More

    ಮೌಲ್ಯಾಧಾರಿತ ವ್ಯಕ್ತಿ ಡಾ. ಚಿತ್ತರಂಜನ್

    ಭಟ್ಕಳ: ಮಹಾನ್ ವ್ಯಕ್ತಿಗಳ ಸ್ವಭಾವ ಅತಿ ವಿಶಿಷ್ಟವಾಗಿ, ಅವಶ್ಯಕತೆಗಳಿಗೆ ಅನುಗುಣವಾಗಿ, ವಜ್ರದಂತೆ ಕಠೋರವಾಗಿ, ಹೂವಿನಂತೆ ಮೃದುವಾಗಿರುತ್ತದೆ. ಸಾಮಾಜಿಕ ನ್ಯಾಯ, ಶಿಕ್ಷಣ, ಮೂಲಸೌಕರ್ಯಗಳನ್ನು ಕ್ಷೇತ್ರದ ಜನತೆಗೆ ಒದಗಿಸುವುದು ಚಿತ್ತಣ್ಣನ ಬಯಕೆಯಾಗಿತ್ತು. ಎಲ್ಲ ಮೌಲ್ಯಗಳನ್ನು ಅವರು ಹೊಂದಿದ್ದರು ಎಂದು ಡಾ. ಚಿತ್ತರಂಜನ್ ಸಹೋದರಿ ಶಾಲಿನಿ ಮೂರ್ತಿ ಹೇಳಿದರು.

    ಇಲ್ಲಿನ ಕಾಶಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಚಿತ್ತರಂಜನ್ ಜೀವನ ಚರಿತ್ರೆ ‘ಅಜಾತ ಶತ್ರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಅವರು ಮೀನುಗಾರರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಬಂದರು ವಿಸ್ತರಣೆ ಕನಸು ಕಂಡಿದ್ದರು ಎಂದರು. ಡಾ. ಚಿತ್ತರಂಜನ್ ಪುತ್ರ ಡಾ. ರಾಜೇಶ ಯು. ಮಾತನಾಡಿ, ನನ್ನ ತಂದೆ ಪಕ್ಷಾತೀತವಾಗಿ ಜನರ ಸೇವೆ ಮಾಡಿದ್ದಾರೆ. ಅವರ ಜೀವನವೇ ಒಂದು ಸಂದೇಶ ಎಂದರು.

    ಎ.ಎನ್. ಪೈ ಮಾತನಾಡಿ, ಡಾ. ಚಿತ್ತರಂಜನ್ ಅವರ ಪ್ರಮುಖ 3 ಕನಸುಗಳಾದ ಹೆಂಜಲೆ ಸೇತುವೆ, ಬಂದರು ಸೇತುವೆ, ಕಡವಿನಕಟ್ಟೆಯಿಂದ ನೀರು ಪೂರೈಕೆಯನ್ನು ಹಿಂದಿನ ಶಾಸಕ ಮಂಕಾಳ ವೈದ್ಯ ಪೂರೈಸಿದ್ದಾರೆ. ಡಾ. ಚಿತ್ತರಂಜನ್ ಅವರ ಕೊಲೆ ಮಾಡಿದವರ ಪತ್ತೆ ಹಚ್ಚಿ ಬಂಧಿಸುವ ಕಾರ್ಯವನ್ನು ಇಂದಿನ ಶಾಸಕ ಸುನೀಲ ನಾಯ್ಕ ಮಾಡಿಸಲಿ ಎಂದರು.

    ವಸಂತ ಖಾರ್ವಿ, ಮಳ್ಳಾ ನಾಯ್ಕ, ವಿಠಲ ಪ್ರಭು, ಹನುಮಂತ ಶ್ಯಾನಭಾಗ, ನಾಗೇಂದ್ರ ಶೆಟ್ಟಿ, ಮಾಸ್ತಿ ವಿ. ಹೆಬಳೆ ಮಾತನಾಡಿದರು.

    ಡಾ. ಚಿತ್ತರಂಜನ್ ನೆನಪಿಗಾಗಿ ಚಂದ್ರಹಾಸ ನಾಯಕ ಅವರು 25 ಸಾವಿರ ರೂ. ಮೊತ್ತದ ಚೆಕ್ ಅನ್ನು ಶ್ರೀರಾಮ ಸಮರ್ಪಣಾ ನಿಧಿಗೆ ಹಸ್ತಾಂತರಿಸಿದರು. ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಕಿಶನ್ ಬಲ್ಸೆ, ಶಿವಾನಿ ಶಾಂತರಾಮ ಮಾತನಾಡಿದರು. ಗಣಪತಿ ಶಿರೂರ ಸ್ವಾಗತಿಸಿದರು. ಗಂಗಾಧರ ನಾಯ್ಕ, ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts