More

    ಅನಗತ್ಯ ಸಂಚರಿಸಿದರೆ ವಾಹನ ಜಪ್ತಿ

    ಉಡುಪಿ: ಜಿಲ್ಲೆಯಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದರು.

    ಉಡುಪಿ ಕೃಷ್ಣ ಮಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗ್ಗೆ 7ರಿಂದ 11ರವರೆಗೆ ಅವಶ್ಯಕ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಅದರ ಬಳಿಕವೂ ಜನ ಸಂಚಾರ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಹೀಗೆ ಜನರು ಬೇಕಾಬಿಟ್ಟಿ ಓಡಾಡಿದರೆ ಕ್ರಮ ಅನಿವಾರ್ಯ. ಇದು ಮುಂದವರಿದರೆ ಖಾಸಗಿ ವಾಹನ ಸಂಚಾರ ನಿಷೇಧಿಸಲು ಹಿಂದೇಟು ಹಾಕುವುದಿಲ್ಲ ಎಂದರು.

    ಪಾಸಿಟಿವ್ ರೋಗಿಗಳ ಚೇತರಿಕೆ: ಉಡುಪಿಯಲ್ಲಿ ಈವರೆಗೆ ಪತ್ತೆಯಾಗಿರುವ ಮೂರು ಪಾಸಿಟಿವ್‌ಗಳ ಪೈಕಿ ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲು ದಾಖಲಾದ ರೋಗಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಎರಡು ಟೆಸ್ಟ್ ನೆಗೆಟಿವ್ ಬಂದರೆ ಬಳಿಕ ಡಿಸ್ಚಾರ್ಜ್ ಮಾಡಲಾಗುವುದು. ಸದ್ಯ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ. ವಿದೇಶದಿಂದ ಬಂದವರ 14 ದಿನಗಳ ಕ್ವಾರಂಟೈನ್ ಅವಧಿ ಬಹುತೇಕ ಮುಗಿದಿದೆ. 2000ಕ್ಕೂ ಅಧಿಕ ಮಂದಿ ಕ್ವಾರಂಟೈನ್ ಪೂರೈಸಿದ್ದಾರೆ. ಕೆಲವು ದಿನಗಳ ಫಾಲೋಅಪ್ ಅಗತ್ಯವಾಗಿದ್ದು, ಡಿಸಿ ಕಚೇರಿಯಿಂದಲೇ ದಿನನಿತ್ಯ ಫೋನ್ ಮಾಡಿ ಫಾಲೋಅಪ್ ಮಾಡುತ್ತೇವೆ. ಜಿಲ್ಲೆಯಲ್ಲಿ ಕರೊನಾ 3ನೇ ಹಂತ ತಲುಪುವ ಆತಂಕ ಇಲ್ಲ. ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಾತಿ ಕಡಿಮೆಯಾಗಿದೆ. ಹಿಂದೆ ದಿನಕ್ಕೆ 20ರಿಂದ 25 ಜನ ದಾಖಲಾಗುತ್ತಿದ್ದು ಈಗ ನಾಲ್ಕೈದಕ್ಕೆ ಇಳಿದಿದೆ. ಜನರು ಇನ್ನಷ್ಟು ದಿನ ಮನೆಬಿಟ್ಟು ಹೊರಬರದೆ ಸಹಕರಿಸಬೇಕು ಎಂದು ಹೇಳಿದರು.

    ದಿನಸಿ ಸರಬರಾಜಿಗೆ ನೋಡಲ್ ಅಧಿಕಾರಿ: ಜಿಲ್ಲೆಯ ಸಾರ್ವಜನಿಕರ ದಿನನಿತ್ಯದ ವಸ್ತ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ. ರಾಜು ಕೆ. ಸಹಾಯಕ ಕಮಿಷನರ್ ಕುಂದಾಪುರ ಮೊ.ಸಂ.8762823984, ಭುವನೇಶ್ವರಿ ಮೊ.ಸಂ 9448999225, ಗಜೇಂದ್ರ ಮೊ.ಸಂ. 9845154263, ಗೋಪಾಲ್ ಕಾಕನೂರ್ ಕಾರ್ಕಳ ಮೊ.ಸಂ 9886925800, ಗಾಯತ್ರಿ ಉಡುಪಿ ಮೊ.ಸಂ.9900599335, ದೀಪ್ತಿ ಕುಂದಾಪುರ 9663858151 ಇವರನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts