More

    ಬೆಳಿಗ್ಗೆ 5ಕ್ಕೇ ಶುರುವಾಗಲಿದೆ ‘ವೇದ’ ಚಿತ್ರದ ಮೊದಲ ಪ್ರದರ್ಶನ

    ಬೆಂಗಳೂರು: ಶಿವರಾಜಕುಮಾರ್​ ಅವರ 125ನೇ ಚಿತ್ರವಾದ ‘ವೇದ’ ಬಿಡುಗಡೆಯಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇನ್ನು 20 ದಿನಗಳು ಮಾತ್ರ ಬಾಕಿ ಇವೆ. ಇದೇ ತಿಂಗಳ 23ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅಡ್ವಾನ್ಸ್​ ಬುಕ್ಕಿಂಗ್​ ಪ್ರಾರಂಭವಾಗಿದೆ.

    ಇದನ್ನೂ ಓದಿ: ಸೆನ್ಸಾರ್​ನಿಂದ ಗ್ರೀನ್​ ಸಿಗ್ನಲ್​; ಜನವರಿ 6ಕ್ಕೆ ಬಿಡುಗಡೆಯಾಗಲಿದೆ ‘ವೈಶಂಪಾಯನ ತೀರ’

    ವಿಶೇಷವೆಂದರೆ, ‘ವೇದ’ ಚಿತ್ರದ ಮೊದಲ ಪ್ರದರ್ಶನ ರಾಜ್ಯದ ಹಲವು ಕಡೆ ಬೆಳಿಗ್ಗೆ ಐದರಿಂದಲೇ ಪ್ರಾರಂಭವಾಗಲಿದೆ. ಕನ್ನಡ ಚಿತ್ರಗಳ ಮೊದಲ ಪ್ರದರ್ಶನ ಮಧ್ಯರಾತ್ರಿ ಅಥವಾ ಬೆಳಗಿನ ಜಾವ ಶುರುವಾಗುವುದು ಹೊಸ ವಿಷಯವೇನಲ್ಲ. ಈಗಾಗಲೇ ಹಲವು ಚಿತ್ರಗಳು ಮಾಮೂಲಿ ಬೆಳಗಿನ ಪ್ರದರ್ಶನಕ್ಕಿಂತ ಮುಂಚಿತವಾಗಿ ಪ್ರಾರಂಭವಾಗಿವೆ. ಆದರೆ, ಹೀಗಾಗಿ ಒಂದಿಷ್ಟು ಸಮಯವೇ ಆಗಿದೆ. ಸುದೀಪ್​ ಅಭಿನಯದ ‘ವಿಕ್ರಾಂತ್​ ರೋಣ’ ಚಿತ್ರವು ಕೊನೆಯದಾಗಿ ಬೆಳಗಿನ ಜಾವ ಬಿಡುಗಡೆಯಾಗಿತ್ತು.

    ಈಗ ‘ವೇದ’ ಚಿತ್ರವು ಗೌಡನಪಾಳ್ಯದ ಶ್ರೀನಿವಾಸ, ಮಾಗಡಿ ರೋಡ್​ ಪ್ರಸನ್ನ ಮತ್ತು ಜೆ.ಪಿ. ನಗರದ ಸಿದ್ಧೇಶ್ವರ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ ಐದು ಗಂಟೆಗೆ ಪ್ರಾರಂಭವಾಗಲಿವೆ. 6 ಮತ್ತು 7 ಗಂಟೆಗೂ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ‘ವೇದ’ ಚಿತ್ರವು ಶಿವರಾಜಕುಮಾರ್​ ಪಾಲಿಗೆ ವಿಶೇಷವಾಗಿರುವುದರಿಂದ, ಅವರು ಅಂದು ಕೆಲವು ಚಿತ್ರಮಂದಿರಗಳಿಗೆ ಭೇಟಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ವೇದ’ ಚಿತ್ರಕ್ಕೆ ‘ದಿ ಬ್ರೂಟಲ್​ ಸಿಕ್ಸ್ಟೀಸ್​’ ಎಂಬ ಅಡಿಬರಹ ಇದ್ದು, ಈ ಚಿತ್ರವು 1960ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ. ರೌಡಿಸಂ ಜತೆಗೆ ಚಿತ್ರದಲ್ಲಿ ಮಾಟ-ಮಂತ್ರ ಮತ್ತು ಆತ್ಮದ ಛಾಯೆ ಮತ್ತೊಮ್ಮೆ ಕಾಣಿಸುತ್ತದೆ. ಶಿವರಾಜಕುಮಾರ್​, ಗಾನವಿ ಲಕ್ಷ್ಮಣ್​, ಉಮಾಶ್ರೀ, ಅದಿತಿ ಸಾಗರ್​, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ರಾಘು ಶಿವಮೊಗ್ಗ, ಚೆಲುವರಾಜ್​ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಸ್ವಾಮಿ ಗೌಡ ಛಾಯಾಗ್ರಹಣ ಮಾಡಿದ್ದಾರೆ.

    ಇದನ್ನೂ ಓದಿ: ಡಿ. 30ಕ್ಕೆ ನಾಲ್ಕರ ಜತೆಗೆ ಇನ್ನೊಂದು; ಈ ಚಿತ್ರಕ್ಕೆ ಕಥೆಯೇ ಹೀರೋ …

    ‘ವೇದ’ ಚಿತ್ರವು ಗೀತಾ ಶಿವರಾಜಕುಮಾರ್​ ನಿರ್ಮಾಣದ ಮೊದಲ ಚಿತ್ರವಾಗಿದ್ದು, ಇದನ್ನು ಅವರು ಗೀತಾ ಆರ್ಟ್ಸ್​ ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ನಿರ್ಮಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ಕಥೆ-ಚಿತ್ರಕಥೆಯನ್ನೂ ಹರ್ಷ ಬರೆದಿದ್ದಾರೆ.

    ಈ ವರ್ಷ ಯಾವ ಚಿತ್ರದ ಗಳಿಕೆ ಎಷ್ಟು? ಇಲ್ಲಿದೆ ಟಾಪ್​ 5 ಪಟ್ಟಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts