More

    ಅಮೆರಿಕದ ಶ್ವೇತಭವನದಲ್ಲಿ ಮೊಳಗಿತು ವೇದ ಮಂತ್ರ ಘೋಷ- ಪುರೋಹಿತರ ಆಹ್ವಾನಿಸಿದ ಟ್ರಂಪ್​

    ವಾಷಿಂಗ್ಟನ್: ಇಂದು ಅಮೆರಿಕದ ಕರೊನಾ ಸೋಂಕಿನಿಂದ ನಲುಗಿಹೋಗಿದೆ. ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಇರುವ ಸೋಂಕು ಒಂದೆಡೆಯಾದರೆ, ಈ ಮಹಾಮಾರಿ ಸಹಸ್ರಾರು ಮಂದಿಯನ್ನು ಬಲಿ ಪಡೆಯುತ್ತಲೇ ಇದೆ. ಕರೊನಾ ಮಾರಿಯನ್ನು ಓಡಿಸಲು ಮಾಡುತ್ತಿರುವ ಪ್ರಯತ್ನಗಳೆಲ್ಲವೂ ಒಂದೊಂದಾಗಿ ಕಮರುತ್ತಿರುವ ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೀಗ ಭಾರತೀಯ ವೇದ ಮಂತ್ರಗಳ ಮೊರೆ ಹೋಗಿದ್ದಾರೆ!

    ಹೌದು, ಇಂದು ಅಮೆರಿಕದ ಶ್ವೇತಭವನದ ತುಂಬ ವೇದ ಮಂತ್ರಗಳ ಘೋಷ. ಕರೊನಾ ಹೆಮ್ಮಾರಿಯಿಂದ ಛಿದ್ರವಾಗಿರುವ ಮನಸ್ಸಿಗೆ ಶಾಂತಿಯನ್ನು ತುಂಬಲು, ದೇಶದ ಜನರ ಆತಂಕವನ್ನು ದೂರಮಾಡಿ ಎಲ್ಲರಲ್ಲಿಯೂ ಧೈರ್ಯವನ್ನು ತುಂಬುವ ಸಲುವಾಗಿ ಟ್ರಂಪ್​ ಇದೀಗ ಭಾರತೀಯ ಸಂಸ್ಕೃತಿಯ ಮೊರೆ ಹೋಗಿದ್ದರ ಫಲವಿದು.

    ಇದನ್ನೂ ಓದಿ: ಮದ್ಯಕ್ಕೆ ಇನ್ಮುಂದೆ ಆಧಾರ್​ ಕಡ್ಡಾಯ, ವಾರಕ್ಕೆರಡೇ ದಿನ ಖರೀದಿ- ಇದು ಹೈಕೋರ್ಟ್​ ತೀರ್ಪು

    ಸನಾತನ ಸಂಸ್ಕೃತಿಯಿಂದಾಗಿ ಭಾರತ ವಿಶ್ವಗುರುವಾಗುತ್ತಿದೆ ಎಂಬ ಮಾತು ಇತ್ತೀಚಿನ ವರ್ಷಗಳಲ್ಲಿ ಕೇಳಿಬರುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಟ್ರಂಪ್​, ತಮ್ಮ ಅಧಿಕೃತ ಕಚೇರಿ ಶ್ವೇತಭವನಕ್ಕೆ ನ್ಯೂಜೆರ್ಸಿಯ ಸ್ವಾಮಿನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಬ್ರಹ್ಮಭಟ್ ಅವರನ್ನು ಆಹ್ವಾನಿಸಿದ್ದರು. ಅವರು ಇಂದು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ವೇದ ಮಂತ್ರಗಳನ್ನು ಪಠಿಸಿದರು.

    ಅರ್ಚಕರು ಸಂಸ್ಕೃತದಲ್ಲಿ ಪಠಿಸಿದ ಯಜುರ್ವೇದದ ‘ಶಾಂತಿ ಪಥ’ ಶ್ಲೋಕದ ಅರ್ಥವನ್ನು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಿ ಅಲ್ಲಿ ಹಾಜರಿದ್ದ ಟ್ರಂಪ್​, ಅವರ ಪತ್ನಿ ಮೆಲನಿಯಾ ಟ್ರಂಪ್ ಹಾಗೂ ಇತರರಿಗೆ ತಿಳಿಸಲಾಯಿತು. ರಾಷ್ಟ್ರೀಯ ಪ್ರಾರ್ಥನಾ ಸೇವೆ ದಿನದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಇದನ್ನೂ ಓದಿ: ಟಿಕ್​ಟಾಕ್​ನಲ್ಲಿ ಕಣ್ಸನ್ನೆ ಸುಂದರಿಯ ಝಲಕ್​ ನೋಡಿ…

    ಕಾರ್ಯಕ್ರಮದ ನಂತರ ಮಾತನಾಡಿದ ಟ್ರಂಪ್​, ವಿಶ್ವ ಶಾಂತಿಯೊಂದೇ ಮಾನವ ಜನಾಂಗದ ಅಭ್ಯುದಯಕ್ಕೆ ಇರುವ ಏಕೈಕ ಮಾರ್ಗ ಎಂದರು. ಈ ವೇಳೆ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಕೂಡ ಈ ವೇಳೆ ಹಾಜರಿದ್ದರು.

    ಅಮೆರಿಕಕ್ಕೆ ಸಂಕಷ್ಟ ಬಂದಾಗಲೆಲ್ಲಾ ದೇವರ ಮೊರೆ ಹೋಗಲಾಗುತ್ತದೆ. ಈಗಲೂ ಅದೇ ಕೆಲಸ ಮಾಡುತ್ತಿದ್ದೇವೆ. ಈ ಸಂಕಷ್ಟದಿಂದ ಹೊರಬರಲು ಆ ದೇವರು ಶಕ್ತಿ ದಯಪಾಲಿಸುತ್ತಾನೆಂಬ ವಿಶ್ವಾಸ ಇದೆ ಎಂದು ಟ್ರಂಪ್ ಹೇಳಿದರು. ಕರೊನಾ ವೈರಸ್​ನಿಂದಾಗಿ ಮೃತಪಟ್ಟ ಕುಟುಂಬಕ್ಕಾಗಿ ಕಂಬನಿ ಮಿಡಿದ ಮೆಲನಿಯಾ ಟ್ರಂಪ್​, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದರು.

    ಇದನ್ನೂ ಓದಿ: ತಾಯಿಯನ್ನು ಜೀವಂತ ಸಮಾಧಿ ಮಾಡಿದ ಮಗ, 3 ದಿನಗಳ ನಂತರ ಕಾದಿತ್ತೊಂದು ಅಚ್ಚರಿ!

    ಅಮೆರಿಕದಲ್ಲಿ ಹಿಂದೂ ಧಾರ್ಮಿಕ ಮಂತ್ರಪಠಣ ಹಿಂದಿನಿಂದಲೂ ನಡೆದು ಬಂದಿದೆ. 2008ರಲ್ಲಿ ವಾಷಿಂಗ್ಟನ್ ರಾಜ್ಯದ ವಿಧಾನಸಭೆಯ ಅಧಿವೇಶನವನ್ನು ಹಿಂದೂ ಮಂತ್ರೋಚ್ಛಾರದ ಮೂಲಕ ಆರಂಭಿಸಲಾಗಿತ್ತು. ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಶ್ವೇತ ಭವನದಲ್ಲಿ ಹಲವು ಬಾರಿ ವೇದ ಮಂತ್ರ ಪಠಣವಾಗಿದೆ. ಕೆಲವು ವರ್ಷಗಳಿಂದ ಅಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

    ವೇದ ಮಂತ್ರ ಪಠಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ಅಮೆರಿಕದಲ್ಲಿ ಕೋವಿಡ್ ಬಿಕ್ಕಟ್ಟನ್ನು ನೀಗಿಸಲು ವೈದ್ಯರು ಹರಸಾಹಸ ಮಾಡುತ್ತಿರುವಾಗ ಅಧ್ಯಕ್ಷರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಟ್ರಂಪ್ ರಾಜೀನಾಮೆ ನೀಡುವಂತಾಗಲಿ ಎಂದು ತಾವು ಕೂಡ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಸಿಡಿಮಿಡಿಗೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts