More

    ಬಿಜೆಪಿಯಲ್ಲಿ ವೀರಶೈವ ಲಿಂಗಾಯತರನ್ನು ತುಳಿಯಲಾಗುತ್ತಿದೆ: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ

    ಹುಬ್ಬಳ್ಳಿ: ಬಿಜೆಪಿಯಲ್ಲಿ ಪರೋಕ್ಷವಾಗಿ ಹಾಗೂ ವ್ಯವಸ್ಥಿತವಾಗಿ ವೀರಶೈವ ಲಿಂಗಾಯತರನ್ನು ತುಳಿಯುವ ಕೆಲಸವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​ ಹೇಳಿದರು.

    ರಾಜಿನಾಮೆ ಕೊಡುತ್ತೇನೆ
    ಶಿರಸಿಗೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಜಗದೀಶ ಶೆಟ್ಟರ್ ಮಾತನಾಡಿದರು. ಶಿರಸಿಗೆ ತೆರಳುತ್ತಿದ್ದೇನೆ. ಸ್ಪೀಕಪ್​ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರ ಬಳಿ ಸಮಯ ಕೇಳಿದ್ದೇನೆ ಮತ್ತು ಬೆಳಗ್ಗೆ 10.30ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ಇಂದು ರಾಜಿನಾಮೆ ನೀಡುತ್ತೇನೆ. ರಾಜ್ಯಾದ್ಯಕ್ಷರ ಜತೆ ಮಾತಾಡಿದ್ದೇನೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಕೊಡುತ್ತೇನೆ ಎಂದು ಶೆಟ್ಟರ್​ ಹೇಳಿದರು.

    ಇದನ್ನೂ ಓದಿ: ಬರ್ತಡೇ ಆಚರಣೆ ಬಳಿಕ ಪ್ರೇಯಸಿ ಹತ್ಯೆ ಕೇಸ್​: ವಿಚಾರಣೆಯಲ್ಲಿ ಮತ್ತಷ್ಟು ಭಯಾನಕ ಸಂಗತಿ ಬಯಲು

    ಹಿಂದೆ ಸರಿಯು ಮಾತೇ ಇಲ್ಲ
    ರಾಜೀನಾಮೆ ನೀಡಿ ವಾಪಸ್ ಬಂದು ಹಿತೈಷಿಗಳ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ. ಇಲ್ಲಿ ಯಾವುದೇ ಕೊನೆಯ ವಿಸ್ಮಯ ನಡೆಯಲ್ಲ. ಒಂದು ಹೆಜ್ಜೆ ಮುಂದೆ ಇಟ್ಟಿದ್ದೀನಿ ಮತ್ತು ಹಿಂದೆ ಸರಿಯು ಮಾತೇ ಇಲ್ಲ ಎಂದರು.

    ತೀರ್ಮಾನ ಮಾಡಿದಂತಿದೆ
    ಕಾಂಗ್ರೆಸ್ ಸೇರ್ಪಡೆ ವಿಚಾರ ಸೇರಿದಂತೆ ಎಲ್ಲ ಆಯ್ಕೆಗಳು ಮುಕ್ತವಾಗಿವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಪ್ರಧಾನಿ ಮೋದಿ ಹಾಗೂ ಅಮಿತ್ ಷಾಗೆ ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿಗಳು, ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರುವುದು ಬೇಡ ಅಂತಾ ತೀರ್ಮಾನ ಮಾಡಿದಂತಿದೆ ಎಂದರು.

    ಬಿಜೆಪಿಗೆ ಮುಳುವಾಗುತ್ತದೆ
    ಕಾಂಗ್ರೆಸ್‌ನ ಮುಖಂಡರು ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಆದರೆ ಪ್ರತಿನಿಧಿ ಕಳಿಸಿದ್ದಾರೆ. ಕೆಲವರ ಹಿತಕ್ಕಾಗಿ ಬಿಜೆಪಿಯನ್ನು ಬಲಿ‌ಕೊಡುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡದೇ ಇರುವುದು ಬಿಜೆಪಿಗೆ ಮುಳುವಾಗುತ್ತದೆ. ನಾನು ಎಲ್ಲ ಜಾತಿ, ಧರ್ಮದ ಜನರನ್ನು ಸಮಾನವಾಗಿ ಕಂಡಿದ್ದೇನೆ. ಬಿಜೆಪಿ ಮುಖಂಡರಿಗೆ ಹಿರಿಯರ ಜತೆ ಮಾತಾಡುವ ಸೌಜನ್ಯವಿಲ್ಲ. ಟೇಕನ್ ಇಟ್ ಗ್ರ್ಯಾಂಟೆಡ್ ಅನ್ನೋ ಹಾಗೆ ಮಾತಾಡಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ಇದು ಜಾಬ್​ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ

    ಕಾನೂನು ವ್ಯಾಪ್ತಿಯೊಳಗೆ ಇದ್ದೇನೆ
    ಬಿಜೆಪಿಯಲ್ಲಿ ಪರೋಕ್ಷವಾಗಿ ವ್ಯವಸ್ಥಿತವಾಗಿ ವೀರಶೈವ ಲಿಂಗಾಯಕತರನ್ನು ತುಳಿಯುವ ಕೆಲಸವಾಗುತ್ತಿದೆ. ಹಿರಿಯ ನಾಯಕರನ್ನು ಕಟ್ಟಿ ಹಾಕುವ ಕೆಲಸಗಳನ್ನು ಮಾಡಲಾಗುತ್ತಿದೆ. ನಾನು ಕಾನೂನು ವ್ಯಾಪ್ತಿಯೊಳಗೆ ಇದ್ದೇನೆ, ಹೀಗಾಗಿ ನನಗೆ ಯಾವುದೇ ಭಯವಿಲ್ಲ ಎನ್ನುವ ಮೂಲಕ ಐಟಿ, ಇಡಿ ದಾಳಿ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

    ಸದ್ಯ ಜಗದೀಶ ಶೆಟ್ಟರ್​ ಹುಬ್ಬಳ್ಳಿಯಿಂದ ಶಿರಸಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಲವು ಬೆಂಬಲಿಗರ ಜೊತೆಗೆ ಶಿರಸಿಗೆ ಹೊರಟಿದ್ದು, ಇಂದು ಶಿರಸಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ನನಸಾಗದ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಕನಸು!;ವರುಣ ಕ್ಷೇತ್ರಕ್ಕೆ ಸೀಮಿತ, ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯಕ್ಕೆ ದೆಹಲಿ ವರಿಷ್ಠರ ಮನ್ನಣೆ

    ಸೇತುವೆಯಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್​ ಟ್ರಾಲಿ: 8 ಅಪ್ರಾಪ್ತರು ಸೇರಿ 11 ಮಂದಿ ದುರ್ಮರಣ

    ಪಾತಕಿ ಅತೀಕ್​, ಸಹೋದರ ಅಶ್ರಫ್​ ಹತ್ಯೆ ಪ್ರಕರಣ: ಪತ್ರಕರ್ತರ ಸೋಗಲ್ಲಿ ಗುಂಡಿನ ದಾಳಿ, ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts