More

  ಅನುದಾನ ಮಾಹಿತಿ ಒದಗಿಸಲು ಒತ್ತಾಯ

  ಬ್ಯಾಡಗಿ: ಬಿಜೆಪಿ ಹಮ್ಮಿಕೊಂಡಿರುವ ಮತದಾರರಿಗೆ ಉತ್ತರಿಸಿ ಅಭಿಯಾನದ ಅಂಗವಾಗಿ ಬ್ಯಾಡಗಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಮಾಹಿತಿ ಒದಗಿಸುವಂತೆ ಆಗ್ರಹಿಸಿ ಶಾಸಕರ ಆಪ್ತ ಕಾರ್ಯದರ್ಶಿಗೆ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಮನವಿ ಸಲ್ಲಿಸಿದರು.

  ಬಳಿಕ ಮಾತನಾಡಿದ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಬಿಡುಗಡೆ ಮಾಡದೆ ವಿನಾಕಾರಣ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ರೈತರ ಪಾಲಿಗೆ ಸರ್ಕಾರದಿಂದ ನಯಾಪೈಸೆ ಸಿಗುತ್ತಿಲ್ಲ ಎಂದು ದೂರಿದರು.

  ಬಿಜೆಪಿ ತಾಲೂಕಾಧ್ಯಕ್ಷ ಹಾಲೇಶ ಜಾಧವ, ಪುರಸಭೆ ಸದಸ್ಯರಾದ ಚಂದ್ರಣ್ಣ ಶೆಟ್ಟರ, ಸುಭಾಸ ಮಾಳಗಿ, ಶಿವಾನಂದ ಕಡಗಿ, ನಿಂಗಪ್ಪ ಬಟ್ಟಲಕಟ್ಟಿ, ಶಂಕ್ರಣ್ಣ ಅಕ್ಕಿ, ದ್ಯಾಮನಗೌಡ ಪೂಜಾರ, ಮಂಜುನಾಥ ಜಾಧವ, ಸಿದ್ದಯ್ಯ ಹಿರೇಮಠ, ಪ್ರಕಾಶ ಸಿದ್ಧಣ್ಣವರ, ಅಣ್ಣಪ್ಪ ಬೆಳಕೇರಿ, ಜಿತೇಂದ್ರ ಸುಣಗಾರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts