More

    ವರಮಹಾಲಕ್ಷ್ಮೀ ಹಬ್ಬಕ್ಕೆ ಮಲೆನಾಡು ಸಜ್ಜು

    ಶಿವಮೊಗ್ಗ: ನಾಗರ ಪಂಚಮಿ ಬಳಿಕ ಮೊದಲ ಹಬ್ಬ ವರಮಹಾಲಕ್ಷ್ಮಿ ಪೂಜೆಗೆ ನಗರದಲ್ಲಿ ಭರ್ಜರಿ ಸಿದ್ಧತೆ ನಡೆದಿದ್ದು, ಮುನ್ನದಿನವಾದ ಗುರುವಾರವೇ ಗ್ರಾಹಕರು ಹಬ್ಬಕ್ಕೆ ಬೇಕಾದ ಹೂವು, ಹಣ್ಣುಗಳ ಖರೀದಿಸಿದರು. ಆದರೆ ಸಂಜೆ ಸುರಿದ ಭಾರಿ ಮಳೆಯು ವ್ಯಾಪಾರ-ವಹಿವಾಟಿಗೆ ಕೊಂಚ ಅಡ್ಡಿಯುಂಟು ಮಾಡಿತು.
    ಮಧ್ಯಾಹ್ನದ ಬಳಿಕ ನಗರದ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಖಾಸಗಿ ಬಸ್ ನಿಲ್ದಾಣದ ಬಳಿ ಹೂವಿನ ಮಾರ್ಕೆಟ್, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಲಕ್ಷ್ಮೀ ಟಾಕೀಸ್ ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ಹೂವು, ಹಣ್ಣು, ಬಾಳೆಕಂದುಗಳ ವ್ಯಾಪಾರ ಬಹಳ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಹೂವು ಹಣ್ಣಿನ ಬೆಲೆಯೂ ಹೆಚ್ಚಾಗಿತ್ತು. ಆದರೂ ಜನ ಹೂವು ಹಣ್ಣನ್ನು ಖರೀದಿಗೆ ಮುಗಿಬಿದ್ದರು.
    ಕಳೆದೆರಡು ವರ್ಷ ಕರೊನಾದಿಂದ ವರಮಹಾಲಕ್ಷ್ಮೀ ಪೂಜೆಯನ್ನು ಸರಳವಾಗಿದ್ದ ಮಾಡಿದ್ದ ಜನರು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತಯಾರಿ ಮಾಡಿಕೊಂಡರು. ವರಮಹಾಲಕ್ಷ್ಮಿ ಹಬ್ಬವನ್ನು ಹಲವರು ವ್ರತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಮನೆಗಳಲ್ಲಿಯೂ ಹಬ್ಬದ ಸಿದ್ಧತೆ ಭರ್ಜರಿಯಾಗಿತ್ತು. ದೇವಾಲಯಗಳಲ್ಲಿಯೂ ವಿಶೇಷ ಪೂಜೆಗಳು ನಡೆಯಲಿದ್ದು ಎಲ್ಲ ತಯಾರಿ ಮಾಡಿಕೊಂಡಿದ್ದರು.
    ಅಂಗಡಿಗಳಲ್ಲಿ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದರು. ಹೂವು, ಹಣ್ಣಿನ ವ್ಯಾಪಾರಿಗಳೂ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ರಸ್ತೆ ಬದಿಗಳಲ್ಲಿಯೂ ವ್ಯಾಪಾರ ಮಾಡುತ್ತಿದ್ದ ದೃಷ್ಯ ಕಂಡು ಬಂದಿತು. ಹಬ್ಬದ ಹಿನ್ನೆಲೆಯಲ್ಲಿ ಕೆಲವೊಂದು ಪದಾರ್ಥಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡಿರುವುದರಿಂದ ಟಿವಿ, ಫ್ರಿಜ್ ಇನ್ನಿತರೆ ಪದಾರ್ಥಗಳ ಖರೀದಿಯೂ ಜೋರಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts