More

    ವೇದ ದರ್ಶನ: ನಚಿಕೇತನ ಮೃತ್ಯುಗಮನ ನಿರ್ಧಾರ

    ಪಸ್ವಿಯಾಗಿದ್ದ ವಾಜಶ್ರವಸನ ಮಾತು (‘‘ಮೃತ್ಯುವಿಗೆ ಕೊಡುತ್ತೇನೆ’’) ಸುಳ್ಳಾಗುವಂತಿರಲಿಲ್ಲ. ಮೃತ್ಯುವಿಗೆ ಕೊಟ್ಟ ದಾನ ಕೊಟ್ಟದ್ದೇ ಆಗಿತ್ತು. ನಚಿಕೇತನಲ್ಲಿ ಆವಿರ್ಭವಿಸಿದ್ದ ‘‘ಶ್ರದ್ಧೆ’’ಯು, ತನ್ನ ತಂದೆಯ ಮಾತಿನಲ್ಲಿ ಅವನು ಏನನ್ನೂ ವ್ಯತ್ಯಾಸವಾಗಿ ಗ್ರಹಿಸದಂತೆ ಮಾಡಿತು. ಅಂದರೆ ‘‘ಇದು ಕೋಪದ ಮಾತು’’ ಎಂದು ತಿಳಿಯಲೇ ಇಲ್ಲ. ಬದಲಾಗಿ ‘‘ಸದ್ಯ, ಇದೊಂದು ದಾನಕ್ಕದರೂ ತಂದೆ ಸಂಮ್ಮತಿಸುವಂತಾಯಿತಲ್ಲ!’’ ಎಂದು ಸಂತೋಷವೇ ಆಗಿರಬೇಕು. ದೇವರು, ದೇವತೆಗಳ ಅಸ್ತಿತ್ವದಲ್ಲಿ ದೃಢವಿಶ್ವಾಸಿಯಾಗಿದ್ದ ಅವನಿಗೆ ಈಗ ಮುಂದೆ ಇದ್ದುದು ಒಂದೇ ವಿಚಾರ: ‘‘ತನ್ನ ಆತ್ಮದಾನ ಸಾರ್ಥಕವಾಗಬೇಕು. ಇದಾದ ಹೊರತು ಯಾಗ ಸಾಫಲ್ಯವಿಲ್ಲ.’’ ಆದರೆ ‘‘ಯಮದೇವತೆಗೆ (ಮೃತ್ಯುವಿಗೆ) ತನ್ನಿಂದೇನು ಪ್ರಯೋಜನ?’’ ಎಂಬ ಪ್ರಶ್ನೆ ಅವನನ್ನು ಕಾಡಲು ಆರಂಭಿಸಿತು: ‘‘ಕಿಂ ಸ್ವಿತ್ ಯಮಸ್ಯ ಕರ್ತವ್ಯಂ ಯನ್ಮಯಾದ್ಯ ಕರಿಷ್ಯತಿ |’’ ತಂದೆಯ ಬಗೆಗೆ ಗೌರವ ತಳೆದಿದ್ದ ಅವನಿಗೆ, ಇದಕ್ಕೂ ಏನೋ ಅರ್ಥವಿದ್ದೇ ಇರಬೇಕು ಎನಿಸಿತು. ಅರ್ಥಶೂನ್ಯವೂ, ಅನರ್ಥಮೂಲವೂ ಆದ ತಂದೆಯ ಮಾತು ಕೊನೆಗೂ ಅರ್ಥಪೂರ್ಣವೇ ಆದುದಕ್ಕೆ ನಚಿಕೇತನ ‘‘ಶ್ರದ್ಧೆ’’ಯೇ ಕಾರಣವಾಯಿತು ಎಂದ ಮೇಲೆ, ‘‘ಶ್ರದ್ಧಾ’’ ಅನುಗ್ರಹದಿಂದ ಏನೆಲ್ಲ ಆಗಬಹುದೆಂದು ತಿಳಿಯುವುದಲ್ಲವೇ?

    ವೇದ ದರ್ಶನ: ನಚಿಕೇತನ ಮೃತ್ಯುಗಮನ ನಿರ್ಧಾರನಚಿಕೇತನ ಸ್ವಗತ: ನಚಿಕೇತನು ‘‘ಮೃತ್ಯು’’ಸದನಕ್ಕೆ ಹೊರಡಲು ದೃಢಸಂಕಲ್ಪ ಕೈಗೊಂಡನು. ಇಷ್ಟರಲ್ಲಿ ತನಗೆ ತಾನೇ ಅಂದುಕೊಂಡ ಒಂದು ಮಾತು ಉಪನಿಷತ್ತಿನಲ್ಲಿದೆ: ‘‘ಸಾಯುವವರಲ್ಲಿ (ಮೃತ್ಯುಗಮನ ಮಾಡುವವರಲ್ಲಿ) ನಾನೇನೂ ಕೊನೆಯವನಲ್ಲ. ಇಂತಹ ವಿಚಿತ್ರ ಶ್ರದ್ಧೆಯಿಂದ ಹೋಗುವ ನಾನು ಒಂದು ದೃಷ್ಟಿಯಿಂದ ಮೊದಲನೆಯವನೇ ಆಗಿರಬಹುದು, ಅಥವಾ ನನಗಿಂತ ಮುಂಚೆ ಒಬ್ಬಿಬ್ಬರು ಹೀಗೆಯೇ ಹೋಗಿದ್ದಾರೆಂದು ಇಟ್ಟುಕೊಂಡರೂ, ನಾನು ಕನಿಷ್ಠಪಕ್ಷ, ಮಧ್ಯಮನಾಗಿ ಹೋಗುತ್ತಿರಬಹುದು. ಅಂದರೆ ಸಾಯಲು ನನಗೆ ವ್ಯಥೆಯಿಲ್ಲ. ಆದರೆ, ನಾನು ಅಲ್ಲಿಗೆ ಹೋದದ್ದರಿಂದ ಯಮದೇವತೆಗೆ ಏನು ಪ್ರಯೋಜನ? ಇದಾಗದೆ ನನ್ನ ತಂದೆಯ ಯಾಗ ಸಫಲವಾಗುವುದೆಂತು?’’ ಬಹೂನಾಮೇಮಿ ಪ್ರಥಮಃ ಬಹೂನಾಮೇಮಿ ಮಧ್ಯಮಃ | ಕಿಂಸ್ವಿದ್ಯಮಸ್ಯ ಕರ್ತವ್ಯಂ ಯನ್ಮಯಾದ್ಯ ಕರಿಷ್ಯತಿ || (1.5) ಅಥವಾ ಇದೇ ಸೂಕ್ತಿಗೆ ಹೀಗೂ ಅರ್ಥವಿದೆಯೆಂದು ಬೇರೆ ವ್ಯಾಖ್ಯಾತರು ಬರೆದಿದ್ದಾರೆ: ನಚಿಕೇತನಿಗೆ ಮೃತ್ಯುಲೋಕಗಮನಕ್ಕೆ ದೃಢಬುದ್ಧಿ ಏರ್ಪಟ್ಟಿತ್ತು. ಸಾಯಲು ಹೆದರಿದ ಮಗುವಲ್ಲ, ಅದು. ಆದರೆ ಕ್ಷಣಮಾತ್ರ ಕಾಲ ಒಂದು ಚಿಂತೆ ಕಾಡಿತು: ‘‘ನಾನು ನನ್ನ ತಂದೆಗೆ ಸಿಟ್ಟು ಬರುವಂತೆ ಏನನ್ನಾದರೂ ಮಾಡಿರುವೆನೇ? ಅವನ ಅನೇಕ ಶಿಷ್ಯ ಪುತ್ರಾದಿಗಳಲ್ಲಿ ಪ್ರಥಮ ರೀತಿಯಲ್ಲೇ ನಡೆದುಕೊಂಡಿದ್ದೇನೆ, ನನಗನಿಸಿದ ಮಟ್ಟಿಗೂ. ಅಥವಾ, ಮಧ್ಯಮ ರೀತಿಯಲ್ಲಿ ಆದರೂ ನಡೆದುಕೊಂಡಿರುವೆನೇ ವಿನಾ ಅಧಮ ರೀತಿಯಿಂದ ಎಂದೂ ನಡೆದಿಲ್ಲ. ಹೀಗಿದ್ದೂ ಸಿಟ್ಟಿನ ಭರದಲ್ಲಿ ಯಮನಿಗೆ ನನ್ನನ್ನು ತಂದೆ ಕೊಡಬಹುದೇ? ನನ್ನಿಂದ ಯಮನಿಗೇನು ಪ್ರಯೋಜನ?’’ ಆಗ, ತಾನೇ ತನಗೆ ಸಮಾಧಾನಕ್ಕೆ ಹೇಳಿಕೊಂಡ ಇನ್ನೊಂದು ಮಾತೂ ಉಪನಿಷತ್ತಿನಲ್ಲಿದೆ:

    ‘‘ಅನುಪಶ್ಯ ಯಥಾಪೂರ್ವೆ ಪ್ರತಿಪಶ್ಯ ತಥÝ—ಪರೇ | ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ ||’’ (1-6)

    ‘‘ನಿನಗಿಂತ ಹಿಂದಿನವರೂ ಒಂದು ದಿನ ಹುಟ್ಟಿ, ಮತ್ತೊಂದು ದಿನ ಸತ್ತವರೆಂಬುದನ್ನು ನೋಡು. ಮುಂದೆ ಬರುವವರೂ ಇದೇ ರೀತಿ ಹುಟ್ಟಿ, ಸಾಯುವವರು ಎಂಬುದನ್ನು ಕಾಣು. ಇದೇ ಜೀವನವಾದರೆ, ಸಸ್ಯದಂತೆ, ಮರಣಶೀಲನಾದ ಮಾನವನು ಜೀವನದಲ್ಲಿ ಬೆಂದು, ಸತ್ತು, ಪುನಃ ಹುಟ್ಟುತ್ತಾನೆ.’’ ಇದಕ್ಕೇಕೆ ವ್ಯಥೆ? ಎಂದು ಒಂದು ಭಾವ. ಅಥವಾ ಆರಂಭದಲ್ಲಿ ವಿವರಿಸಿರುವಂತೆ, ‘‘ಇದಲ್ಲದೆ ಜೀವನದಲ್ಲಿ ಅಶಾಶ್ವತದ ನಡುವೆ ಉಳಿದು ಶಾಶ್ವತವಾಗಬಲ್ಲ ಅಂತ ಜೀವನದ ಅಂಶ ಯಾವುದೂ ಇಲ್ಲವೇ?’’ ಎಂಬ ಅಮೃತತ್ತ್ವ ಭೇದನದ ಮಾರ್ವಿುಕ ಧ್ವನಿಯೂ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts