More

    ಕ್ವಾರಂಟೈನ್​ ಕೇಂದ್ರಗಳಾಗಿ ಬದಲಾದ ಶಾಲೆಗಳು

    ಕೊಡೇಕಲ್: ಕರೊನಾ ಲಾಕ್ಡೌನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋಗಿದ್ದ ತಾಲೂಕಿನ ವಿವಿಧ ಗ್ರಾಮಗಳು ಮತ್ತು ತಾಂಡಾಗಳ ಕಾರ್ಮಿಕರು ಸ್ವಗ್ರಾಮಗಳಿಗೆ ಮರಳುತ್ತಿದ್ದು, ಗೋವಾದಿಂದ ಮರಳುತ್ತಿರುವ ಕಾರ್ಮಿಕರನ್ನು ತಪಾಸಣೆ ಮಾಡಿ ಹೋಂ ಕ್ವಾರಂಟೈನ್ಗೆ ಒಳಪಡಿಸುತ್ತಿದ್ದರೆ, ಇನ್ನೂ ಮಹಾರಾಷ್ಟ್ರದಿಂದ ಮರಳುತ್ತಿರುವ ಕಾಮರ್ಿಕರನ್ನು ತಪಾಸಣೆ ಮಾಡಿ ತಾಲೂಕಿನ ವಿವಿಧೆಡೆ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ.

    ಈ ಬಗ್ಗೆ ಮಾಹಿತಿ ನೀಡಿದ ಕೊಡೇಕಲ್ ನಾಡಕಾರ್ಯಾಲಯದ ಉಪತಹಸೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಮಾತನಾಡಿ, ಈಗಾಗಲೇ ರಾಜನಕೋಳೂರ ಹೊರವಲಯದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿ 449 ಜನ ಕಾರ್ಮಿಕರನ್ನು ಇರಿಸಲಾಗಿದೆ.

    ಇದಲ್ಲದೆ ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಿಂದ ಮರಳುತ್ತಿರುವ ಕಾರ್ಮಿಕರು ಉಳಿದುಕೊಳ್ಳಲು ಕೊಡೇಕಲ್ ಹೋಬಳಿ ವಲಯದ ವಿವಿಧ ಶಾಲೆಗಳಾದ ಹಗರಟಗಿ ಸರ್ಕಾರಿ ಪ್ರೌಡ ಶಾಲೆಯಲ್ಲಿ 16, ಮಾವಿನ ಗಿಡದ ತಾಂಡಾದಲ್ಲಿ 80 ಜನ, ರೇವುನಾಯ್ಕ ತಾಂಡಾದಲ್ಲಿ 55, ಮಾರನಾಳ ದೊಡ್ಡ ತಾಂಡಾದಲ್ಲಿ 65, ರಾಮರಾವನಗರ ತಾಂಡಾ-29, ನಾರಾಯಣಪುರ ಬಾಲಕರ ವಸತಿ ನಿಲಯದಲ್ಲಿ 78 , ಸಣ್ಣ ಚಾಪಿ ತಾಂಡಾದಲ್ಲಿ 10, ಬಸರಿಗಿಡದ ತಾಂಡಾ ಶಾಲೆಯಲ್ಲಿ 19, ಜುಮಾಲಪೂರ ದೊಡ್ಡ ತಾಂಡಾದಲ್ಲಿ 35, ಗೆದ್ದಲಮರಿಯಲ್ಲಿ 70, ರಾಜವಾಳದಲ್ಲಿ 37, ರಾಜನಕೋಳೂರ ತಾಂಡಾದಲ್ಲಿ 50, ಬಪ್ಪರಗಿಯಲ್ಲಿ 30 ಮತ್ತು ಹುಲ್ಲಿಕೇರಿ ಗ್ರಾಮದ ಶಾಲೆಯಲ್ಲಿ 20 ಜನ ಸೇರಿ ಒಟ್ಟು 1043 ಕಾಮರ್ಿಕರನ್ನು ಕ್ವಾರಂಟೈನಲ್ಲಿರಿಸಲಾಗಿದ್ದು, ಇನ್ನೂ ಕಾರ್ಮಿಕರು ಬರುತ್ತಲೆ ಇದ್ದಾರೆ ಎಂದರು.

    ಪಿಡಿಒ ಶೇಖರ ಹೂಗಾರ ಮಾತನಾಡಿ ಎಲ್ಲ ಕ್ವಾರಂಟೈನ್ ಕೆಂದ್ರಗಳಲ್ಲಿ ಕಾರ್ಮಿಕರಿಗೆ ಕುಡಿಯುವ ನೀರು, ಊಟ, ಉಪಹಾರ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಮತ್ತು ಕೆಲವೊಂದು ಶಾಲೆಗಳಲ್ಲಿ ಹೊಸ ಶೌಚಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts