More

    ಸ್ವಾಭಾವಿಕವಾಗಿ ಸಿಗುವ ಆಹಾರ ಪದಾರ್ಥವನ್ನೇ ಬಳಸಿ

    ಹುಬ್ಬಳ್ಳಿ : ಇಂದಿನ ದಿನಗಳಲ್ಲಿ ಕಲಬೆರೆಕೆ ಇಲ್ಲದ ಆಹಾರವನ್ನು ಹುಡುಕುವುದು ಕಷ್ಟ. ಸಂಸ್ಕರಿಸಿದ ಅಥವಾ ಅತಿಯಾಗಿ ಪರಿವರ್ತಿಸಿದ ಆಹಾರ ಪದಾರ್ಥಗಳಿಂದ ಆರೋಗ್ಯ ಹಾಳಾಗುತ್ತಿದೆ. ಸುಲಭ ಮತ್ತು ಸ್ವಾಭಾವಿಕವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸಿ, ಉತ್ತಮ ಆರೋಗ್ಯವಂತರಾಗಿ ಎಂದು ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ರಾಮ ಮೋಹನ್ ಎಚ್. ಹೇಳಿದರು.

    ಧಾರವಾಡದ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೊಗದೊಂದಿಗೆ ಇಲ್ಲಿನ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅವಿಷ್ಕಾರ ಸಪ್ತಾಹ : 2023-24 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಆಹಾರದಲ್ಲಿ ಕಲಬೆರಕೆಯನ್ನು ಗುರುತಿಸುವಿಕೆ ಎಂಬ ವಿಷಯವು ವಿದ್ಯಾರ್ಥಿಗಳಲ್ಲಿನ ಪ್ರಯೋಗಶೀಲತೆ ಮತ್ತು ಅನ್ವೇಷಣಾ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೂಡಿದೆ ಎಂದರು.

    ಕಹಿಯಾಗಿರುವ ಪದಾರ್ಥ ಆರೋಗ್ಯಕ್ಕೆ ಒಳ್ಳೆಯದು, ಸಮಯಕ್ಕೆ ಸರಿಯಾಗಿ ಊಟ ಮಾಡಿ, ಸೂರ್ಯಕಿರಣಗಳಿಗೆ ಮೈವೊಡ್ಡಿ . ಹೆಚ್ಚಾಗಿ ಬೆಲ್ಲವನ್ನು ಬಳಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಮುಖ್ಯ ಭಾಷಣಕಾರರಾಗಿದ್ದ ಸಾಂಸ್ಕ್ರತೀಕ ಚಿಂತಕರು, ಭೌತಾಸ್ತ್ರ ವಿಭಾಗದ ಮುಖ್ಯಸ್ಥರಾದ ಪೂರ್ಣಾನಂದ ಮಳಲಿ ಮಾತನಾಡಿ, ಆರೋಗ್ಯದ ಮೇಲೆ ಕಲಬೆರಕೆಯ ಆಹಾರವನ್ನು ಹೇಗೆ ಮತ್ತು ಏಕೆ ಬಳಸುತ್ತಾರೆ ಎಂಬುದನ್ನು ಪಿಪಿಟಿ ಮೂಲಕ ಮಾಹಿತಿ ನೀಡಿದರು.

    ಉಪ ಪ್ರಾಂಶುಪಾಲ ಮತ್ತು ರಸಾಯನ ಶಾಸ್ತ್ರದ ಮುಖ್ಯಸ್ಥ ರಮೇಶ ಹೊಂಬಾಳೆ, ಆಹಾರದಲ್ಲಿ ಕಲಬೆರಕೆ ಹೇಗೆ ಆಗುತ್ತದೆ ಎಂಬುದನ್ನು ಚಟುವಟಿಕೆ ಆಧಾರಿತ ಪ್ರಯೋಗದಿಂದ ತಿಳಿಸಿಕೊಟ್ಟರು.

    ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್.ಹಿರೇಮಠ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts