More

    ಭಾರತಕ್ಕೆ ಅಮೆರಿಕದ ಮಿಷನ್ ಡೈರೆಕ್ಟರ್​ ಆಗಿ ವೀಣಾ ರೆಡ್ಡಿ ಕಾರ್ಯಾರಂಭ

    ನವದೆಹಲಿ : ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸುವ ಉದ್ದೇಶವುಳ್ಳ ಅಮೆರಿಕ ಸರ್ಕಾರದ ಯನೈಟೆಡ್​ ಸ್ಟೇಟ್ಸ್ ಏಜೆನ್ಸಿ ಫಾರ್​ ಇಂಟರ್​ನ್ಯಾಷನಲ್ ಡೆವಲಪ್​ಮೆಂಟ್​(ಯುಎಸ್​ಎಐಡಿ) ಸಂಸ್ಥೆಯ ಇಂಡಿಯ ಮಿಷನ್ ಡೈರೆಕ್ಷರ್​ ಆಗಿ ಭಾರತೀಯ ಅಮೆರಿಕನ್ ಆಗಿರುವ ವೀಣಾ ರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಹಿರಿಯ ಫಾರಿನ್ ಸರ್ವೀಸ್ ಅಧಿಕಾರಿಯಾಗಿರುವ ರೆಡ್ಡಿ, ಭಾರತ ಮತ್ತು ಭೂತಾನ್​ಗಳಲ್ಲಿ ಸಂಸ್ಥೆಯ ಚಟುವಟಿಕೆಗಳ ನೇತೃತ್ವ ವಹಿಸಲು ನವದೆಹಲಿಯ ಕಛೇರಿಗೆ ಇಂದು ಆಗಮಿಸಿದ್ದಾರೆ.

    ಅಮೆರಿಕದ ಅಂಬಾಸಿಡರ್ ಅತುಲ್​ ಕಶ್ಯಪ್ ಅವರು ಈ ಬಗ್ಗೆ ತಿಳಿಸಿದ್ದು, ಮತ್ತೊಬ್ಬ ಭಾರತೀಯ ಅಮೆರಿಕನ್​ ಈ ಜವಾಬ್ದಾರಿ ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ. ಆಂಧ್ರಪ್ರದೇಶ ಮೂಲದವರಾದ ವೀಣಾ ರೆಡ್ಡಿ ಕಾಂಬೋಡಿಯ ಮತ್ತು ಹಯಾಟಿಗಳಲ್ಲಿ ಯುಎಸ್​ಎಐಡಿ ಮಿಷನ್ ಡೈರೆಕ್ಟರ್ ಆಗಿ ಅನುಭವ ಹೊಂದಿದ್ದಾರೆ. ವಕೀಲರಾಗಿ ವೃತ್ತಿ ಆರಂಭಿಸಿದ್ದ ಅವರು, ಏಷಿಯಾ ಮತ್ತು ಮಿಡಲ್​ಈಸ್ಟ್​ಗೆ ಸಂಬಂಧಿಸಿದ ಸಂಸ್ಥೆಯ ಕಾನೂನು ವಿಚಾರಗಳನ್ನು ಕೂಡ ನಿರ್ವಹಿಸಿದ್ದಾರೆ ಎಂದು ಅಮೆರಿಕ ಎಂಬೆಸಿಯ ಹೇಳಿಕೆ ತಿಳಿಸಿದೆ.

    ಇದನ್ನೂ ಓದಿ: ಜಮೀರ್​ ನಿವಾಸಕ್ಕೆ ಇಡಿ ದಾಳಿ: ಸಿಎಂ ಬೊಮ್ಮಾಯಿ ಹೇಳಿದ್ದೇನು?

    “ಕಳೆದ 7 ವರ್ಷಗಳಿಂದ ಯುಎಸ್​ಎಐಡಿ ಭಾರತೀಯರೊಂದಿಗೆ ಕೆಲಸ ಮಾಡುತ್ತಿದೆ. ಈ ಸಂಬಂಧವನ್ನು ಇನ್ನೂ ಬಲಪಡಿಸುವತ್ತ ನನ್ನ ಪ್ರಯತ್ನ ಇರುತ್ತದೆ. ಕರೊನಾ ಸವಾಲನ್ನು ಎದುರಿಸುವುದರೊಂದಿಗೆ, ಅಮೆರಿಕ-ಭಾರತ ಪಾಲುಗಾರಿಕೆಯು ಸಮೃದ್ಧಿಯತ್ತ ಮುನ್ನಡೆಯುತ್ತದೆ ಎಂದು ಆಶಿಸುತ್ತೇನೆ” ಎಂದು ವೀಣಾ ರೆಡ್ಡಿ ಹೇಳಿದ್ದಾರೆ. ಯುಎಸ್​ಎಐಡಿ ಸಂಸ್ಥೆಯು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ಒದಗಿಸುವಲ್ಲಿ ಮತ್ತು ಕರೊನಾಗೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡುವಲ್ಲಿ ಸರ್ಕಾರ, ಖಾಸಗಿ ಕ್ಷೇತ್ರ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಐಟಿ ಕಾಯ್ದೆಯಡಿ ದೂರು ಯಾಕೆ ಸಲ್ಲಿಸಿಲ್ಲ?’ – ಪೆಗಾಸಸ್ ವಿಚಾರಣೆಯಲ್ಲಿ ಸುಪ್ರೀಂ ಪ್ರಶ್ನೆ

    ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ಗೆ ಮತ್ತೊಂದು ಶಾಕ್! ಪ್ರಶಾಂತ್​ ಕಿಶೋರ್​ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts