More

    ಸುಂದರ ನಾಳೆಗಾಗಿ ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನಮಹೋತ್ಸವ

    ಮೂಡುಬಿದಿರೆ: ವಿಶ್ವದೆಲ್ಲೆಡೆ ಕಾಡು ನಾಶವಾಗುತ್ತಿರುವುದೇ ತಾಪಮಾನ ಏರಿಕೆಗೆ ಮೂಲ ಕಾರಣ. ಶುದ್ಧ ಗಾಳಿ, ಜಲ, ಆಹಾರ ಬೆಳೆ ನಮಗೆ ಲಭಿಸಲು ನಾವು ಸಸ್ಯ ಸಂಪತ್ತನ್ನು ಬೆಳೆಸಲೇಬೇಕಾಗಿದೆ ಎಂದು ದ.ಕ. ಹಾಲು ಒಕ್ಕೂಟ ಮಾರುಕಟ್ಟೆ ಅಧಿಕಾರಿ ಡಾ.ರವಿರಾಜ ಉಡುಪ ಹೇಳಿದರು.

    ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ, ಮುಂಡ್ಕೂರು-ಕಡಂದಲೆ ಲಯನ್ಸ್ ಕ್ಲಬ್, ದ.ಕ. ಹಾಲು ಒಕ್ಕೂಟ, ಮುಂಡ್ಕೂರು ಭಾರ್ಗವ ಜೇಸಿ, ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ, ಪಾಲಡ್ಕ ಗ್ರಾಪಂ ಆಶ್ರಯದಲ್ಲಿ ಸೋಮವಾರ ಕಡಂದಲೆ ಹೈಸ್ಕೂಲು ಪರಿಸರದಲ್ಲಿ ಸೋಮವಾರ ವನಮಹೋತ್ಸವದಲ್ಲಿ ಮಾತನಾಡಿದರು.

    ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೆ.ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಹಾಲು ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮೂಡುಬಿದಿರೆ ಎಸಿಎಫ್ ಸತೀಶ್ ಎನ್., ವಲಯ ಅರಣ್ಯ ಅಧಿಕಾರಿ ಹೇಮಗಿರಿ ಅಂಗಡಿ, ಪಾಲಡ್ಕ ಗ್ರಾಪಂ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ ಶೆಟ್ಟಿ, ದ.ಕ. ಹಾಲು ಒಕ್ಕೂಟ ಕಾರ್ಯನಿರ್ವಹಣಾಧಿಕಾರಿ ಸೌಂದರ್ಯ, ಪಂಚಾಯಿತಿ ಕಾರ್ಯದರ್ಶಿ ಮೋಹಿನಿ, ಕಡಂದಲೆ ಪ್ರೌಢಶಾಲೆ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ, ಜೇಸಿಸ್ ಅಧ್ಯಕ್ಷ ಸುರೇಂದ್ರ ಭಟ್, ಮುಂಡ್ಕೂರು ಕಡಂದಲೆ ಲಯನ್ಸ್ ಅಧ್ಯಕ್ಷ ಸಂದೀಪ್ ಶೆಟ್ಟಿ ಸಚ್ಚೇರಪರಾರಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ದಿನಕರ ಕುಂಭಾಶಿ ಸ್ವಾಗತಿಸಿದರು. ಶಿಕ್ಷಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಉಪವಲಯ ಅರಣ್ಯ ಅಧಿಕಾರಿ ಅಶ್ವಿತ್ ಗಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ಕಡಂದಲೆ ಪ್ರೌಢಶಾಲೆ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. ಇತರ ಶಾಲೆಗಳ ಮುಖ್ಯಸ್ಥರು, ರೈತರ ಸಹಿತ ಗ್ರಾಮಸ್ಥರಿಗೆ ಫಲಬಿಡುವ ಗಿಡಗಳನ್ನು ವಿತರಿಸಲಾಯಿತು.

    ಕೃಷಿ, ಹೈನುಗಾರಿಕೆ ಉಳಿಯಲು, ನೆಲ, ಜಲ, ವನ್ಯ ಸಂಪತ್ತು ಬೇಕು. ಹಿರಿಯರ ಜತೆಗೆ ಮಕ್ಕಳೂ ಪ್ರಕೃತಿ ಪ್ರೀತಿಯನ್ನು ಬೆಳೆಸುವುದು ಬಹಳ ಮುಖ್ಯ.
    – ಕೆ.ಪಿ.ಸುಚರಿತ ಶೆಟ್ಟಿ ದ.ಕ. ಹಾಲು ಒಕ್ಕೂಟ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts