More

    ವಾಟಾಳ್ ಬೆಂಬಲಿಗರ ಮೇಲೆ ಸಿಬಿಐ ಅಧಿಕಾರಿಗಳ ಹಲ್ಲೆ!

    ಧಾರವಾಡ: ‘‘ನನ್ನ ಬೆಂಬಲಿಗರ ಮೇಲೆ ಸಿಬಿಐ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ’’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ, ಮಾಜಿ ಶಾಸಕ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

    ‘‘ನನ್ನ ಆಪ್ತರಾದ ಬಾಲಾಜಿ ಮತ್ತು ಚಾಲಕ ಗಂಗಾಧರ್ ಮೇಲೆ ಇಲ್ಲಿನ ಸರ್ಕ್ಯೂಟ್ ಹೌಸ್‌ನಲ್ಲಿ ಜೂನ್ 12ರಂದು ಹಲ್ಲೆ ನಡೆದಿದೆ. ಸಿಬಿಐ ಅಧಿಕಾರಿ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದೇ? ಸಿಬಿಐ ಅಧಿಕಾರಿಗಳು ಉಳಿದೆಲ್ಲರಿಗಿಂತ ದೊಡ್ಡವರಾ? ಇಲ್ಲಿ ಸೆಕ್ಯೂರಿಟಿಯ ಕೊರತೆ ಇದೆ. ಈ ಬಗ್ಗೆ ಸರಕಾರಕ್ಕೆ ದೂರು ಸಲ್ಲಿಸಿದ್ದೇನೆ’’ ಎಂದು ವಾಟಾಳ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

    ಇದನ್ನೂ ಓದಿ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ರೌಡಿ ಕೊರಂಗು!

    ವಾಟಾಳ್ ಆಪ್ತ ಬಾಲಾಜಿ ಮಾತನಾಡಿ, ‘‘ನಾವು ಊಟ ಮಾಡಿ ಕಾರಿಡಾರ್ ಅಡ್ಡಾಡುತ್ತಿದ್ದೆವು. ಅಧಿಕಾರಿಯೊಬ್ಬರು ರೂಮಿಗೆ ಕರೆದರು. ಆ ಅಧಿಕಾರಿ ಕುಡಿದ ಅಮಲಿನಲ್ಲಿದ್ದರು. ನಾವು ವಾಟಾಳ್ ಕಡೆಯವರು ಅಂದೆವು. ಕೂಡಲೇ ಅವರು ನಮ್ಮ ಮೇಲೆ ಹಲ್ಲೆ ಮಾಡಿದರು. ಬಳಿಕ ಮತ್ತೊಬ್ಬ ಅಧಿಕಾರಿ ಅಲ್ಲಿಗೆ ಬಂದು ಬಿಡಿಸಿ ಕಳುಹಿಸಿದರು’’ ಎಂದು ವಿವರಿಸಿದರು.

    ಜಿಪಂ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿದ್ದು , ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದಾರೆ. ಬೆಳಗಾವಿಗೆ ಹೋಗುವ ದಾರಿಯಲ್ಲಿ ವಾಟಾಳ್ ಮತ್ತು ಆಪ್ತರು ಕೂಡ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದಾರೆ. ಈ ಸಂದರ್ಭದಲ್ಲಿ ಘಟನೆ ನಡೆದಿದೆ.

    24 ಗಂಟೆ ಒಳಗೆ ಮುಗಿಸ್ತೇನೆ ಎಂದು ಎಸ್​ಪಿಗೆ ಬೆದರಿಕೆ ಹಾಕಿದ್ದ ಕೊರಂಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts