More

    ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

    ಮೂಡಲಗಿ: ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮರ್ಥ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಮೂಡಲಗಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಸೋಮವಾರ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ ಶಿವಾನಂದ ಬಬಲಿಗೆ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ಬಸವರಾಜ ಪೋಳ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರ ಕಾರ್ಮಿಕರಿದ್ದು, ಕಾರ್ಮಿಕರ ನಿರೀಕ್ಷಕ ಇಲ್ಲದಿರುವುದರಿಂದ ಕಾರ್ಮಿಕ ಇಲಾಖೆ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಮೂರು ತಿಂಗಳಿಂದ ಕಾರ್ಮಿಕರ ಹೊಸ ಕಾರ್ಡ್ ಹಾಗೂ ಕಾರ್ಡ್ ನವೀಕರಣ ಆಗುತ್ತಿಲ್ಲ. ಮದುವೆಗೆ ದೊರೆಯುವ ಧನಸಹಾಯ ವಿತರಣೆಯಾಗುತ್ತಿಲ್ಲ, ಮನೆ ಕಟ್ಟಲು 5 ಲಕ್ಷ ರೂ. ಸಹಾಯಧನ ಕಾರ್ಮಿಕ ಕಲ್ಯಾಣ ಮಂಡಳಿಯಿಂದಲೇ ನೀಡಬೇಕು. ಶೀಘ್ರ ಈಡೇರಿಸದಿದ್ದಲ್ಲಿ ಸುವರ್ಣಸೌಧದ ಎದುರು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

    ಸಂಘದ ಕಾರ್ಯದರ್ಶಿ ಸುಭಾಷ ಗೋಡ್ಯಾಗೋಳ, ಗುರುನಾಥ ಗಂಗನ್ನವರ, ಹಸನ್ ಕುರಬೇಟ, ತುಕ್ಕಾರಾಮ ಕುಲಗೋಡ, ಯಶವಂತ ರಾಮೋಜಿ, ಯಾಸೀನ್ ಪಟಾನ್, ನಂದೇಶ ಕೆಳಗಡೆ, ತಮ್ಮಣ್ಣ ಗಾಡಿವಡರ, ಶ್ರೀಶೈಲ ಶೀಳನ್ನವರ, ವಿಠ್ಠಲ ಪತ್ತಾರ, ಸುನೀಲ ಮೋಪಗಾರ, ಬಸವರಾಜ ಗಂಗುರಿ, ಮಲ್ಲಿಕ್ ನದ್ಾ, ಈರಪ್ಪ ಬಡಿಗೇರ, ಬೀರಪ್ಪ ಮಾಳಗಿ, ಪಡದೇಪ್ಪ ಕೋಟಿನ, ನೀಲವ್ವ ಚಿಪ್ಪಲಕಟ್ಟಿ, ಬೌರವ್ವ ಮರಾಠಿ, ಅನಿತಾ ದಳವಾಯಿ ಇತರರಿದ್ದರು.

    ಕಕ್ಕೇರಿ ವರದಿ: ಖಾನಾಪುರ ತಾಲೂಕಿನ ರೈತರ ಭೂಮಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಮಲಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಹಾಗೂ ಸುರಪುರ, ಕೇರವಾಡ (ಹಿಡಕಲ್) ಗ್ರಾಮವನ್ನು ಕಂದಾಯ ಗ್ರಾಮ ಮಾಡುವಂತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘ ಹಾಗೂ ರಾಜ್ಯ ಮಹಿಳಾ ರೈತ ಸಂಘದಿಂದ ಸೋಮವಾರ ಪೂರ್ವಭಾವಿ ಸಭೆ ಜರುಗಿತು.

    ಅಖಿಲ ಕರ್ನಾಟಕ ರೈತ ಸಂಘಟನೆ ರಾಜ್ಯಾಧ್ಯಕ್ಷ ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ವಿವಿಧ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ಡಿ.6ರಂದು ಬೆಳಗಾವಿ ಚನ್ನಮ್ಮ ವೃತ್ತದಿಂದ ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ತೆರಳಿ ಮನವಿ ಕೊಡಲಾಗುವುದು ಎಂದರು. ಉಪಾಧ್ಯಕ್ಷ ಕಿಶೋರ ಮಿಠಾರಿ, ಮಹಾದೇವಿ ಹುಯಿಲಗೋಳ, ಮಲ್ಲಮ್ಮ ಹುಲ್ಲಿನಕೊಪ್ಪ, ಯಲ್ಲಪ್ಪ ಗುಪಿತ, ರಮೇಶ ವೀರಾಪುರ, ರಮಾನಂದ ಅಂಬಡಗಟ್ಟಿ, ಶಿವನಿಂಗ ಚನ್ನಾಪುರ, ರಾಜು ವೀರಾಪುರ, ರಮೇಶ ವೀರಾಪುರ, ರಾಮು ಚನ್ನಾಪುರ, ನಾರಾಯಣ ಪಾಟೀಲ, ಅಶೋಕ ಅಂಬಡಗಟ್ಟಿ, ಸೇಬಸ್ಟಿನ್ ಸೋಜ, ಗೋಪಾಲ ಅಗಸಿಮನಿ, ಪಾಸ್ಕಲ್ ಸೋಜ, ದತ್ತಾ ಬೀಡಕರ, ಕೀರಪ್ಪ ಕೋಲಕಾರ, ಪರಶುರಾಮ ಅಂಬೋಜಿ, ಪರಶುರಾಮ ರಾಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts