More

    ತಂದೆಯಾದ ಆಸೀಸ್​ ಕ್ರಿಕೆಟಿಗ ಉಸ್ಮಾನ್​ ಖವಾಜ

    ಮೆಲ್ಬೋರ್ನ್​: ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಉಸ್ಮಾನ್​ ಖವಾಜ ತಂದೆಯಾಗಿದ್ದಾರೆ. ಪತ್ನಿ ರಾಚೆಲ್​ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಖವಾಜ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ಅವರು ಐಶಾ ಎಂದು ಹೆಸರಿಟ್ಟಿದ್ದಾರೆ.

    ಬಿಗ್​ ಬಾಷ್​ ಲೀಗ್​ನಲ್ಲಿ ಸಿಡ್ನಿ ಥಂಡರ್​ ಪರ ಆಡುವ 33 ವರ್ಷದ ಉಸ್ಮಾನ್​ ಖವಾಜ, 2018ರ ಏಪ್ರಿಲ್​ನಲ್ಲಿ ರಾಚೆಲ್​ರನ್ನು ವಿವಾಹವಾಗಿದ್ದರು. ಮಾರ್ಕೆಟಿಂಗ್​ ವಿದ್ಯಾಭ್ಯಾಸ ಮಾಡಿರುವ ರಾಚೆಲ್​ ಇವೆಂಟ್​ ಮ್ಯಾನೇಜ್​ಮೆಂಟ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಖವಾಜರನ್ನು ಮದುವರೆಯಾಗುವ ಸಲುವಾಗಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು.

    ಇದನ್ನೂ ಓದಿ: ಐಪಿಎಲ್​ ದಿನಾಂಕ ಫಿಕ್ಸ್​, ಧೋನಿ ಅಭಿಮಾನಿಗಳಲ್ಲಿ ಸಂತಸ

    ತಂದೆಯಾದ ಆಸೀಸ್​ ಕ್ರಿಕೆಟಿಗ ಉಸ್ಮಾನ್​ ಖವಾಜ

    ಆಸೀಸ್​ ದೇಶೀಯ ಕ್ರಿಕೆಟ್​ನಲ್ಲಿ ಕ್ವೀನ್ಸ್​ಲ್ಯಾಂಡ್​ ತಂಡವನ್ನು ಮುನ್ನಡೆಸುವ ಪಾಕಿಸ್ತಾನ ಮೂಲದ ಖವಾಜ, ಆಸೀಸ್​ ಪರ 44 ಟೆಸ್ಟ್​ ಆಡಿದ್ದು, 8 ಶತಕಗಳ ಸಹಿತ 2,887 ರನ್​ ಬಾರಿಸಿದ್ದಾರೆ. 40 ಏಕದಿನ ಪಂದ್ಯಗಳಲ್ಲಿ 2 ಶತಕಗಳ ಸಹಿತ 1,554 ರನ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿ ಅವರು ಈ ಹಿಂದೆ ಪುಣೆ ಸೂಪರ್​ಜೈಂಟ್ಸ್​ ತಂಡದ ಪರ ಆಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts