‘ಐಟಿ ಕಾಯ್ದೆಯಡಿ ದೂರು ಯಾಕೆ ಸಲ್ಲಿಸಿಲ್ಲ?’ – ಪೆಗಾಸಸ್ ವಿಚಾರಣೆಯಲ್ಲಿ ಸುಪ್ರೀಂ ಪ್ರಶ್ನೆ

ನವದೆಹಲಿ : ಪೆಗಾಸಸ್​ ಬೇಹುಗಾರಿಕೆ ಸಾಫ್ಟ್​ವೇರ್​ನಿಂದ ವಿಪಕ್ಷ ರಾಜಕಾರಣಿಗಳ ಮತ್ತು ಪತ್ರಕರ್ತರ ಫೋನ್​ಗಳನ್ನು ಹ್ಯಾಕ್​ ಮಾಡುಲಾಗುತ್ತಿದೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಿಂದ ಹಿಡಿದು, ಸಂಸತ್​ವರೆಗೆ ದೇಶದಲ್ಲಿ ಸಂಚಲನ ಮೂಡಿಸಿದೆ. ಹೀಗಿರುವಾಗ ಪೆಗಾಸಸ್ ಪ್ರಕರಣದ ಬಗ್ಗೆ ವಿಶೇಷ ತನಿಖೆ ಆದೇಶಿಸಬೇಕೆಂದು ಕೋರಿ ಹಲವು ರಿಟ್​ ಅರ್ಜಿಗಳು ಸುಪ್ರೀಂ ಕೋರ್ಟ್​ ಮುಂದೆ ವಿಚಾರಣೆಗೆ ಬಂದಿವೆ. ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್​ ಅವರನ್ನೊಳಗೊಂಡ ನ್ಯಾಯಪೀಠವು, ಹಿರಿಯ ಪತ್ರಕರ್ತ ಎನ್​.ರಾಮ್​ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತು. … Continue reading ‘ಐಟಿ ಕಾಯ್ದೆಯಡಿ ದೂರು ಯಾಕೆ ಸಲ್ಲಿಸಿಲ್ಲ?’ – ಪೆಗಾಸಸ್ ವಿಚಾರಣೆಯಲ್ಲಿ ಸುಪ್ರೀಂ ಪ್ರಶ್ನೆ