More

    VIDEO: ಭರ್ಜರಿ ಶತಕ ಸಿಡಿಸಿ ರಜನಿಕಾಂತ್ ಶೈಲಿಯಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್!

    ನವದೆಹಲಿ: ಐಪಿಎಲ್‌ನಲ್ಲಿ ಕೆಕೆಆರ್ ಪರ ಮಿಂಚಿದ್ದ ಮಧ್ಯಪ್ರದೇಶದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ 2ನೇ ಶತಕ ಸಿಡಿಸಿ ಗಮನಸೆಳೆದಿದ್ದಾರೆ. ಜತೆಗೆ ಈ ಶತಕವನ್ನು ಮೆಗಾ ಸೂಪರ್‌ಸ್ಟಾರ್ ರಜನಿಕಾಂತ್ ಶೈಲಿಯಲ್ಲಿ ಸಂಭ್ರಮಿಸಿರುವುದು ವಿಶೇಷವಾಗಿದೆ. ಈ ಮೂಲಕ ರಜನಿಕಾಂತ್‌ಗೆ 71ನೇ ಜನ್ಮದಿನದ ಶುಭಾಶಯವನ್ನು ವಿಶೇಷವಾಗಿ ಸಲ್ಲಿಸಿದ್ದಾರೆ.

    ಚಂಡೀಗಢ ವಿರುದ್ಧ 113 ಎಸೆತಗಳಲ್ಲಿ 8 ಬೌಂಡರಿ, 10 ಸಿಕ್ಸರ್ ಸಹಿತ 151 ರನ್ ಸಿಡಿಸಿದ ವೆಂಕಟೇಶ್, ಮಧ್ಯಪ್ರದೇಶ ತಂಡ 9 ವಿಕೆಟ್‌ಗೆ 331 ರನ್ ಪೇರಿಸಲು ನೆರವಾದರು. 4 ದಿನಗಳ ಹಿಂದಷ್ಟೇ ಅವರು ಕೇರಳ ವಿರುದ್ಧ 84 ಎಸೆತಗಳಲ್ಲಿ 112 ರನ್ ಸಿಡಿಸಿ ಮಿಂಚಿದ್ದರು. 26 ವರ್ಷದ ವೆಂಕಟೇಶ್ ಟೂರ್ನಿಯಲ್ಲಿ ಇದುವರೆಗೆ ಆಡಿದ 4 ಪಂದ್ಯಗಳಲ್ಲಿ 2 ಶತಕ, 1 ಅರ್ಧಶತಕ ಸಹಿತ 348 ರನ್ ಮತ್ತು 8 ವಿಕೆಟ್ ಗಳಿಸಿದ್ದಾರೆ.

    ತಮಿಳುನಾಡು ಮೂಲದ ವೆಂಕಟೇಶ್ ಅಯ್ಯರ್ ರಜನಿಕಾಂತ್ ಶೈಲಿಯಲ್ಲಿ ಸೆಲ್ಯೂಟ್ ಮಾಡಿ ಸಂಭ್ರಮಿಸಿರುವ ವಿಡಿಯೋವನ್ನು ಬಿಸಿಸಿಐ ಭಾನುವಾರ ಟ್ವೀಟಿಸಿದೆ. ಅವರ ಐಪಿಎಲ್ ತಂಡ ಕೋಲ್ಕತ ನೈಟ್‌ರೈಡರ್ಸ್‌ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದೆ.

    71ನೇ ವಸಂತಕ್ಕೆ ಕಾಲಿಟ್ಟ ತಲೈವಾಗೆ ಶುಭಾಶಯಗಳ ಮಹಾಪೂರ: ರಜನಿ ಬಗ್ಗೆ ನಿಮಗೆ ತಿಳಿಯಬೇಕಾದ 12 ವಿಶೇಷ ಸಂಗತಿಗಳು!

    ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ 3ನೇ ಜಯ, ಹೆಚ್ಚಿದ ನಾಕೌಟ್ ಆಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts