More

    ಗುಡ್ ನ್ಯೂಸ್…! ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ ಈ ರಾಜ್ಯ

    ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜೂನ್ 26 ರಂದು ಒಂದು ಕೋಟಿ ಜನರಿಗೆ ಉದ್ಯೋಗ ಘೋಷಿಸಲಿದ್ದು, ಹೊಸ ರೀತಿಯ ದಾಖಲೆ ನಿರ್ಮಿಸಲಿದ್ದಾರೆ.
    ಅಲ್ಲಿಗೆ, ಉತ್ತರ ಪ್ರದೇಶ ಒಂದೇ ಸುತ್ತಿನಲ್ಲಿ ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ದೇಶದ ಮೊದಲ ರಾಜ್ಯವಾಗಲಿದೆ.
    ಲಾಕ್ ಡೌನ್ ಅವಧಿಯಲ್ಲಿ ರಾಜ್ಯಕ್ಕೆ ಮರಳಿದ ವಲಸೆ ಕಾರ್ಮಿಕರು ಈ ಉದ್ಯೋಗ ಯೋಜನೆಯ ಪ್ರಮುಖ ಫಲಾನುಭವಿಗಳಾಗಿರುತ್ತಾರೆ.

    ಇದನ್ನೂ ಓದಿ: ಚೀನಾ ನಿರ್ಮಿತ ವಿದ್ಯುತ್ ಮೀಟರ್ ಬಹಿಷ್ಕರಿಸಿದ ಯೋಗಿ ಸರ್ಕಾರ


    ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಲಿದ್ದಾರೆ.
    ಉತ್ತರ ಪ್ರದೇಶದಲ್ಲಿ ಸೃಜನೆಯಾಗುತ್ತಿರುವ ಒಟ್ಟು ಉದ್ಯೋಗಗಳ ಪೈಕಿ ಅಂದಾಜು ಶೇ.50 ರಷ್ಟು ಉದ್ಯೋಗಗಳು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇರುವುದರಿಂದ ಈ ಯೋಜನೆ ಪ್ರಮುಖ ಉದ್ಯೋಗ ಕೊಡುಗೆ ನೀಡಲಿದೆ.

    ಉತ್ತರ ಪ್ರದೇಶಕ್ಕೆ ಮರಳುವ ವಲಸೆ ಕಾರ್ಮಿಕರ ಕೌಶಲ ವಿಶ್ಲೇಷಣೆ ಮಾಡಲು ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಅವರಿಗೆ ಅವರ ಕೌಶಲಕ್ಕನುಗುಣವಾಗಿ ಕೆಲಸ ಒದಗಿಸಬಹುದು.

    ಇದನ್ನೂ ಓದಿ:  ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ವಿಶ್ವಸಂಸ್ಥೆಯಿಂದ ಗೌರವ…


    ಸರ್ಕಾರದ ವಕ್ತಾರರ ಪ್ರಕಾರ, ಉತ್ತರಪ್ರದೇಶದಲ್ಲಿ ಅಂದಾಜು 1.80 ಕೋಟಿ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಕಾರ್ಡುದಾರರಿದ್ದು, ಅವರಲ್ಲಿ 85 ಲಕ್ಷ ಕಾರ್ಡುದಾರರು ಸಕ್ರಿಯರಾಗಿದ್ದಾರೆ.
    ಜನರಿಗೆ ಕೆಲಸ ಮಾಡಲು ನದಿಗಳ ಪುನರುತ್ಥಾನ, ಗ್ರಾಮೀಣ ರಸ್ತೆಗಳ ನಿರ್ಮಾಣ, ಸಸಿಗಳನ್ನು ನೆಡಲು ಕೊಳಗಳು ಮತ್ತು ಹೊಂಡಗಳನ್ನು ಅಗೆಯುವುದು ಮತ್ತು ಇತರ ಕೆಲಸಗಳನ್ನು ಗ್ರಾಮೀಣ ಉದ್ಯೋಗ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ.

    ಇದನ್ನೂ ಓದಿ: ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ


    ರಾಜ್ಯ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ ಪ್ರಕಾರ, “ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುವ ಉದ್ಯೋಗಗಳಿಗೆ ಹೆಚ್ಚುವರಿಯಾಗಿ ಕೆಲಸ ಒದಗಿಸಲು ನಾವು ಎಲ್ಲ ಪ್ರಮುಖ ಇಲಾಖೆಗಳಲ್ಲಿ ತೊಡಗಿದ್ದೇವೆ. ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಇಲಾಖೆ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆಗಳು ಸಹ ಉದ್ಯೋಗಗಳ ಸೃಷ್ಟಿಗೆ ಕೊಡುಗೆ ನೀಡಲಿವೆ ಎಂದು ತಿಳಿಸಿದ್ದಾರೆ.
    ವಿಶೇಷವೆಂದರೆ, ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ನರೆಡ್ಕೊ) ರಾಜ್ಯ ಘಟಕವು ರಾಜ್ಯಕ್ಕೆ ಸೇರಿದ ಒಂದು ಲಕ್ಷ ಕಾರ್ಮಿಕರಿಗೆ ವಿವಿಧ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಉದ್ಯೋಗವನ್ನು ನೀಡುತ್ತದೆ.

    ಇದನ್ನೂ ಓದಿ:  ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್​…!

    ಕಳೆದ ತಿಂಗಳು, ನರೆಡ್ಕೊ (ಯುಪಿ)- ಉತ್ತರ ಪ್ರದೇಶ ಸರ್ಕಾರದೊಂದಿಗೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿದ್ದು, ರಾಜ್ಯಕ್ಕೆ ಮರಳಿದ ವಲಸೆ ಕಾರ್ಮಿಕರಿಗೆ ತಮ್ಮ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಉದ್ಯೋಗವನ್ನು ನೀಡಲು ಮುಂದಾಗಿತ್ತು. 

    ಟ್ರಂಪಣ್ಣಾ… ಎಚ್‌1ಬಿ ವೀಸಾ ರದ್ದುಗೊಳಿಸಿದ್ರೆ ನಿಮ್‌ ಹೆಂಡ್ತಿ ಗತಿಯೇನಣ್ಣಾ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts