More

    ರಾಜಧಾನಿಯ ಈ ಮೇಲ್ಸೇತುವೆ ಮೇಲೆ ದಿನಕ್ಕೆ 5 ಗಂಟೆ ಸಂಚಾರ ನಿರ್ಬಂಧ

    ಬೆಂಗಳೂರು: ರಾಜಧಾನಿಯ ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಮೇಲೆ ನಿತ್ಯ ಐದು ಗಂಟೆಗಳ ಕಾಲ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯ ಕನ್ನಮೆಟಲ್ ಮೀಡಿಯಾ ಅಪ್ಟರ್ ರ‌್ಯಾಂಪ್​ನಿಂದ ಎಸ್‌ಆರ್‌ಎಸ್ ಡೌನ್ ರ‌್ಯಾಂಪ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ರಾತ್ರಿ 12ರಿಂದ ಬೆಳಗ್ಗೆ 5ರವರೆಗೆ ಲಘು ವಾಹನ ಸಂಚಾರ ಸೇರಿ ಎಲ್ಲ ಬಗೆಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

    ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕೆನ್ನಮೆಟಲ್ ವೀಡಿಯಾ ಅಪ್ಟರ್ ರ‌್ಯಾಂಪ್‌ನಿಂದ ಎಸ್.ಆರ್.ಎಸ್ ಡೌನ್ ರ‌್ಯಾಂಪ್ ಕಡೆಗೆ ಸಾಗುವ ವಾಹನಗಳು ಕೆನ್ನಮೆಟಲ್ ವೀಡಿಯಾದಿಂದ ಸರ್ವೀಸ್ ರಸ್ತೆ ಮೂಲಕ 8 ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ವೃತ್ತ, ಎಸ್.ಆರ್.ಎಸ್ ಜಂಕ್ಷನ್ ಮೂಲಕ ಗೊರಗುಂಟೆ ಪಾಳ್ಯ ತಲುಪಬಹುದು.

    ಅದೇ ರೀತಿಯಲ್ಲಿ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್ ವಿಡಿಯಾ ತಲುಪಲು ಸರ್ವೀಸ್ ರಸ್ತೆಯಲ್ಲಿ ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ವೃತ್ತ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ , 8ನೇ ಮೈಲಿ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

    ನೈಸ್ ರಸ್ತೆ ಮೂಲಕ ಬೆಂಗಳೂರು ಪ್ರವೇಶ: ಗೊರಗುಂಟೆ ಪಾಳ್ಯದಿಂದ ಮೇಲ್ಸೇತುವೆ ಮೂಲಕ ಸಾಗುವ ವಾಹನಗಳು ವರ್ತುಲ ರಸ್ತೆ ಮೂಲಕ ಸಾಗಲು ಹಾಗೂ ತುಮಕೂರು ಕಡೆಯಿಂದ ಬೆಂಗಳೂರು ನಗರ ಪ್ರವೇಶಿಸುವ ವಾಹನಗಳು ಮಾದಾವರ ಬಳಿ ನೈಸ್ ರಸ್ತೆ ಮೂಲಕ ಬೆಂಗಳೂರು ನಗರಕ್ಕೆ ಆಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

    ಸಂಚಾರ ನಿರ್ಬಂಧಕ್ಕೆ ಕಾರಣವೇನು?: ರಾತ್ರಿ ವೇಳೆ ವಾಹನಗಳು ಹೆಚ್ಚು ವೇಗವಾಗಿ ಚಲಿಸುವುದರಿಂದ ಮೇಲ್ಸೇತುವೆಯ ವೀಡಿಯಾ ಅಪ್ಪರ್ ರ‌್ಯಾಂಪ್ ಮತ್ತು ಎಸ್‌ಆರ್‌ಎಸ್ ಅಪ್ಪರ್ ರ‌್ಯಾಂಪ್ ಬಳಿ ಭಾರಿ ವಾಹನಗಳ ಮಾರ್ಗ ಬದಲಾವಣೆ ಮಾಡುವುದು ಕಷ್ಟವಾಗುತ್ತಿದೆ. ಈಗಾಗಲೇ ಎರಡೂ ಕಡೆಗಳಲ್ಲಿ ಭಾರಿ ವಾಹನಗಳು ಮೇಲ್ಸೇತುವೆ ಪ್ರವೇಶಿಸಲು ಪ್ರಯತ್ನಿಸಿದಾಗ ಹೈಟ್ ರಿಸ್ಟ್ರಿಕ್ಷನ್ ಗ್ಯಾಂಟ್ರಿಗೆ ಡಿಕ್ಕಿ ಹೊಡೆದ ಪರಿಣಾಮ ಅವುಗಳು ಬಾಗಿವೆ. ಜತೆಗೆ ಗ್ಯಾಂಟ್ರಿ ಪದೇಪದೆ ಹಾಳಾಗುತ್ತಿದೆ. ಈ ಎಲ್ಲ ಕಾರಣಗಳಿಂದ ವಾಹನ ಸಂಚಾರ ನಿಷೇಧಿಸಲಾಗಿದೆ.

    52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts