More

    ಫೆ.4ರಂದು ವಾಸುಕಿ ಭರತನಾಟ್ಯ ರಂಗಪ್ರವೇಶ

    ಶಿವಮೊಗ್ಗ: ನಟನಂ ಬಾಲನಾಟ್ಯ ಕೇಂದ್ರದಿಂದ ಭರತನಾಟ್ಯದ 21ನೇ ರಂಗಪ್ರವೇಶವು ಫೆ.4ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದ್ದು ಕೇಂದ್ರದ ವಿದ್ಯಾರ್ಥಿನಿ ಎಚ್.ಎ.ವಾಸುಕಿ ಅವರ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

    13ನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆ ಆರಂಭಿಸಿದ್ದ ವಾಸುಕಿ, ರಾಜ್ಯ ಸರ್ಕಾರದಿಂದ ನಡೆಯುವ ಭರತನಾಟ್ಯ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ನಟನಂ ಬಾಲನಾಟ್ಯ ಕೇಂದ್ರದ ಕರ್ನಾಟಕ ಕಲಾಶ್ರೀ, ಗುರು ವಿದ್ವಾನ್ ಎಸ್.ಕೇಶವಮೂರ್ತಿ ಪಿಳ್ಳೈ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    18ನೇ ವಯಸ್ಸಿನಿಂದ ನಮ್ಮ ಬಳಿ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿ ನಡೆಸಿದ ವಿಶಾರದ ಪ್ರಥಮ ಹಾಗೂ ವಿಶಾರದ ಪೂರ್ಣ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಶಿವಮೊಗ್ಗದ ಜೆಎನ್‌ಸಿಇ ಕಾಲೇಜಿನಲ್ಲಿ ಪದವೀಧರೆಯಾಗಿದ್ದು ಪ್ರಸ್ತುತ ಫ್ರಾನ್ಸ್ ಮೂಲದ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
    ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ನೃತ್ಯಪ್ರದರ್ಶನ ನೀಡಿದ್ದಾರೆ. ನೃತ್ಯ, ಸಂಗೀತ, ಆಶುಭಾಷಣ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ ಎಂದರು.
    ರಂಗಪ್ರವೇಶ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಗರ್ತಿಕೆರೆ ರಾಮಣ್ಣ ಮುಖ್ಯ ಅತಿಥಿಯಾಗಿರುವರು. ವಿಶೇಷ ಆಹ್ವಾನಿತರಾದ ಬೆಂಗಳೂರಿನ ಖ್ಯಾತ ನೃತ್ಯಗುರು ವಿದುಷಿ ಶ್ರೀವಲ್ಲಿ ಅಂಬರೀಶ್, ಶ್ರೀರಾಮಕೃಷ್ಣ ವಿದ್ಯಾಶ್ರಮದ ವ್ಯವಸ್ಥಾಪಕ ಟ್ರಸ್ಟಿ ಶೋಭಾ ವೆಂಕಟರಮಣ, ಮುಖ್ಯ ಶಿಕ್ಷಕ ತೀರ್ಥೇಶ್ ಅವರಿಗೆ ಗುರುವಂದನೆ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು. ಎಚ್.ಎ.ವಾಸುಕಿ, ಎಚ್.ಜಿ.ಆನಂದರಾವ್, ಎಚ್.ಎಸ್.ಸುಶೀಲಾ, ವಿಷ್ಣು, ಆರ್.ಅಚ್ಯುತರಾವ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts