More

    ರಸ್ತೆಯಲ್ಲೇ ಹೊಯ್ಗೆ, ಮಣ್ಣು

    ಮಂಗಳೂರು: ನಗರದ ಕಾಂಕ್ರೀಟ್ ರಸ್ತೆಗಳಲ್ಲಿ ಅಲ್ಲಲ್ಲಿ ಹೊಯ್ಗೆ, ಕಲ್ಲು, ಮಣ್ಣು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದರ ಜತೆಗೆ ದ್ವಿಚಕ್ರ ಸವಾರರ ಪ್ರಾಣಕ್ಕೂ ಸಂಚಕಾರ ಉಂಟಾಗುತ್ತಿದೆ.

    ಮಳೆ ನೀರು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ರಸ್ತೆಯಲ್ಲೇ ಹರಿಯುತ್ತಿದೆ. ಈ ಸಂದರ್ಭ ಕೊಚ್ಚಿಕೊಂಡು ಬಂದ ಮಣ್ಣು, ಹೊಯ್ಗೆ ರಸ್ತೆಯಲ್ಲೇ ನಿಂತಿದೆ. ದ್ವಿಚಕ್ರ ವಾಹನ ಮಾತ್ರವಲ್ಲ ಕಾರು, ಆಟೋರಿಕ್ಷಾ ಮುಂತಾದ ಲಘು ವಾಹನಗಳು ಕೂಡಾ ಸ್ಕಿಡ್ ಆಗಿ ಅಪಘಾತಕ್ಕೆ ಕಾರಣವಾಗುತ್ತಿದೆ.

    ನಗರದ ಬೋಂದೆಲ್ ಚರ್ಚ್ ಬಳಿ, ಕದ್ರಿ ಮೈದಾನದ ಬಳಿ, ಕೂಳೂರು-ಕಾವೂರು ರಸ್ತೆ, ಬಂಟ್ಸ್ ಹಾಸ್ಟೆಲ್, ರಾಷ್ಟ್ರೀಯ ಹೆದ್ದಾರಿ 66 ರ ಕುಂಟಿಕಾನ, ಕೆಪಿಟಿ, ಪಡೀಲ್ ಮುಂತಾದ ಪ್ರಮುಖ ರಸ್ತೆಗಳಲ್ಲಿ ಹೊಯ್ಗೆ ತುಂಬಿಕೊಂಡಿದೆ. ಈ ಹಿಂದೆ ಮಳೆಗೆ ರಸ್ತೆಯಲ್ಲಿ ಮಣ್ಣು, ಹೊಯ್ಗೆ ತುಂಬಿದ್ದನ್ನು ಪಾಲಿಕೆ ತೆಗೆದು ಶುಚಿಗೊಳಿಸಿತ್ತು. ರಸ್ತೆಯಿಂದ ತೆಗೆದಷ್ಟು ಮತ್ತೆ ಮಳೆ ನೀರಿನೊಂದಿಗೆ ಹೊಯ್ಗೆ ಕೊಚ್ಚಿಕೊಂಡು ಬಂದು ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತದೆ.

    ಬ್ರೇಕ್ ಹಾಕಿದರೆ ಸ್ಕಿಡ್: ದ್ವಿಚಕ್ರ ವಾಹನ ಸವಾರರು: ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ. ರಸ್ತೆಯಲ್ಲಿರುವ ಹೊಯ್ಗೆ, ಮಣ್ಣಿನ ಮೇಲೆ ಬ್ರೇಕ್ ಹಾಕುವುದನ್ನು ತಪ್ಪಿಸಿ. ಏಕೆಂದರೆ ಬ್ರೇಕ್ ಹಾಕಿದ ತಕ್ಷಣ ವಾಹನ ಸ್ಕಿಡ್ ಆಗಿ ಬೀಳುವ ಸಾಧ್ಯತೆ ಹೆಚ್ಚು. ರಾತ್ರಿ ವೇಳೆ ರಸ್ತೆಯಲ್ಲಿ ಹೊಯ್ಗೆ ಇರುವುದು ಗಮನಕ್ಕೆ ಬರುವುದಿಲ್ಲ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ.

    ಅಲ್ಲಲ್ಲಿ ಗುಂಡಿ: ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಇರುವ ಗುಂಡಿಗಳು ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕುತ್ತು ಉಂಟು ಮಾಡುತ್ತಿವೆ. ಕಾಂಕ್ರೀಟ್ ರಸ್ತೆ ತುಂಡರಿಸಿದ್ದಲ್ಲಿ ಗುಂಡಿ ಉಂಟಾಗಿ ಅಪಾಯಕಾರಿಯಾಗಿದೆ. ಪಾಲಿಕೆ ಈ ಕಡೆಗೆ ಗಮನ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts