More

    ಯುಎಸ್ ಓಪನ್: ಉಪಾಂತ್ಯಕ್ಕೇರಿದ ಒಸಾಕಾ, ಬ್ರಾಡಿ

    ನ್ಯೂಯಾರ್ಕ್: ಗ್ರಾಂಡ್ ಸ್ಲಾಂ ಟೂರ್ನಿಗಳ ಎಂಟರ ಘಟ್ಟದಲ್ಲಿ ಅಜೇಯ ದಾಖಲೆ ಮುಂದುವರಿಸಿದ ಪ್ರಶಸ್ತಿ ೇವರಿಟ್ ಎನಿಸಿರುವ ಜಪಾನ್‌ನ ನವೊಮಿ ಒಸಾಕಾ ಮತ್ತು ಅಮೆರಿಕದ ಜೆನ್ನಿರ್ ಬ್ರಾಡಿ ಯುಎಸ್ ಓಪನ್ ಟೆನಿಸ್ ಟೂರ್ನಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಉಪಾಂತ್ಯಕ್ಕೇರಿದ್ದಾರೆ. ವಿಶ್ವ ನಂ.1 ಆಟಗಾರ ನೊವಾಕ್ ಜೋಕೊವಿಕ್ ಮಾಡಿದ ಎಡವಟ್ಟಿನಿಂದ ಎಂಟರ ಘಟಕ್ಕೇರಿದ್ದ ಸ್ಪೇನ್‌ನ ಪ್ಯಾಬ್ಲೊ ಕರ‌್ರೆನೊ ಬುಸ್ಟಾ ಹಾಗೂ ಜರ್ಮನಿಯ ಅಲೆಕ್ಸ್ ಜ್ವೆರೇವ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮೀಸ್‌ಗೇರಿದರು.

    ಫ್ಲೆಷಿಂಗ್ ಮೆಡೋಸ್‌ನಲ್ಲಿ ಚೊಚ್ಚಲ ಬಾರಿಗೆ ಎಂಟರ ಘಟ್ಟದಲ್ಲಿ ಹೋರಾಡಿದ ಸ್ಥಳೀಯ ಪ್ರತಿಭೆ 28ನೇ ಶ್ರೇಯಾಂಕಿತೆ ಜೆನ್ನಿರ್ ಬ್ರಾಡಿ, 23ನೇ ಶ್ರೇಯಾಂಕಿತ ಕಜಾಕ್‌ಸ್ತಾನದ ಆಟಗಾರ್ತಿ ಯೂಲಿಯಾ ಪುಟಿನ್‌ಸೆವಾ ಎದುರು ಸುಲಭ ಜಯ ದಾಖಲಿಸಿದರು. ಅರ್ಥರ್ ಆ್ಯಶೆ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಜಿನ್ನಿರ್ 6-3, 6-2 ನೇರ ಸೆಟ್‌ಗಳಿಂದ ಪುಟಿನ್‌ಸೆವಾ ಅವರನ್ನು ಮಣಿಸಿದರು. ಇದುವರೆಗೆ ಆಡಿರುವ 5 ಪಂದ್ಯಗಳಿಂದ 24 ಗೇಮ್‌ಗಳಷ್ಟೇ ಬಿಟ್ಟುಕೊಟ್ಟಿರುವ 25 ವರ್ಷದ ಬ್ರಾಡಿ, ತಮ್ಮ 13ನೇ ಗ್ರಾಂಡ್ ಸ್ಲಾಂನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೇರಿದರು.

    ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ 4ನೇ ಶ್ರೇಯಾಂಕಿತ ಆಟಗಾರ್ತಿ ನವೊಮಿ ಒಸಾಕಾ 6-3, 6-4 ನೇರ ಸೆಟ್‌ಗಳಿಂದ ಸ್ಥಳೀಯ ಪ್ರತಿಭೆ ಶೆಲ್ಬಿ ರೋಜರ್ಸ್‌ ವಿರುದ್ಧ ಜಯ ದಾಖಲಿಸಿದರು. 4ನೇ ಸುತ್ತಿನಲ್ಲಿ 3 ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅವರನ್ನು ಮಣಿಸಿದ ವಿಶ್ವಾಸದಲ್ಲಿದ್ದ ಶೆಲ್ಬಿ ಹೋರಾಟ 2018ರ ಚಾಂಪಿಯನ್ ಒಸಾಕ ಎದುರು ನಡೆಯಲಿಲ್ಲ. ಇದರಿಂದ ಒಸಾಕಾ ಗ್ರಾಂಡ್ ಸ್ಲಾಂನಲ್ಲಿ ಸತತ 7ನೇ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ದಾಖಲಿಸಿದರು. ಶ್ರೇಯಾಂಕ ರಹಿತ 27 ವರ್ಷದ ರೋಜರ್ಸ್‌ ಸೋಲಿನೊಂದಿಗೆ 2017ರ ಬಳಿಕ ಮೊದಲ ಬಾರಿಗೆ ಸೆಮಿಫೈನಲ್ ಹಂತದಲ್ಲಿ ಮೂವರು ಅಮೆರಿಕನ್ ಆಟಗಾರ್ತಿಯರು ಆಡುವ ಅವಕಾಶ ತಪ್ಪಿತು.

    *ಹೋರಾಡಿ ಗೆದ್ದ ಜ್ವೆರೇವ್, ಬುಸ್ಟಾ

    ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿಗ್ ಥ್ರೀ ಅನುಪಸ್ಥಿತಿಯಲ್ಲಿ 13 ಗ್ರಾಂಡ್ ಸ್ಲಾಂಗಳ ಬಳಿಕ ನೂತನ ಚಾಂಪಿಯನ್ ಖಾತ್ರಿಯಾಗಿದ್ದು, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಹಾಗೂ ಸ್ಪೇನ್‌ನ ಪ್ಯಾಬ್ಲೊ ಕರ‌್ರೆನೊ ಬುಸ್ಟಾ ಮುನ್ನಡೆ ಸಾಧಿಸಿದ್ದಾರೆ. 5ನೇ ಶ್ರೇಯಾಂಕಿತ ಜ್ವೆರೇವ್ 1-6, 7-6, 7-6, 6-3 ರಿಂದ 27ನೇ ಶ್ರೇಯಾಂಕಿತ ಕ್ರೋಷಿಯಾದ ಬೊರ್ನ ಕೊರಿಕ್ ಎದುರು ಆರಂಭಿಕ ಹಿನ್ನಡೆ ನಡುವೆಯೂ ಜಯ ದಾಖಲಿಸಿದರು. ಇದರೊಂದಿಗೆ ವಿಶ್ವ ನಂ.7 ಜ್ವೆರೇವ್ ಸತತ 2ನೇ ಗ್ರಾಂಡ್ ಸ್ಲಾಂನಲ್ಲಿ ಉಪಾಂತ್ಯಕ್ಕೇರಿದರು. ಮತ್ತೊಂದು ಪಂದ್ಯದಲ್ಲಿ ಪ್ಯಾಬ್ಲೊ ಕರ‌್ರೆನೊ ಬುಸ್ಟಾ 3-6, 7-5, 7-6, 0-6, 6-3 ರಿಂದ ಇಸ್ರೇಲ್‌ನ ಡೆನಿಸ್ ಶಾಪೊವಾಲೊವ್ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರೂ ಜಯ ದಾಖಲಿಸಲು ಯಶಸ್ವಿಯಾದರು. ಇದರೊಂದಿಗೆ 2ನೇ ಬಾರಿಗೆ ಯುಎಸ್ ಓಪನ್‌ನಲ್ಲಿ ಸೆಮಿೈನಲ್‌ಗೇರಿದ ಸಾಧನೆ ಮಾಡಿದರು. ಬೆನ್ನು ನೋವಿನ ನಡುವೆಯೂ ಐದು ಸೆಟ್‌ಗಳ ಪಂದ್ಯದಲ್ಲಿ ಬುಸ್ಟಾ ಜಯಭೇರಿ ಬಾರಿಸಲು ಯಶಸ್ವಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts