More

    ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

    ನವದೆಹಲಿ: ಜಾಗರಿಕವಾಗಿ ಅಮೆರಿಕ, ಸ್ಪೇನ್​, ಇಟಲಿ, ಫ್ರಾನ್ಸ್​, ಬ್ರಿಟನ್​ಗಳನ್ನು ಕರೊನಾ ಇನ್ನಿಲ್ಲದಂತೆ ಕಾಡುತ್ತಿದೆ. ಅದರಲ್ಲೂ ಅಮೆರಿಕವೊಂದರಲ್ಲಿಯೇ ಸೋಂಕಿತ ಪ್ರಕರಣಗಳ ಸಂಖ್ಯೆ 12 ಲಕ್ಷ ದಾಟಿದ್ದು, ಸತ್ತವರ ಸಂಖ್ಯೆ 70 ಸಾವಿರ ತಲುಪಿದೆ. ಇನ್ನು ಸ್ಪೇನ್​, ಇಟಲಿ, ಫ್ರಾನ್ಸ್​, ಬ್ರಿಟನ್​ಗಳಲ್ಲಿ ಸರಾಸರಿ 2 ಲಕ್ಷ ಸೋಂಕಿತರಿದ್ದು, ಸಾವಿನ ಸಂಖ್ಯೆ ತಲಾ 20 ಸಾವಿರ ದಾಟಿದೆ.

    ಈವರೆಗೆ ಅಮೆರಿಕ ಕರೊನಾಗೆ ಭಾರಿ ಬೆಲೆ ತೆತ್ತಿದೆ. ಆದರೆ, ಜೂನ್​ ವೇಳೆಗೆ ಅಮೆರಿಕದ ಸ್ಥಿತಿ ಇನ್ನೂ ಚಿಂತಾಜನಕವಾಗಲಿದೆ ಎಂದು ಆ ದೇಶದ ಆಂತರಿಕ ವರದಿಯೇ ಹೇಳುತ್ತಿದೆ.

    ಜೂನ್​ ವೇಳೆಗೆ ಕರೊನಾದಿಂದಾಗಿ ಪ್ರತಿದಿನ 3,000 ಜನರ ಸಾವು ಹಾಗೂ ನಿತ್ಯವೂ 2 ಲಕ್ಷ ಹೊಸ ಪ್ರಕರಣಗಳು ವರದಿಯಾಗಲಿವೆ ಎಂಬ ಆತಂಕಕಾರಿ ವರದಿ ನೀಡಲಾಗಿದೆ. ಇದರ ನಡುವೆಯೇ ಅಮೆರಿಕದ 12 ರಾಜ್ಯಗಳು ಆರ್ಥಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಿವೆ.

    ಇದನ್ನೂ ಓದಿ; ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ

    ಸದ್ಯ ಅಮೆರಿಕದ ಆರ್ಥಿಕ ಸ್ಥಿತಿ ಕೂಡ ಅತ್ಯಂತ ದುಸ್ಥಿತಿಗೆ ತಲುಪಿದೆ. 3 ಕೋಟಿಗೂ ಅಧಿಕ ಜನರು ನಿರುದ್ಯೋಗ ಭತ್ಯೆ ಅಥವಾ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

    ಕರೊನಾದಿಂದಾಗಿ ಮುಂದಿನ ದಿನಗಳು ಭಾರಿ ದುಸ್ತರವಾಗಲಿದೆ. ಈ ನಡುವೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಲಿವೆ ಎಂದು ಅಲ್ಲಿನ ಮಾಧ್ಯಮಗಳು ಎಚ್ಚರಿಕೆ ನೀಡಿವೆ.

    ಆದರೆ, ಸಾವು ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಾಗುವ ವರದಿಯನ್ನು ಶ್ವೇತ ಭವನ ಹಾಗೂ ಸೆಂಟರ್​ ಆಫರ್​ ಡಿಸೀಸ್​ ಕಂಟ್ರೋಲ್​ ಆ್ಯಂಡ್​ ಪ್ರಿವೆನ್ಶನ್​ (ಸಿಡಿಸಿ) ನಿರಾಕರಿಸಿವೆ. ಇದು ಅಧಿಕೃತವಲ್ಲ ಎಂದು ಹೇಳಿವೆ. ಆದರೆ, ವರದಿಯಲ್ಲಿ ಸಿಡಿಸಿ ಲಾಂಛನವನ್ನು ಬಳಸಲಾಗಿದೆ.

    ಈ ವರದಿಯನ್ನು ಅಮೆರಿಕದ ಜಾನ್​ ಹಾಪ್ಕಿನ್ಸ್​ ಬ್ಲೂಮ್​ಬರ್ಗ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನ ಸಾಂಕ್ರಾಮಿಕ ರೋಗಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಸ್ಟಿನ್​ ಲೆಸ್ಲರ್​ ತಯಾರಿಸಿದ್ದಾರೆ ಎಂದು ಹೇಳಲಾಗಿದೆ.

    ‘ಎಣ್ಣೆ’ ಕೊಂಡು ಬಿಲ್​ ತೋರಿಸ್ದವರಿಗೆ ಬೆನ್ನತ್ತಿದ್ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts