More

    ರಾಜ್ಯದಲ್ಲಿ ಮತದಾರರ ಜಾಗೃತಿಗೆ ಬಗೆಬಗೆಯ ತಂತ್ರ! ದೇಶದಲ್ಲೇ ವಿನೂತನ ಪ್ರಯೋಗ

    | ವಿಲಾಸ ಮೇಲಗಿರಿ ಬೆಂಗಳೂರು

    ಚುನಾವಣೆ ಪ್ರಜಾಪ್ರಭುತ್ವದ ಒಂದು ಹಬ್ಬ. ಈ ಹಬ್ಬಕ್ಕೆ ಸಿಇಒ ಕಚೇರಿ ಸಂಭ್ರಮ ಸಡಗರದಿಂದ ಸಿಂಗಾರಗೊಂಡಿದೆ. ಕಚೇರಿ ಗೋಡೆಯಲ್ಲಿ ಮತದಾರ ಜಾಗೃತಿ ಚಿತ್ರಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಮುಖ್ಯ ಚುನಾವಣಾಧಿಕಾರಿ ಕಚೇರಿಯ (ಸಿಇಒ) ವೆಬ್​ಸೈಟ್, ಟ್ವಿಟರ್, ಇನ್​ಸ್ಟ್ಟಾಗ್ರಾಮ್, ಫೇಫೇಸ್​ಬುಕ್ ಪೇಜ್​ಗಳು ಸೃಜನಾತ್ಮಕವಾಗಿ ಮೂಡಿಬರುತ್ತಿವೆ. ದಿನಕ್ಕೊಂದು ಸಂದೇಶ ಹೊತ್ತು ತರುತ್ತಿವೆ. ಜನರಿಗೆ ಮತದಾನದ ಮಹತ್ವ ಸಾರುತ್ತಿವೆ.

    ಸಾಮಾನ್ಯವಾಗಿ ಜಾಲತಾಣಗಳು ಚುನಾವಣೆ ವೇಳೆ ಹಲವು ಕಾರಣಗಳಿಂದಾಗಿ ಹೆಚ್ಚು ಕ್ರಿಯಾಶೀಲವಾಗಿರು ತ್ತವೆ. ಅಂತೆಯೇ ಸಿಇಒ ಕಚೇರಿಯ ಜಾಲತಾಣಗಳೂ ಹೊಸ ಹುರುಪು, ಹುಮ್ಮಸ್ಸು, ಉತ್ಸಾಹಪೂರ್ಣ ಕಂಟೆಂಟ್​ಗಳೊಂದಿಗೆ ರಾರಾಜಿಸುತ್ತಿವೆ. ಲಕ್ಷಾಂತರ ವೀವ್ಸ್ /ಲೈಕ್ಸ್/ಶೇರ್ ಆಗುತ್ತಿವೆ. ಚೆರ್ಚೆಗೂ ಗ್ರಾಸವಾಗುತ್ತಿವೆ. ಈ ಮೊದಲು ಸಿಇಒ ಕಚೇರಿಯ ಜಾಲತಾಣಗಳು ಪೇಲವವಾಗಿದ್ದವು. ಆದೇಶ, ಸುತ್ತೋಲೆ, ಸೂಚನೆ, ಅಂಕಿ -ಸಂಖ್ಯೆಗಳ ಮಾಹಿತಿಯನ್ನು ಮಾತ್ರ ಜನರಿಗೆ ತಲುಪಿಸುವ ಔಪಚಾರಿಕ ತಾಣವಾಗಿದ್ದವು. ಈಗ ಹೊಸ ಹೊಸ ವಿಷಯ ಬಳಸುವ ಮೂಲಕ ಆಕರ್ಷಿಸುತ್ತಿವೆ. ಈ ವಿಭಿನ್ನ ಪ್ರಯೋಗ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ನಡೆದಿದೆ!

    ಇದನ್ನೂ ಓದಿ: ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡಿದ ಹೈಕಮಾಂಡ್? ಟಿಕೆಟ್ ಹಂಚಿಕೆಯಲ್ಲಿ ಬಿಎಸ್​ವೈ ಮೇಲುಗೈ!

    ಅಪ್ಲಿಕೇಷನ್​ನಲ್ಲೂ ಕೈಚಳಕ
    ಸಿ ವಿಜಿಲ್, ಸುವಿಧಾ ಸೇರಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಎಲ್ಲ ಅಪ್ಲಿಕೇಶನ್​ಗಳನ್ನೂ ವೈಶಿಷ್ಟ್ಯಪೂರ್ಣವಾಗಿ ರೂಪಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.

    ಬ್ರ್ಯಾಂಡ್​ ಲೋಗೋ ಬಳಕೆ ಏಕೆ?
    ಯುವ ಸಮೂಹ ಹಾಗೂ ಮೇಲ್ಮಧ್ಯಮ ವರ್ಗದ ನಗರ ಪ್ರದೇಶಗಳ ಜನ ನಿತ್ಯ ಬಳಸುವ ವಸ್ತುಗಳು ಮನದಲ್ಲಿ ಮನೆ ಮಾಡಿರುತ್ತವೆ. ಅವುಗಳನ್ನು ನೋಡಿದ ಕೂಡಲೇ ಒಂದು ಬಗೆಯ ಕಾತರತೆ ಕಾಣುತ್ತದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ನಾಗರಿಕರ ವಿಶೇಷವಾಗಿ ಯುವ ಜನರ ಗಮನ ಸೆಳೆಯಲು ಬ್ರ್ಯಾಂಡೆಡ್ ವಸ್ತುಗಳ ಲೋಗೋಗಳನ್ನು ಬಳಸಿಕೊಳ್ಳಲಾಗಿದೆ. ಸಿಇಒ ಕಚೇರಿಯ ಜಾಲತಾಣ ನೋಡಿದ ತಕ್ಷಣ ಏನಿದು? ಏನೋ ಚೇಂಜ್ ಕಾಣುತ್ತಿದೆಯಲ್ಲ ಎಂಬ ತವಕ ಗರಿಗೆದರುತ್ತದೆ. ಆಸಕ್ತಿ ಮೊಳೆಯುತ್ತದೆ. ಆಗ ಓದಿದ ಹಾಗೂ ನೋಡಿದ ಕಂಟೆಂಟ್ ಮನದಲ್ಲಿ ಬಲವಾಗಿ ಉಳಿಯುತ್ತದೆ ಎಂಬ ದೃಷ್ಟಿಯಿಂದ ಬ್ರಾ್ಯಂಡೆಡ್ ವಸ್ತುಗಳ ಜಾಹೀರಾತು ಅನುಕರಣೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಜಾಲತಾಣ ನಿರ್ವಹಣೆ ಮಾಡುತ್ತಿರುವ Shee Tales Entertainment limited ಸಂಸ್ಥಾಪಕಿ ಶೀತಲ್ ಶೆಟ್ಟಿ ಹೇಳುತ್ತಾರೆ.

    ಪಂಚ್ ಕೊಡುವ ಟ್ಯಾಗ್​ಲೈನ್​ಗಳು
    ಕಿಟ್ ಕ್ಯಾಟ್ ಟ್ಯಾಗ್​ಲೈನ್, ಹ್ಯಾವ್ ಎ ಬ್ರೇಕ್, ಹ್ಯಾವ್ ಎ ಕಿಟ್ ಕ್ಯಾಟ್ ಎಂಬುದನ್ನು ‘ಹ್ಯಾವ್ ಎ ಬ್ರೇಕ್, ಮೇಕ್ ಎ ವೋಟ್’ ಎಂದು ಮೆಕ್ ಡೋನಾಲ್ಡ್​ನ ಟ್ಯಾಗ್​ಲೈನ್ ‘ಐ ಆಮ್ ಲವ್​ಇನ್ ಇಟ್’ ಎಂಬುದನ್ನು ‘ಮೈ ವೋಟ್, ಐ ಆಮ್ ಡೂಯಿಂಗ್ ಇಟ್’ ಎಂದು ಬದಲಿಸಲಾಗಿದೆ. ಅದೇ ರೀತಿ, ಮ್ಯಾಗಿಯ ಟು ಮಿನಿಟ್ ನ್ಯೂಡಲ್ಸ್ ಅನ್ನು ‘ವೋಟ್: ಟು ಮಿನಿಟ್ ಟಾಸ್ಕ್’, ಬರ್ಗರ್ ಕಿಂಗ್ ಅನ್ನು ‘ವೋಟ್ ಕಿಂಗ್ ’ಎಂದು, ಬಿಎಂಡಬ್ಲ್ಯು ಕಾರಿನ ಲೋಗೋವನ್ನು ಬಳಸಿ ‘ವೋಟ್: ಶೀರ್ ವೋಟಿಂಗ್ ರೈಟ್’ ಎಂದು, ಸರ್ಫ್ ಎಕ್ಸೆಲ್ ಲೋಗೋದಲ್ಲಿದ್ದ ಫಾರ್ ಸೂಪರ್ ಸ್ಟೇನ್ ರಿಮೂವಲ್ ಎಂಬುದನ್ನು ‘ಕಲೆ ಒಳ್ಳೆಯದು ಆದರೆ ಬೆರಳ ಮೇಲೆ’ ಎಂದು ಮಾರ್ಪಡಿಸಿ ಜನರ ಗಮನ ಸೆಳೆಯಲಾಗಿದೆ. ಹಾಯ್ ಹೇಗಿದ್ದೀಯಾ? ತುಂಬಾ ಯೋಚನೆ ಮಾಡಿ ಈ ಲೆಟರ್ ಬರೀತಾ ಇದ್ದೀನಿ ಎಂದು ಶುರುವಾಗುವ ಲವ್ ಲೆಟರ್ ಕೊನೆಗೆ ನೀನೇ ನನ್ನ ವೋಟ್, ನೀನೇ ನನ್ನ ಹಕ್ಕು ಎಂದು ಮುಕ್ತಾಯವಾಗುವ ಮೂಲಕ ಅಚ್ಚರಿ ಮೂಡಿಸುತ್ತಿದೆ.

    ಇದನ್ನೂ ಓದಿ: ರೇಪ್​ ಕೇಸ್​ನಲ್ಲಿ ಜಾಮೀನು: ಜೈಲಿಂದ ಹೊರಬಂದ ರೀಲ್ಸ್​ ಸ್ಟಾರ್​ನಿಂದ ಹಾಡಹಗಲೇ ನಡೆಯಿತು ಘೋರ ಕೃತ್ಯ

    ವೈರಲ್ ಆಗುತ್ತಿರುವ ಚಾರ್ಲಿ
    ಚಾರ್ಲಿ 777 ಸಿನಿಮಾದ ನಾಯಿ ಮುಂದೆ ಕುಳಿತ ನಟ ರಕ್ಷಿತ್ ಶೆಟ್ಟಿ ಈ ಸಾರಿ ವೋಟ್ ಮಾಡೇ ಮಾಡ್ತೀನಿ, ಕರ್ನಾಟಕದಲ್ಲಿರೋ ಎಲ್ಲರೂ ವೋಟ್ ಮಾಡ್ತಾರೆ ಎಂದಾಗ ಆ ಚಾರ್ಲಿ(ನಾಯಿ) ಬಂದು ತಬ್ಬಿಕೊಳ್ಳುವ ಪರಿಯಂತೂ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಇದು ಅತಿ ಹೆಚ್ಚು ವೈರಲ್ ಆಗಿದೆ. ರಕ್ಷಿತ್ ಶೆಟ್ಟಿ ಧ್ವನಿಯನ್ನು ಡಬ್ ಮಾಡಲಾಗಿದೆಯಾದರೂ, ಅವರ ಅನುಮತಿ ಪಡೆದೇ ಈ ಪೋಸ್ಟ್ ಮಾಡಲಾಗಿದೆ. ಅದನ್ನು ಅವರು ಕೂಡ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಶೇರ್ ಮಾಡಿದ್ದಾರೆ. ಮತದಾನ ಜಾಗೃತಿ ಕುರಿತ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗಾಯಕ ಚೇತನ್ ಗಂಧರ್ವ ಹಾಡಿದ ಹಾಡನ್ನೂ ಚುನಾವಣಾ ಆಯೋಗದ ಜಾಲತಾಣಗಳಲ್ಲಿ ಹಾಕಲಾಗಿದೆ. ಚುನಾವಣಾ ಆಯೋಗ ಏಕಮುಖ ವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸೆಲೆಬ್ರಿಟಿ ಸಹಭಾಗಿತ್ವ ದಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪುವ ಕೆಲಸ ಮಾಡುತ್ತಿದೆ. ಸಿಇಒ ಜಾಲತಾಣಗಳಿಂದ ಸೆಲೆಬ್ರಿಟಿಗಳಿಗೆ, ಸೆಲೆಬ್ರಿಟಿಗಳಿಂದ ಸಿಇಒ ಜಾಲತಾಣಗಳಿಗೆ ಪರಸ್ಪರ ಪೋಸ್ಟ್ ಗಳನ್ನು ಟ್ಯಾಗ್ ಮಾಡಲಾಗುತ್ತಿದೆ. ಹೀಗಾಗಿ ಜಾಲತಾಣ ಗಳು ವೇಗವಾಗಿ ಜನರನ್ನು ತಲುಪುತ್ತಿವೆ.

    ಬಲವಾದ ಸಾಮಾಜಿಕ ಉದ್ದೇಶಕ್ಕಾಗಿ ಚುನಾವಣಾ ಅಯೋಗದ ಜತೆಗೆ ಮಾಡುತ್ತಿರುವ ಕೆಲಸ ನಮಗೆ ಹೆಮ್ಮೆ ತಂದಿದೆ. ನಾವು ಮಾಡುವ ಪೋಸ್ಟ್​ಗಳಿಗೆ ಅದ್ಭುತ ಪ್ರತಿಕ್ರಿಯೆ ದೊರೆಯುತ್ತಿದೆ.

    | ಶೀತಲ್ ಶೆಟ್ಟಿ ಸಂಸ್ಥಾಪಕಿ, ಶೀ ಟೇಲ್ಸ್ ಎಂಟರ್​ಟೈನ್​ವೆುಂಟ್ ಲಿಮಿಟೆಡ್

    ಪ್ರತಿಯೊಂದೂ ಚರ್ಚೆ
    ಸಿಇಒ ಕಚೇರಿಯ ಜಾಲತಾಣ ಗಳಲ್ಲಿ ಪೋಸ್ಟ್ ಮಾಡುವ ಮುನ್ನ ಪ್ರತಿಯೊಂದು ವಿಷಯಗಳೂ ಚರ್ಚೆಗೆ ಒಳಪಡುತ್ತಿವೆ. ಮುಖ್ಯ ಚುನಾವಣಾಧಿಕಾರಿ ಮನೋಜ್​ಕುಮಾರ್ ಮೀನಾ ವಿಶೇಷ ಆಸಕ್ತಿ ವಹಿಸಿ ಈ ಎಲ್ಲ ಕ್ರಿಯೇಟಿವಿಟಿ ಮೇಲೆ ನಿಗಾ ಇಟ್ಟಿದ್ದಾರೆ.

    ಇದನ್ನೂ ಓದಿ: ಗುಟುಕು ನೀರಿಗೆ ಅಂಗಲಾಚುವ ಮಂಗಗಳು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮನಕರಗಿಸುವ ದೃಶ್ಯ

    ದಿನಕ್ಕೆ ಐದಾರು ಪೋಸ್ಟ್, ಕುತೂಹಲ ಮಸ್ಟ್!
    ಜನಪ್ರಿಯ ಬ್ರ್ಯಾಂಡ್ ಲೋಗೋಗಳ ಮಾದರಿಯಲ್ಲೇ ಕಂಟೆಂಟ್ ಸಿದ್ಧಪಡಿಸಿ ಪೋಸ್ಟ್ ಮಾಡಲಾಗುತ್ತಿದೆ. ಈಗಾಗಲೆ ಮೆಕ್​ಡೊನಾಲ್ಡ್, ಮ್ಯಾಗಿ, ಬಿಎಂಡಬ್ಲ್ಯು, ಕಿಟ್​ಕ್ಯಾಟ್, ಸರ್ಫ್ ಎಕ್ಸೆಲ್, ಕೆಎಂಎಫ್, ಬರ್ಗರ್ ಕಿಂಗ್… ಮತ್ತಿತರ ಲೋಗೋ ಮಾದರಿಯಲ್ಲೇ ಡಿಸೈನ್ ಸಿದ್ಧಪಡಿಸಿ ಪೋಸ್ಟ್ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಬ್ರಾ್ಯಂಡ್​ಗಳ ಟ್ಯಾಗ್​ಲೈನ್​ಗಳನ್ನು ಅಚ್ಚರಿಯ ರೀತಿಯಲ್ಲಿ ಮಾರ್ಪಡಿಸಿ ಓದುಗರ ಕುತೂಹಲ ಕೆರಳಿಸಿವೆ.

    ಏನಂಥ ಆಕರ್ಷಣೆ?
    ಕಳೆದ ಒಂದು ತಿಂಗಳಿಂದ ಸಿಇಒ ಕಚೇರಿಯ ಜಾಲತಾಣಗಳು ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ, ಏನೇನೋ ವೇಷ ಧರಿಸುತ್ತಿವೆ. ವೀಕ್ಷಕರಲ್ಲಿ ಕುತೂಹಲ ಕೆರಳಿಸುತ್ತಿವೆ! ಜತೆಗೆ ಮತದಾನದ ಬಗೆಗಿನ ಅನಾದರ ಧೋರಣೆಯನ್ನು ತೊಡೆದು ಹಾಕುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

    ರೇಪ್​ ಕೇಸ್​ನಲ್ಲಿ ಜಾಮೀನು: ಜೈಲಿಂದ ಹೊರಬಂದ ರೀಲ್ಸ್​ ಸ್ಟಾರ್​ನಿಂದ ಹಾಡಹಗಲೇ ನಡೆಯಿತು ಘೋರ ಕೃತ್ಯ

    World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts