More

    ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

    ವಿಜಯಪುರ: ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದವು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಸಂಘಟನಾ ಸಂಚಾಲಕ ಜೀತೇಂದ್ರ ಕಾಂಬಳೆ ಮಾತನಾಡಿ, ಉತ್ತರ ಪ್ರದೇಶದ ಹಾಥರಸ್‌ನ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಮಾತನಾಡಿ, ಅತ್ಯಾಚಾರಕ್ಕೆ ಒಳಗಾಗಿ ಮೃತ ಯುವತಿಯ ಶವವನ್ನು ಪಾಲಕರಿಗೆ ನೀಡದೆ ಪೊಲೀಸರೇ ಅಂತ್ಯಸಂಸ್ಕಾರ ಮಾಡಿದ್ದು ಖಂಡನೀಯ. ಆರೋಪಿಗಳನ್ನು ರಕ್ಷಿಸಲು ಹಾಗೂ ಸಾಕ್ಷೃ ನಾಶ ಮಾಡಲು ಶವವನ್ನು ಸುಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ದೂರಿದರು.
    ಜಿಲ್ಲಾ ಸಂಘಟನಾ ಸಂಚಾಲಕ ಚೇತನ ತೊರವಿ, ಮಹಾಂತೇಶ ರಾಠೋಡ, ಮುಖಂಡರಾದ ಬಸವರಾಜ ದೊಡಮನಿ, ಶಂಕರ ಚಲವಾದಿ, ಶಿವು ಮೇಲಿನಮನಿ, ಸಂಗೀತಾ ಮರಾಠೆ, ಚಂದ್ರು ಮೇಲಿನಕೇರಿ, ಚಂದ್ರು ದ್ಯಾಬೇರಿ, ಸಂಗಮೇಶ ಈರಸೂರ, ವಿಶ್ವನಾಥ ಕಾಂಬಳೆ, ಭೀಮು ಉತ್ನಾಳ,ಗೋವಿಂದ ದೊಡ್ಡಮನಿ, ದತ್ತಾತ್ರೇಯ ಆಲಮೇಲಕರ, ಶಶಿ ನಾಯ್ಕೋಡಿ, ಸೋಮು ರಣದೇವಿ, ಪ್ರದೀಪ ಚಲವಾದಿ, ಗಂಗಾಧರ ಚಿಕ್ಕಲಕಿ, ಬಸು ಕಾಂಬಳೆ ಇತರರು ಭಾಗವಹಿಸಿದ್ದರು.

    ಛತ್ರಪತಿ ಶಿವಾಜಿ ಸಂಘಟನೆಯಿಂದ ಆಗ್ರಹ

    ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಛತ್ರಪತಿ ಶಿವಾಜಿ ೌಂಡೇಷನ್ ವತಿಯಿಂದ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
    ಶಿವಾಜಿ ೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಕಿರಣ ಕಾಳೆ ಮಾತನಾಡಿ, ಅತ್ಯಾಚಾರ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸುವಂತಾಗವೇಕು ಎಂದು ಒತ್ತಾಯಿಸಿದರು.
    ಮುಖಂಡರಾದ ರಾಹುಲ್ ಸೂರ್ಯವಂಶಿ, ಗಣೇಶ ಗರುಡಕರ, ವಿನಾಯಕ ತೆಳಕೇರಿ, ಮುರುಗೇಶ ಶಹಾಪುರ, ರೋಹಿತ ಕಡೆಮುರ, ನಿಶ್ಚಿತ ಸೋಲಾಪುರ, ವಿನಾಯಕ ಭಿಸೆ, ಸಂಜೀವ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

    ಸಿಬಿಐ ತನಿಖೆಗೆ ಕರವೇ ಮನವಿ

    ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಮಾತನಾಡಿ, ಉತ್ತರ ಪ್ರದೇಶದ ಹಾಥರಸ್‌ನ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡನೀಯ. ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿಯೇ ಸಂತ್ರಸ್ತೆಯ ಅಂತ್ಯ ಸಂಸ್ಕಾರವನ್ನು ತುರಾತುರಿಯಲ್ಲಿ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಅಶ್ವಿನಿ ಕುಲಕರ್ಣಿ, ಬಾಸು ರಾಠೋಡ, ಭೀಮಾಶಂಕರಯ್ಯ ವಿರಕ್ತಮಠ, ಸರ್ಜಾಬಾಯಿ ಮಾನೆ, ಅಮೋಘಿ ಮಾನೆ, ಮಹಾದೇವಿ ತಾಂಬಾ, ಗಿರೀಶ ಕುಲಕರ್ಣಿ, ಬಾಬು ಲಮಾಣಿ, ಅನಿಲ ಸಾಗರ, ಅಶೋಕ ರಾಠೋಡ, ಎ.ಎಂ. ಮಮದಾಪುರ, ವಸಂತರಾವ ಕುಲಕರ್ಣಿ, ಡಿ.ಸಿ.ಗುಳೇದಗುಡ್ಡ, ಕುಮಾರ ವಾಘಮೋಡೆ, ರವಿ ನಾಟಿಕಾರ, ಸಾಬು ಬ್ಯಾಳಿ, ಶಿವಲಿಂಗ ಮಾದರ, ಸಾಹೇಬಲಾಲ ದಳವಾಯಿ, ಶ್ರೀಶೈಲ ರಾಯಣ್ಣವರ ಮುಂತಾದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts