More

    ಉಸ್ತಾದ್ ಹಮೀದ್‌ಖಾನ್ ಪುಣ್ಯಸ್ಮರಣೆ, ಸಂಗೀತೋತ್ಸವ

    ಧಾರವಾಡ: ಧಾರವಾಡ ಘರಾಣೆಯ ೬ನೇ ತಲೆಮಾರಿನ ಸಿತಾರ ವಾದಕ ಉಸ್ತಾದ್ ಹಮೀದ್‌ಖಾನ್‌ರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಾಧಕ ಪ್ರಶಸ್ತಿ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಅ. 7ರಂದು ಸಂಜೆ 5 ಗಂಟೆಗೆ ನಗರದ ಸೃಜನಾ ರಂಗಮ೦ದಿರದಲ್ಲಿ ನಡೆಯಲಿವೆ.
    ದಕ್ಷಿಣ ಭಾರತದಲ್ಲಿ ಸಿತಾರವಾದನ್ನು ಪರಿಚಯಿಸಿದ ಕೀರ್ತಿ ಸಿತಾರರತ್ನ ರಹಿಮತ್‌ಖಾನ್‌ರದು. ಅವರ ಮೊಮ್ಮಗ ಉಸ್ತಾದ್ ಹಮೀದ್‌ಖಾನ್. ಕರ್ನಾಟಕದಿಂದ ಅನೇಕ ಸಿತಾರ ವಾದಕರು ಹೊರಹೊಮ್ಮುವಲ್ಲಿ ಅವರ ಪಾತ್ರ ದೊಡ್ಡದು. ಕಲಕೇರಿ ಸಂಗೀತ ಶಾಲೆಯ ಸ್ಥಾಪಕ ಸದಸ್ಯರು. ಅಂಥ ಗುರುವಿನ ಸಂಸ್ಮರಣೆಯಲ್ಲಿ ಅವರ ಶಿಷ್ಯರು ಕಲಾ ಸಂವಹನ ಟ್ರಸ್ಟ್ ಸಂಸ್ಥೆಯು ಪ್ರತಿವರ್ಷ ಸಂಗೀತ ಸಾಧಕ ಪ್ರಶಸ್ತಿ ನೀಡುತ್ತಿದೆ.
    ಪ್ರಸಕ್ತ ವರ್ಷ `ಸಂಗೀತ ಸಾಧಕ’ ಪ್ರಶಸ್ತಿಯನ್ನು ಬಾನ್ಸುರಿ ಪ್ರತಿಭೆ ಪಂ. ಪ್ರವೀಣ ಗೋಡಖಿಂಡಿ ಅವರಿಗೆ ಪ್ರದಾ ಮಾಡಲಾಗುವುದು. ಸಂಗೀತ ವಾದ್ಯಗಳ ಹಿರಿಯ ತಯಾರಕ ಬಾಳಾಸಾಹೇಬ ಮಿರಜಕರ ಅವರನ್ನು ಸನ್ಮಾನಿಸಲಾಗುವುದು.
    ಅಂದು ಸಂಜೆ ೭ಕ್ಕೆ ನಡೆಯುವ ಸಂಗೀತೋತ್ಸವದಲ್ಲಿ ವಿಜಯಕುಮಾರ ಪಾಟೀಲ ಹಾಗೂ ವಿನಾಯಕ ಹೆಗಡೆ ಅವರ ಗಾಯನದ ಜುಗಲಬಂದಿ, ಪ್ರಶಸ್ತಿ ಪುರಸ್ಕೃತ ಪಂ. ಪ್ರವೀಣ ಗೋಡಖಿಂಡಿ ಅವರ ಬಾನ್ಸುರಿ ವಾದನದ ನಿನಾದ ಹರಿದುಬರಲಿದೆ. ಉಸ್ತಾದ್ ಹಮೀದ್‌ಖಾನ್ ಹಾಗೂ ಮೊಹಸಿನ್‌ಖಾನ್ ಶಿಷ್ಯರಿಂದ ಸಿತಾರ ಮಾಧುರ್ಯ ಎಂಬ ಸಾಮೂಹಿಕ ಸಿತಾರವಾದನದ ಝೇಂಕಾರ ಮೊಳಗಲಿದೆ.
    ಕಲಾವಿದರಿಗೆ ಪಂ. ರವೀಂದ್ರ ಯಾವಗಲ್, ಕೇಶವ ಜೋಶಿ, ಬಸು ಹಿರೇಮಠ, ಚಿನ್ಮಯ ನಾಮಣ್ಣನವರ, ಗೋಪಿಕೃಷ್ಣ, ದಯಾನಂದ ಸುತಾರ, ಚಾರುದತ್ತ ಮಹಾರಾಜ, ನಿಶಾಂತ ದಿವಟೆ ವಿವಿಧ ವಾದ್ಯಗಳ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts