More

    ವಚನ ಸಾಹಿತ್ಯದ ಅಧ್ಯಯನ ಅಗತ್ಯ

    ರಾಯಚೂರು: ವಚನ ಸಾಹಿತ್ಯದಲ್ಲಿ ಸಾಮಾಜಿಕ ಸಮಸ್ಯೆಗಳು ಹಾಗೂ ವೈಚಾರಿಕ ಚಿಂತನೆಗಳು ಅಡಕವಾಗಿದ್ದವು. ಹೀಗಾಗಿ ವಚನ ಸಾಹಿತ್ಯ ಇಂದಿಗೂ ಪ್ರೇರಣಾದಾಯಕವಾಗಿದೆ ಎಂದು ಪ್ರೌಢಶಾಲೆ ಮುಖ್ಯಶಿಕ್ಷಕಿ ಅಕ್ಕಮಹಾದೇವಿ ಎಸ್.ಉಪ್ಪಿನ್ ಹೇಳಿದರು.

    ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಶರಣ ಚಿಂತನ ವಚನ ಮಂಥನ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣೆ ಮುಕ್ತಯಕ್ಕ ಅವರ ಸಾಹಿತ್ಯ ಕುರಿತು ಭಾನುವಾರ ಮಾತನಾಡಿದರು. ವಚನ ಸಾಹಿತ್ಯ ಕನ್ನಡ ಭಾಷಾ ಸಮೃದ್ಧಿಯ ಬಹುದೊಡ್ಡ ಆಗರವಾಗಿದೆ ಎಂದರು.

    ಕನ್ನಡ ಸಾಹಿತ್ಯದ ಸತ್ವ ಮತ್ತು ಶಬ್ಧ ಸಂಪತ್ತು ಅರಿತುಕೊಳ್ಳಬೇಕಾದರೆ ವಚನ ಸಾಹಿತ್ಯ ಅಧ್ಯಯನ ಮಾಡಬೇಕಿದೆ. ಅದರಲ್ಲೂ ಮುಖ್ಯವಾಗಿ ವಚನಗಾರ್ತಿಯರು ಬಳಸಿರುವ ಭಾಷಾ ಪ್ರೌಢಿಮೆ ಎಲ್ಲರಿಗೂ ಮಾದರಿಯಾಗಿದೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಶರಣೆ ಸತ್ಯಕ್ಕ ಸಾಹಿತ್ಯದ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ವಚನಗಾರ್ತಿಯರ ಚಿಂತನೆಗಳು ಉನ್ನತ ಮಟ್ಟದ್ದಾಗಿದ್ದವು ಎಂದು ಅಕ್ಕಮಹಾದೇವಿ ಎಸ್.ಉಪ್ಪಿನ್ ಹೇಳಿದರು.
    ನಿವೃತ್ತ ಪ್ರಾಧ್ಯಾಪಕ ಚನ್ನಮಲ್ಲಿಕಾರ್ಜುನ ಮಾತನಾಡಿ, 12ನೇ ಶತಮಾನದ ಶರಣರ ಹೋರಾಟದ ಬದುಕನ್ನು ಶರಣ ಚಳವಳಿ ಎನ್ನಬಹುದು. ಶರಣರ ಸಾಹಿತ್ಯದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಿದ್ದು, ಈ ಕುರಿತು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಹನೆ ಬೇಕು. ವಚನ ಸಾಹಿತ್ಯ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts