More

    ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ರೌಡಿ ಕೊರಂಗು!

    ಬೆಂಗಳೂರು: ಅನಾರೋಗ್ಯದಿಂದ ಇಂದು ಮೃತಪಟ್ಟಿರುವ ಕುಖ್ಯಾತಿ ರೌಡಿ ಕೊರಂಗು ಕೃಷ್ಣ, ಈ ಹಿಂದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುವ ಘಟನೆಗಳೂ ಇವೆ.

    ಅದರಲ್ಲಿ ಬಹುಮುಖ್ಯವಾದದ್ದು ಇನ್ನೊಬ್ಬ ರೌಡಿ ಬುಲೆಟ್​ ರವಿ ಹಾಗೂ ಆತನ ಸಹಚರ ಶ್ರೀನಿವಾಸ್ ಅಲಿಯಾಸ್​ ಸೀನ ಹತ್ಯೆ ಪ್ರಕರಣ.
    ಇದು ನಡೆದದ್ದು 2009ರ ಜುಲೈ 27ರಂದು. ಬೆಂಗಳೂರಿನ ಯಲಹಂಕ ನ್ಯೂಟೌನ್ ಬಳಿ ಇರುವ ಫಿಟ್‌ನೆಸ್ ವರ್ಲ್ಡ್ ಜಿಮ್‌ನಲ್ಲಿ ಎರಡು ರೌಡಿ ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಬುಲೆಟ್ ರವಿಯನ್ನು ಹಾಗೂ ಶ್ರೀನಿವಾಸ್​ನನ್ನು ಹತ್ಯೆ ಮಾಡಲಾಗಿತ್ತು. ಮತ್ತೊಬ್ಬ ಸಹಚರ ವಾಸು ಗಂಭೀರವಾಗಿ ಗಾಯಗೊಂಡಿದ್ದ. ಸೀನ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಬುಲೆಟ್ ರವಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದ.

    ಇದನ್ನೂ ಓದಿ: ಕುಖ್ಯಾತ ಪಾತಕಿ ಕೊರಂಗು ಕೃಷ್ಣ ವಿಧಿವಶ

    ಭೂಗತಲೋಕದ ಹಳೇ ವೈಷಮ್ಯವೇ ಈ ಕೊಲೆಗೆ ಕಾರಣ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿ ತಿಳಿದಿತ್ತು. ಇದರಲ್ಲಿ ಕೊರಂಗು ಕೃಷ್ಣ, ಸೈಲೆಂಟ್ ಸುನೀಲ, ಗೆಡ್ಡೆ ನಾಗ ಸೇರಿದಂತೆ 14 ಮಂದಿ ಭಾಗಿಯಾಗಿರುವುದು ಪೊಲೀಸರಿಗೆ ತಿಳಿದಿತ್ತು.ಕ ಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಬಗ್ಗೆಯೂ ಸುಳಿವು ಸಿಕ್ಕಿತ್ತು.

    ಆದರೆ ಅಪರಾಧ ಮಾಡಿ ತಪ್ಪಿಸಿಕೊಳ್ಳುವಲ್ಲಿ ಪಳಗಿದ್ದ ಕೊರಂಗು, ಕೊಲೆ ಪ್ರಕರಣದಲ್ಲಿ ಒಂದೇ ಒಂದು ಸುಳಿವನ್ನೂ ಬಿಟ್ಟಿರಲಿಲ್ಲ. ಪೊಲೀಸರು ಕೂಡ ಸಾಕ್ಷ್ಯಾಧಾರಗಳು ಕಲೆ ಹಾಕಲು ಸಾಧ್ಯವೇ ಆಗಲಿಲ್ಲ.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನ 8ನೇ ತ್ವರಿತ ನ್ಯಾಯಾಲಯ ಕೊರಂಗು ಕೃಷ್ಣನನ್ನು ಆರೋಪಮುಕ್ತಗೊಳಿಸಿತ್ತು. ಈ ಬಗ್ಗೆ ಪೊಲೀಸ್​ ಇಲಾಖೆಯೇ ಅಂದು ತಲೆತಗ್ಗಿಸಬೇಕಾದ ಘಟನೆ ನಡೆಯಿತು ಎಂಬುದಾಗಿ ಪೊಲೀಸರು ನೆನಪಿಸಿಕೊಳ್ಳುತ್ತಾರೆ.

    24 ಗಂಟೆ ಒಳಗೆ ಮುಗಿಸ್ತೇನೆ ಎಂದು ಎಸ್​ಪಿಗೆ ಬೆದರಿಕೆ ಹಾಕಿದ್ದ ಕೊರಂಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts