More

  ವೆಂಕಟರಮಣೇಗೌಡ ಬಿರುಸಿನ ಪ್ರಚಾರ

  ಕೆ.ಆರ್.ಪೇಟೆ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಾಲೂಕಿನಾದ್ಯಂತ ಬಿರುಸಿನಿಂದ ಪ್ರಚಾರ ಮಾಡಿದರು.

  ತಾಲೂಕಿನ ವಿಠಲಾಪುರ, ಸೋಮನಹಳ್ಳಿ, ಆಲಂಬಾಡಿಕಾವಲು, ಅಕ್ಕಿಹೆಬ್ಬಾಳು, ಬೀರುವಳ್ಳಿ, ಮಂದಗೆರೆಗೆ, ದಬ್ಬೆಘಟ್ಟ, ಹಿರಿಕಳಲೆ, ಹೊಸಹೊಳಲು ಹಾಗೂ ಕೆ.ಆರ್.ಪೇಟೆ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಪಕ್ಷದ ಮುಖಂಡರು ವೆಂಕಟರಮಣೇಗೌಡ ಅವರನ್ನು ಸನ್ಮಾನಿಸಿದರು.
  ರೋಡ್ ಶೋ ಸಮಯದಲ್ಲಿ ಬಿರುಬಿಸಲನ್ನು ಲೆಕ್ಕಿಸದ ಜನರು ರಸ್ತೆ ಮಧ್ಯದಲ್ಲೇ ಜಮಾಯಿಸಿದ್ದರು. ಅಭ್ಯರ್ಥಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸ್ವಾಗತಿಸಿದರೆ ಮತ್ತೆ ಕೆಲವು ಕಡೆ ಡೋಲು ಬಡಿದು ಸ್ವಾಗತಿಸಿದರು.

  ನಾನು ಈ ಜಿಲ್ಲೆಯ ಮಣ್ಣಿನ ಮಗ. ಜಿಲ್ಲೆಯ ರೈತನ ಮಗನನ್ನು ಬೆಂಬಲಿಸಿ ಆಶೀರ್ವದಿಸಬೇಕೆಕು. ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ. ಲೋಕಸಭೆಯಲ್ಲಿ ನಿಮ್ಮೆಲ್ಲರ ದನಿಯಾಗಿ, ಅನ್ನದಾತನ ಬೆನ್ನಿಗೆ ನಿಂತು ಕೆಲಸ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಸ್ಟಾರ್ ಚಂದ್ರು ಮನವಿ ಮಾಡಿದರು.

  ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ದೇಶದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಹತ್ತು ತಿಂಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ. ಐದು ವಷರ್ದಿಂದ ಕುಂಠಿತವಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಈಗ ಶರವೇಗದಲ್ಲಿ ಸಾಗುತ್ತಿವೆ ಎಂದರು.

  ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಪಂಚ ಗ್ಯಾರಂಟಿ ಜಾರಿಯಿಂದ ಇಂದು ಪ್ರತಿ ಮನೆಗೆ 5 ಸಾವಿರ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ಮೋದಿ ಸರ್ಕಾರ ಏನು ಮಾಡಿದೆ? ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಈ ಚುನಾವಣೆಯಲ್ಲಿ ಜಿಲ್ಲೆಯವರೇ ಆದ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಬೇಕು ಎಂದರು.

  ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಬಿ.ಎಲ್.ದೇವರಾಜ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

  See also  ದುರ್ಗ, ಚಿಕ್ಕಮಗಳೂರು ಕೈ ಅಭ್ಯರ್ಥಿ ಘೋಷಣೆಗೆ ತಡೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts