More

    ಐದು ದಿನಕೊಮ್ಮೆ ನೀರು ಪೂರೈಸಲು ಒತ್ತಾಯ

    ಸವಣೂರ: ಪಟ್ಟಣದಲ್ಲಿ 5 ದಿನಕೊಮ್ಮೆ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪಟ್ಟಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಗಣೇಶ ಸವಣೂರ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

    ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿದೆ. ಪುರಸಭೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಎಲ್ಲ ವಾರ್ಡ್‌ಗಳಿಗೂ 15 ದಿನಕ್ಕೆ ಸರಬರಾಜು ಮಾಡುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ವರದಾ ನದಿಯಲ್ಲಿ ನೀರಿನ ಮಟ್ಟ ಕುಸಿದಿದೆ. ನೀರು ಪೂರೈಸುವ ಬಹುತೇಕ ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಕುಡಿಯುವ ನೀರಿನ ಕೊಳವೆಬಾವಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಕಾಲಕ್ಕೆ ನೀರನ್ನು ಪೂರೈಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

    ನೀರು ಸಿಗದೆ ಮಹಿಳೆಯರು ಗಲ್ಲಿ ಗಲ್ಲಿಗೆ ದೂಡುವ ಗಾಡಿ ಹಿಡಿದು ಪರದಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ 5 ದಿನಕ್ಕೆ ನೀರು ಬಿಡದೆ ಇದ್ದರೆ ಪುರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ಕೈಗೊಳ್ಳಬೇಕಾಗ್ತುತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಪಿಎಸ್‌ಆರ್ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಜಿಲ್ಲಾಧ್ಯಕ್ಷ ಸಂದೀಪ ಬಾಬನಿ, ಕರ್ನಾಟಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿ ತಾಲೂಕಾಧ್ಯಕ್ಷ ಫಕೀರಪ್ಪ ಹರಿಜನ, ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಮುನ್ನಾ ಗೌಡಗೇರಿ, ಕರ್ನಾಟಕ ಸಂಘರ್ಷ ಸಮಿತಿ ತಾಲೂಕಾಧ್ಯಕ್ಷ ಪ್ರಶಾಂತ ಮುಗಳಿ, ಈಶ್ವರಗೌಡ ಅರಳಿಹಳ್ಳಿ, ಬಾಬನಸಾಬ ರಾಯಚೂರ, ಪ್ರವೀಣ ಬಾಲೆಹೊಸೂರ, ಅಂಬಿಕಾ ಮಹೇಂದ್ರಕರ, ಮಹಬೂಬಿ ರಮಣೆ, ಚಂದ್ರು ಬಂಡಿವಡ್ಡರ, ಮಹಾಂತೇಶ ಹರಿಜನ, ರಾಜೇಂದ್ರ ಮರಗಪ್ಪನವರ, ಯಲ್ಲಪ್ಪ ಚಿಲ್ಲೂರಬಡ್ನಿ, ಜಾಫರ ನಾರಲಬೌಡಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts