More

    ಅರಸು ಆದರ್ಶವನ್ನು ಮೈಗೂಡಿಸಿಕೊಳ್ಳಿ: ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಹೇಳಿಕೆ

    ಮಂಡ್ಯ: ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಾಲ್ಯದಿಂದಲೇ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಕರೆ ನೀಡಿದರು.
    ತಾಲೂಕಿನ ತೂಬಿನಕೆರೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೃಷಿಕ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ವಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ 107 ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವನ ಮಹೋತ್ಸವಕ್ಕೆ ಚಾಲನೆ ನೀಡಿ ವಾತನಾಡಿದರು.
    ಅರಣ್ಯ ಸಂಪತ್ತು ಇದ್ದರೆ ಜೀವರಾಶಿಗಳ ಸಂಪತ್ತು ವೃದ್ಧಿಯಾಗುತ್ತದೆ. ಜೀವರಾಶಿಗಳಿದ್ದರೆ ವಾತ್ರ ವಾನವ ಸಂಪತ್ತು ಆರೋಗ್ಯಕರವಾಗಿರಲು ಸಾಧ್ಯ. ಅರಣ್ಯ ಊರಿಗೊಂದು ಇರಬೇಕಿದೆ ಎಂದು ನುಡಿದರು.
    ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ನಾಡು ಕಂಡ ಶ್ರೇಷ್ಟ ರಾಜಕಾರಣಿ ಮತ್ತು ಮೀಸಲಾತಿ ಜನಕ ಡಿ.ದೇವರಾಜ ಅರಸು ಅವರನ್ನು ಸದಾ ಸ್ಮರಿಸಿಕೊಳ್ಳುವುದು ಅತ್ಯವಶ್ಯಕ. ಪ್ರತಿ ವ್ಯಕ್ತಿಯೂ ಸಹ ತನ್ನ ವತಿಯಿಂದ ವಾಯುವಾಲಿನ್ಯ, ಜಲವಾಲಿನ್ಯ, ಶಬ್ದವಾಲಿನ್ಯ, ವಿಕಿರಣ ವಾಲಿನ್ಯ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು.
    ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್ ಕುವಾರ್, ಎಸಿಎಫ್ ಮಹದೇಸ್ವಾಮಿ, ಆರ್‌ಎಫ್‌ಒ ಚೈತ್ರಾ, ಎಆರ್‌ಎಫ್‌ಒ ಸುರೇಶ್, ವಿಸ್ತರಣಾಧಿಕಾರಿಗಳಾದ ಹರೀಶ್, ಸತೀಶ್, ರಾಜೇಶ್ ಚೌಹಾಣ್, ಪುಷ್ಪಾ, ನಿಲಯಪಾಲಕರಾದ ಶ್ರೀನಿವಾಸ್, ಮಂಜು ಇತರರಿದ್ದರು.
    ಇದೇ ವೇಳೆ ನಿಲಯದ ಆವರಣದಲ್ಲಿ ಡಿ.ದೇವರಾಜು ಅರಸು ಅವರ 107ನೇ ಜಯಂತಿ ಅಂಗವಾಗಿ 107 ಸಸಿಗಳನ್ನು ನೆಟ್ಟು ಮರ ವಾಡುವ ಪ್ರತಿಜ್ಞೆ ವಿಧಿಸುವ ಮೂಲಕ ನೆಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts