More

    ಯಾಕಾದ್ರೂ ಅನ್​ಲಾಕ್​​ಗೆ ಅವಕಾಶ ಕೊಟ್ವೋ…! ಮರುಗುತ್ತಿದ್ದಾರೆ ಅಮೆರಿಕ ಅಧಿಕಾರಿಗಳು; ಭಾರತದಲ್ಲೂ ಭಿನ್ನವಾಗಿಲ್ಲ ಪರಿಸ್ಥಿತಿ

    ವಾಷಿಂಗ್ಟನ್​: ಅಮೆರಿಕದಲ್ಲಿ ಶುಕ್ರವಾರ ಒಂದೇ ದಿನ 45,255 ಹೊಸ ಕರರೊನಾ ಪ್ರಕರಣಗಳು ವರದಿಯಾಗಿವೆ. ಟೆಕ್ಸಾಸ್​ವೊಂದರಲ್ಲಿಯೇ 5,000ಕ್ಕೂ ಅಧಿಕ ಕೇಸ್​ಗಳು ಪತ್ತೆಯಾಗಿವೆ.

    ಹೆಚ್ಚುತ್ತಿರುವ ಕೇಸ್​ಗಳಿಂದಾಗಿ ಅನ್​ ಲಾಕ್​ಡೌನ್​ಗೆ ಯಾಕಾದ್ರೂ ಅವಕಾಶ ನೀಡಿದ್ವೋ ಎಂದು ಅಧಿಕಾರಿಗಳು ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಪಬ್​ ಹಾಗೂ ಬಾರ್​ಗಳನ್ನು ತೆರೆಯಲು ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ.

    ಜನರು ಸಾಮಾನ್ಯ ಜನಜೀವನಕ್ಕೆ ಮರಳುತ್ತಿದ್ದಾರೆ. ಆದರೆ, ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.

    ಇದನ್ನೂ ಓದಿ; ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಈ ಮೊದಲು ಹಿರಿಯರನ್ನು ಹೆಚ್ಚಾಗಿ ಕಾಡುತ್ತಿದ್ದ ಕರೊನಾ ಕಾಯಿಲೆ ಈಗ ಮಗ್ಗಲು ಬದಲಿಸಿದೆ. ಯುವಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇವರು ಹೆಚ್ಚಾಗಿ ಗುಣ ಲಕ್ಷಣ ಹೊಂದಿಲ್ಲದ ರೋಗಿಗಳಾಗಿದ್ದಾರೆ. ಹೀಗಾಗಿ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋನಿ ಫೌಸಿ ಹೇಳಿದ್ದಾರೆ.

    ಸೋಂಕು ಸಮುದಾಯಕ್ಕೆ ಪಸರಿಸಿದ್ದು, ಅದರ ಮೂಲವೇ ಗುಪ್ತವಾಗಿದ್ದು ಯಾರನ್ನು ಕ್ವಾರಂಟೈನ್​ ಮಾಡಬೇಕು, ಯಾರನ್ನು ನಿಗಾದಲ್ಲಿ ಇಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ; ಮಾಸ್ಕ್​ ಧರಿಸೋದು ಜೀವ ವಿರೋಧಿ ಕೃತ್ಯ; ಹುಟ್ಟಿಕೊಂಡಿದ್ದಾರೆ ‘ಆ್ಯಂಟಿ ಮಾಸ್ಕ್​ರ್ಸ್​’ 

    9 ಸಾವಿರ ಹೊಸ ಪ್ರಕರಣ ದಾಖಲಿಸಿರುವ ಫ್ಲೋರಿಡಾದಲ್ಲಿ ಕೊಂಚ ನಿರ್ಬಂಧಗಳನ್ನು ಮತ್ತೆ ವಿಧಿಸಲಾಗುತ್ತಿದೆ. ಇನ್ನೊಂದೆಡೆ ಪರಿಸ್ಥಿತಿ ವಿಷಮಿಸುತ್ತಿದ್ದರೂ, ನ್ಯೂಯಾರ್ಕ್​, ನ್ಯೂಜೆರ್ಸಿ, ಕನೆಕ್ಟಿಕಟ್​ಗಳು ಲಾಕ್​ಡೌನ್​ ವಿನಾಯ್ತಿ ಮುಂದುವರಿಸಿವೆ.

    ಈ ನಡುವೆ ಶಾಲಾ- ಕಾಲೇಜುಗಳನ್ನು ಪ್ರಾರಂಭಿಸುವ ಮಾರ್ಗಸೂಚಿಗಳನ್ನು ಕನೆಕ್ಟಿಕಟ್​ ಘೋ ಷಿಸಿದೆ. ಅಮೆರಿಕಕ್ಕೆ ಹೋಲಿಸಿದಲ್ಲಿ ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂದೇ ತಜ್ಞರು ವಿಶ್ಲೇಷಿಸಿದ್ದಾರೆ.

    10 ಸಾವಿರ ರಟ್ಟಿನ ಮಂಚಗಳು, ಫೋಮ್​ ಹಾಸಿಗೆ, 1,000 ವೈದ್ಯರು…! 300 ಎಕರೆಯಲ್ಲಿ ದೆಹಲಿ ಕೋವಿಡ್​ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts