More

    ಉತ್ತರ ಪ್ರದೇಶದಲ್ಲಿ ಅಜಾನ್​ಗೆ ಲೌಡ್​ಸ್ಪೀಕರ್​ ಬಳಸುವಂತಿಲ್ಲ

    ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಮಸೀದಿಗಳಲ್ಲಿ ಅಜಾನ್​ ಮಾಡುವಾಗ ಮುಯೆಸಿನ್​ (ಮಹಮ್ಮದೀಯ ಘೋಷಕ) ಲೌಡ್​ಸ್ಪೀಕರ್​ಗಳನ್ನು ಬಲಸುವಂತಿಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

    ಮುಯೆಸಿನ್​ ಅವರ ಲೌಡ್​ಸ್ಪೀಕರ್​ ಇಲ್ಲದೆ ಮಸೀದಿಯ ಪ್ರಾಂಗಣದಲ್ಲಿ ತಮ್ಮದೇ ಧ್ವನಿಯಲ್ಲಿ ಅಜಾನ್​ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

    ರಾಜ್ಯದಲ್ಲಿ ಕೋವಿಡ್​ 19 ಹರಡುವಿಕೆ ತಡೆಯಲು ಲಾಕ್​ಡೌನ್​ ಜಾರಿಯಲ್ಲಿದೆ. ಮುಯೆಸಿನ್​ ಅವರು ತಮ್ಮ ಧ್ವನಿಯನ್ನು ಬಳಸಿ ಮಸೀದಿ ಪ್ರಾಂಗಣದಲ್ಲಿ ಅಜಾನ್​ ಮಾಡುವುದು ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್​ಡೌನ್​ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ನ ನ್ಯಾಯಪೀಠ ಹೇಳಿದೆ.

    ಇದನ್ನೂ ಓದಿ: ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಿಂಗಳಾಂತ್ಯದವರೆಗೆ ಲಾಕ್​ಡೌನ್​ ವಿಸ್ತರಣೆ

    ಕಾನೂನಿನ್ವಯ ಜಿಲ್ಲಾಧಿಕಾರಿಯವರ ಅನುಮತಿ ಪಡೆಯದೆ ಅಜಾನ್​ಗಾಗಿ ಲೌಡ್​ಸ್ಪೀಕರ್​ಗಳನ್ನು ಬಳಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

    ಅಜಾನ್​ ಎಂಬುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ. ಹಾಗೆಂದು ಲೌಡ್​ಸ್ಪೀಕರ್​ ಅಥವಾ ಬೇರಾವುದೇ ಧ್ವನಿವರ್ಧಕವನ್ನು ಬಳಸಿ ಅಜಾನ್​ ಹೇಳಬೇಕೆಂಬುದನ್ನು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಎಂದು ಹೇಳಲಾಗುವುದಿಲ್ಲ. ಹಾಗೂ ಸಂವಿಧಾನದ 25ನೇ ವಿಧಿಯಲ್ಲಿ ವಿವರಿಸಲಾಗಿರುವಂತೆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಅದು ಹೇಳಿದೆ.

    ಮಾನವ ಧ್ವನಿಯಲ್ಲಿ ಅಜಾನ್​ ಮಾಡುವುದು ಕೋವಿಡ್​ 19 ಹರಡುವಿಕೆ ತಡೆಗಟ್ಟಲು ಜಾರಿಗೊಳಿಸಲಾಗಿರುವ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬ ಉತ್ತರ ಪ್ರದೇಶ ಸರ್ಕಾರದ ವಾದವನ್ನು ಒಪ್ಪಲು ನ್ಯಾಯಪೀಠ ನಿರಾಕರಿಸಿತು. ತನ್ಮೂಲಕ ಅದು ಘಾಜಿಪುರ ಮಸೀದಿಗಳಲ್ಲಿ ಅಜಾನ್​ ಮಾಡುವುದನ್ನು ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್​ಪಿಯ ಘಾಜಿಪುರ ಸಂಸದ ಅಫ್ಜಲ್​ ಅನ್ಸಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶಶಿಕಾಂತ್​ ಗುಪ್ತಾ ಮತ್ತು ಅಜಿತ್​ ಕುಮಾರ್​ ಅವರಿದ್ದ ನ್ಯಾಯಪೀಠ ಇತ್ಯರ್ಥಗೊಳಿಸಿತು.

    ‘ನನ್ನ ಮಗನೊಬ್ಬನ ಬಿಡುಗಡೆ ಬೇಡವೇ ಬೇಡ, ಎಲ್ಲ ಸೈನಿಕರು ನನ್ನ ಮಕ್ಕಳಿದ್ದಂತೆ’ ಎಂದು ಪಾಕ್​ಗೆ ಖಂಡತುಂಡವಾಗಿ ಹೇಳಿದ್ದ ಜನರಲ್ ಕಾರ್ಯಪ್ಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts