More

    19ಕ್ಕೆ ವಿದುಷಿ ಬಿ.ಎನ್.ನಾಗಶ್ರೀ ರಂಗಪ್ರವೇಶ

    ಶಿವಮೊಗ್ಗ: ನಗರದ ನಟನಂ ಬಾಲನಾಟ್ಯ ಕೇಂದ್ರದ 20ನೇ ರಂಗ ಪ್ರವೇಶ ನ.19ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು ವಿದುಷಿ ಬಿ.ಎನ್.ನಾಗಶ್ರೀ ಅವರು ಸಾವಿರಾರು ಜನರ ಸಮ್ಮುಖದಲ್ಲಿ ರಂಗ ಪ್ರವೇಶ ಮಾಡಲಿದ್ದಾರೆ ಎಂದು ಕೇಂದ್ರದ ಸಂಸ್ಥಾಪಕ ವಿದ್ವಾನ್ ಎಸ್.ಕೇಶವಕುಮಾರ್ ಪಿಳ್ಳೈ ತಿಳಿಸಿದರು.

    ಕಳೆದ 33 ವರ್ಷಗಳಿಂದ ನಮ್ಮ ಕೇಂದ್ರದಲ್ಲಿ ಲಕ್ಷಾಂತರ ಮಕ್ಕಳಿಗೆ ಭರತನಾಟ್ಯ ಕಲಿಸಿದ್ದು ನಾಗಶ್ರೀ ಅವರು 9ನೇ ತರಗತಿಯಿಂದಲೇ ಭರತನಾಟ್ಯ ಅಭ್ಯಾಸ ಆರಂಭಿಸಿ 12 ವರ್ಷಗಳಿಂದ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿದ್ದು ಕೇಂದ್ರದಲ್ಲಿ ಅಂತಿಮ ವಿದ್ವತ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಹೊರನಾಡು ಶ್ರೀ ಕ್ಷೇತ್ರದ ಭೀಮೇಶ್ವರ ಜೋಷಿ ಹಾಗೂ ರಾಜಲಕ್ಷ್ಮೀ ಬಿ.ಜೋಷಿ ಮುಖ್ಯ ಅತಿಥಿಯಾಗಿದ್ದು ಮೈಸೂರಿನ ಲಲಿತಕಲೆ ಕಾಲೇಜಿನ ನೃತ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಶೀಲಾ ಶ್ರೀಧರ್ ಹಾಗೂ ಶಿವಮೊಗ್ಗದ ಸುರಭಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯೆ ಸವಿತಾ ವಿನಾಯಕ, ಭಾರತೀಯ ವಿದ್ಯಾಭವನದ ಪ್ರಾಚಾರ್ಯೆ ಜಿ.ವಿ.ಇಂದು, ಅರಬಿಂದೋ ಕಾಲೇಜಿನ ಪ್ರಾಚಾರ್ಯ ಪ್ರೊ. ಡಾ.ಕೆ.ನಾಗರಾಜ್, ಜೆಎನ್‌ಎನ್‌ಸಿ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಆರ್.ಸಂಜೀವ್ ಕುಂಟೇ, ದೈಹಿಕ ಶಿಕ್ಷಕ ಎಚ್.ಎಂ.ಹರೀಶ್ ವಿಶೇಷ ಆಹ್ವಾನಿತರಾಗಿರುವರು ಎಂದರು.
    ವಿದುಷಿ ಬಿ.ಎನ್.ನಾಗಶ್ರೀ, ಬಿ.ಎನ್.ನಂದಕುಮಾರ್, ಬಿ.ಎನ್.ನಯನಾ, ಶಕುಂತಮ್ಮ, ನಾಗವೇಣಿ, ಮಂಜುನಾಥ, ನಾರಾಯಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts