More

    ಸೆನ್ಸಾರ್​ನಿಂದ ಗ್ರೀನ್​ ಸಿಗ್ನಲ್​; ಜನವರಿ 6ಕ್ಕೆ ಬಿಡುಗಡೆಯಾಗಲಿದೆ ‘ವೈಶಂಪಾಯನ ತೀರ’

    ಬೆಂಗಳೂರು: ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಜನಪ್ರಿಯ ಕಥೆಗಳಲ್ಲೊಂದಾದ ‘ವೈಶಂಪಾಯನ ತೀರ’ವನ್ನು ಮಲೆನಾಡಿನ ಸಾಂಸ್ಕೃತಿಕ ಸಂಘಟಕ ರಮೇಶ್​ ಬೇಗಾರ್​ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಕೇಳಿ ಬಂದಿತ್ತು. ಈಗ ಚಿತ್ರ ಮುಗಿದಿರುವುದಷ್ಟೇ ಅಲ್ಲ, ಜನವರಿ 06ಕ್ಕೆ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಥಗ್ಸ್ ಆಫ್ ರಾಮಘಡ’ ಚಿತ್ರತಂಡಕ್ಕೆ ‘ಡಾಲಿ’ ಧನಂಜಯ್​ ಸಾಥ್ …

    ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಆರ್. ಸುರೇಶಬಾಬು ನಿರ್ಮಿಸಿರುವ ‘ವೈಶಂಪಾಯನ ತೀರ’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿರುವ ಸೆನ್ಸಾರ್​ ಮಂಡಳಿಯು ಯಾವುದೇ ಕಟ್​ ಅಥವಾ ಮ್ಯೂಟ್​ಗಳಿಲ್ಲದೆ ‘ಯು’ ಪ್ರಮಾಣಪತ್ರ ನೀಡಿದೆ.

    ಈ ಸಿನಿಮಾದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ಕುತೂಹಲಕರ ಧಾಟಿಯಲ್ಲಿ ನಿರೂಪಿಸಲಾಗಿದೆ. ಸಂಪೂರ್ಣವಾಗಿ ಮಲೆನಾಡ ಭಾಷೆ, ಜನಜೀವನ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಬಹುತೇಕ ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿನ ಹತ್ತಾರು ರಂಗಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

    ಪ್ರಮೋದ್​ ಶೆಟ್ಟಿ, ವೈಜಯಂತಿ ಅಡಿಗ, ರಮೇಶ್​ ಭಟ್​, ರಮೇಶ್​ ಪಂಡಿತ್​, ಬಾಬು ಹಿರಣ್ಣಯ್ಯ, ಶೃಂಗೇರಿ ರಾಮಣ್ಣ, ಗುರುರಾಜ ಹೊಸಕೋಟೆ ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್‌ ಪೈ ಮತ್ತು ಸಂತೋಷ್‌ ಪೈ ಸಹ ನಟಿಸಿದ್ದಾರೆ.

    ಇದನ್ನೂ ಓದಿ: 6 ರಥ, 13 ದಿನ, 7000 ಕಿಮೀ … ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆಗೆ 20ಕ್ಕೆ ಚಾಲನೆ

    ‘ವೈಶಂಪಾಯನ ತೀರ’ ಚಿತ್ರಕ್ಕೆ ಶ್ರೀನಿಧಿ ಕೊಪ್ಪ ಸಂಗೀತ ಮತ್ತು ಶಿಶಿರ ಛಾಯಾಗ್ರಹಣವಿದೆ.

    ಈ ವರ್ಷ ಯಾವ ಚಿತ್ರದ ಗಳಿಕೆ ಎಷ್ಟು? ಇಲ್ಲಿದೆ ಟಾಪ್​ 5 ಪಟ್ಟಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts