More

    ರೇಪ್ ನಂತರ ಸುಸ್ತಾಗಿ ಮಲಗಿದೆ ಎಂಬುದು ಭಾರತೀಯ ನಾರಿಯ ಲಕ್ಷಣವಲ್ಲ

    ಬೆಂಗಳೂರು: ಅತ್ಯಾಚಾರವಾದ ಬಳಿಕ ಸುಸ್ತಾಗಿ ಮಲಗಿದ್ದೆ. ಆದ್ದರಿಂದ, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಮಹಿಳೆಯೊಬ್ಬರು ನೀಡಿರುವ ಕಾರಣವನ್ನು ಕರ್ನಾಟಕ ಹೈಕೋರ್ಟ್​ ತಳ್ಳಿಹಾಕಿದೆ.
    ಬಲತ್ಕಾರಕ್ಕೆ ಒಳಗಾದಾಗ ಭಾರತೀಯ ನಾರಿಯರು ನಡೆದುಕೊಳ್ಳುವ ರೀತಿ ಇದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅತ್ಯಾಚಾರ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ನಗರದ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಕೇಶ್ (27) ಅರ್ಜಿ ಸಲ್ಲಿಸಿದ್ದರು. ಇದನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಮಹಿಳೆ ನೀಡಿರುವ ಸಮಜಾಯಿಷಿಯನ್ನು ತಳ್ಳಿ ಹಾಕಿದೆ.

    ಮಹಿಳೆಯ ಆರೋಪಗಳನ್ನು ಈ ಹಂತದಲ್ಲೇ ನಂಬುವುದು ಕಷ್ಟವಾಗಿದೆ. ಅರ್ಜಿದಾರರ ವಿರುದ್ಧ ಅತ್ಯಾಚಾರದ ಗಂಭೀರ ಆರೋಪವಿದೆ ಎಂಬ ಒಂದೇ ಕಾರಣಕ್ಕೆ ಅವರ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

    ಇದನ್ನೂ ಓದಿ: ಕಿರುತೆರೆ ನಟಿ ಮನೆಗೆ ನುಗ್ಗಿ ಯುವಕರ ಗುಂಪಿನಿಂದ ಹಲ್ಲೆ: ಅಶ್ಲೀಲ ಪದಗಳಿಂದ ನಿಂದನೆ

    ಆರೋಪಿಯು 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು, ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ವ್ಯಾಪ್ತಿಯಿಂದ ಹೊರಹೋಗಬಾರದು. ಎರಡು ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಭಾರತೀಯ ಮಹಿಳೆಯರ ಲಕ್ಷಣವಲ್ಲ: ಕಳೆದ 2 ವರ್ಷಗಳಿಂದ ಸಂತ್ರಸ್ತ ಮಹಿಳೆಯ ಮಾಲಿಕತ್ವದ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಆರೋಪಿ ಮೊದಲಿಂದಲೂ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ, ಆ ಸಂದರ್ಭದಲ್ಲೇ ಏಕೆ ಕಾನೂನಿನ ಮೊರೆ ಹೋಗಲಿಲ್ಲ ಎಂದು ಮಹಿಳೆಯನ್ನು ಹೈಕೋರ್ಟ್ ಪ್ರಶ್ನಿಸಿದೆ.

    ಅಲ್ಲದೆ, ಸಂಧಾನ ಮಾಡಿಕೊಳ್ಳಲು ಒಪ್ಪಿದರೆ ದೂರು ಹಿಂಪಡೆಯುವುದಾಗಿ ಮಹಿಳೆ ಪತ್ರ ಬರೆದಿರುವ ಆರೋಪವೂ ಇದೆ. ಇದನ್ನು ಗಮನಿಸಿದರೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆಂಬ ಮಹಿಳೆಯ ಆರೋಪಗಳು ಈ ಹಂತದಲ್ಲೇ ನಂಬಲಸಾಧ್ಯವಾಗಿದೆ ಎಂದು ಹೇಳಿದೆ.

    ಇದನ್ನೂ ಓದಿ: ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಾಯುತ್ತಿರುವ ಜನ

    ಮೇಲಾಗಿ, ಮಹಿಳೆಯೇ ಆರೋಪಿಯ ಜತೆ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಆರೋಪಿ ಕುಡಿದು ಬಂದು ಕಾರು ಹತ್ತಿದ ಎಂದು ಹೇಳಿರುವ ಮಹಿಳೆ ಈ ವೇಳೆ ಸಹಾಯಕ್ಕಾಗಿ ಪೊಲೀಸರು ಅಥವಾ ಸಾರ್ವಜನಿಕರನ್ನು ಏಕೆ ಕರೆಯಲಿಲ್ಲ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸಿಲ್ಲ. ಕೃತ್ಯ ನಡೆದ ದಿನ ರಾತ್ರಿ 11 ಗಂಟೆಗೆ ಕಚೇರಿಗೆ ಹೋಗಿದ್ದೇಕೆ ಎಂಬ ಬಗ್ಗೆಯೂ ವಿವರಣೆಗಳಿಲ್ಲ. ಅಲ್ಲದೆ, ರಾತ್ರಿ ಪೂರ್ತಿ ಆರೋಪಿಯೊಂದಿಗೇ ಉಳಿದಿದ್ದಾರೆ. ಜತೆಗೆ ತನ್ನ ಮೇಲೆ ಅತ್ಯಾಚಾರದಿಂದ ಸುಸ್ತಾಗಿ ಮಲಗಿಬಿಟ್ಟೆ. ಹಾಗಾಗಿ ಕೃತ್ಯ ನಡೆದ ದಿನವೇ ದೂರು ದಾಖಲಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇದು ಖಂಡಿತವಾಗಿಯೂ ಭಾರತೀಯ ಮಹಿಳೆ ನಡೆದುಕೊಳ್ಳುವ ರೀತಿಯಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

    ಪ್ರಕರಣವೇನು?: ಸಂತ್ರಸ್ತೆ (42) ಬೆಂಗಳೂರಿನಲ್ಲಿ ಕನ್ಸಲ್ಟೆನ್ಸಿ ಸಂಸ್ಥೆ ನಡೆಸುತ್ತಿದ್ದಾರೆ. ಇಲ್ಲಿ ರಾಕೇಶ್ ಕಳೆದೆರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಕಳೆದ ಮೇ 2ರಂದು ಮಹಿಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ಏ.22ರಂದು ರಾಕೇಶ್ ತನ್ನೊಂದಿಗೆ ಕಾರಿನಲ್ಲಿ ಕಚೇರಿಗೆ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ. ಏ.23ರಂದು ನನ್ನ ನಗ್ನ ಚಿತ್ರಗಳನ್ನು ನನಗೇ ಕಳುಹಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಿಸಿದ್ದರು.

    ದೂರು ಸ್ವೀಕರಿಸಿದ ಪೊಲೀಸರು ರಾಕೇಶ್ ವಿರುದ್ಧ ಐಪಿಸಿ ಸೆಕ್ಷನ್ 376, 420, 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಬಿ) ಅಡಿ ದೂರು ದಾಖಲಿಸಿದ್ದರು. ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು.

    ಗಮನ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿಗೆ ಭಾರತದ ಹುನ್ನಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts