ಸ್ ವತಿಯಿಂದ ಈ ಚಿತ್ರ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲದೆ, ಈ ಚಿತ್ರಕ್ಕೆ ಮ್ಯೂಸಿಕ್ ಮ್ಯಾಸ್ಟ್ರೋ ಇಳಯರಾಜ ಸಂಗೀತ ನೀಡಲಿದ್ದು, ವೆಟ್ರಿ ಮಾರನ್ ಮತ್ತು ಇಳಯರಾಜಾ ಕಾಂಬೋ ಮೊದಲ ಬಾರಿ ಒಂದಾಗುತ್ತಿದೆ.

    ವಿಡುದಲೈ ಚಿತ್ರದ ಸಂಪೂರ್ಣ ಶೂಟಿಂಗ್​ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಅಚ್ಚರಿ ಏನೆಂದರೆ, ಈಗಾಗಲೇ ಲೊಕೇಶನ್ ಅಂತಿಮ ಮಾಡಲಾಗಿದ್ದು, ವಿದ್ಯುತ್ ಮತ್ತು ಫೋನ್ ನೆಟ್​ವರ್ಕ್​ ಸಂಪರ್ಕ ಇಲ್ಲದ ಕಡೆಗಳಲ್ಲಿ ಇಡೀ ತಂಡ ಕೆಲಸ ಮಾಡಲಿದೆ. ಅಲ್ಲಿ ವಾಸವಿರುವ ಬುಡಕಟ್ಟು ಸಮುದಾಯದ ಜತೆಗೆ ತಂಡ ಕಾಲ ಕಳೆಯಲಿದ್ದಾರೆ.

    ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ರಾಮು ಬೆನ್ನಲ್ಲೇ ಮತ್ತೊಬ್ಬ ನಿರ್ಮಾಪಕ ಸಾವು

    ಈಗಾಗಲೇ ಅಸುರನ್ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿರುವ ವೆಟ್ರಿ ಮಾರನ್, ಇದೀಗ ವಿಡುದಲೈ ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರೆ. ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ವೆಲರಾಜ್​ ಛಾಯಾಗ್ರಹಣ, ಆರ್​. ರಮರ್ ಸಂಕಲನ, ಪಿಟರ್ ಹೇನ್ ಸಾಹಸ ನಿರ್ದೇಶನ, ಜಾಖಿ ಅವರ ಕಲಾ ನಿರ್ದೇಶನ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts