More

    ಯುಎಸ್ ಓಪನ್ ಆಯೋಜನೆಗೆ ಪ್ಲ್ಯಾನ್​ ಹೇಗಿದೆ ಗೊತ್ತೇ?

    ನ್ಯೂಯಾರ್ಕ್: ಆಗಸ್ಟ್ 31ರಿಂದ ಸೆಪ್ಟೆಂಬರ್ 13ರವರೆಗೆ ನಿಗದಿಯಾಗಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯನ್ನು ನಿಗದಿಯಂತೆಯೇ ಆಯೋಜಿಸಲು ಸಂಘಟಕರು ಭರ್ಜರಿ ಯೋಜನೆಗಳನ್ನು ರೂಪಿಸಿದ್ದಾರೆ. ಯುರೋಪ್, ದಕ್ಷಿಣ ಅಮೆರಿಕ, ಮಧ್ಯಪ್ರಾಚ್ಯ ದೇಶಗಳಿಂದ ಬಾಡಿಗೆ ವಿಮಾನದ ಮೂಲಕ ಆಟಗಾರರು ಗುಂಪುಗಳಲ್ಲಿ ನ್ಯೂಯಾರ್ಕ್‌ಗೆ ಕರೆಸಿಕೊಳ್ಳುವುದು, ಎಲ್ಲರಿಗೂ ಕರೊನಾ ಟೆಸ್ಟ್ ಮಾಡಿಸುವುದು, ಪ್ರೇಕ್ಷಕರಿಗೆ ಅವಕಾಶ ನೀಡದಿರುವುದು, ಕಡಿಮೆ ಕೋರ್ಟ್ ಅಧಿಕಾರಿಗಳನ್ನು ಬಳಸಿಕೊಳ್ಳುವುದು, ಅಭ್ಯಾಸದ ವೇಳೆ ಲಾಕರ್ ರೂಂ ಬಳಕೆಗೆ ಅವಕಾಶ ನೀಡದಿರುವುದು ಮತ್ತಿತರ ಯೋಜನೆಗಳು ಇದರಲ್ಲಿ ಸೇರಿವೆ.

    ಇದನ್ನೂ ಓದಿ: ಮದುವೆಗೂ ಮುನ್ನವೇ ಅಪ್ಪನಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ!

    ಈ ಯೋಜನೆಗಳ ನಡುವೆಯೂ ಟೂರ್ನಿ ಆಯೋಜನೆ ಇನ್ನೂ ಖಚಿತಗೊಂಡಿಲ್ಲ. ಕರೊನಾ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಯುಎಸ್ ಟೆನಿಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟಾಸಿ ಅಲಸ್ಟರ್ ತಿಳಿಸಿದ್ದಾರೆ. ಜೂನ್ ಮಧ್ಯಭಾಗ ಅಥವಾ ಜೂನ್ ಅಂತ್ಯದ ವೇಳೆಗೆ ಟೂರ್ನಿ ಭವಿಷ್ಯ ನಿರ್ಧಾರವಾಗುವ ನಿರೀಕ್ಷೆ ಇದೆ. ಎಲ್ಲ ಎಟಿಪಿ, ಡಬ್ಲ್ಯುಟಿಎ ಮತ್ತು ಐಟಿಎಫ್​ ಟೂರ್ನಿಗಳು ಮಾರ್ಚ್‌ನಿಂದ ಸ್ಥಗಿತಗೊಂಡಿದ್ದು, ಜುಲೈ ಅಂತ್ಯದವರೆಗೂ ಯಥಾಸ್ಥಿತಿ ಮುಂದುವರಿಯಲಿದೆ. ವಿಂಬಲ್ಡನ್ ಈಗಾಗಲೆ ರದ್ದುಗೊಂಡಿದ್ದರೆ, ಫ್ರೆಂಚ್​ ಓಪನ್ ಸೆಪ್ಟೆಂಬರ್‌ಗೆ ಮುಂದೂಡಿಕೆಯಾಗಿದೆ.

    ಇದನ್ನೂ ಓದಿ: 1983ರ ಪಾಕಿಸ್ತಾನ ಹಾಕಿ ತಂಡ ಸ್ಮಗ್ಲಿಂಗ್ ಮಾಡಿತ್ತು!

    ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲೂ ಬೆಸ್ಟ್ ಆ್ ತ್ರಿ ಸೆಟ್ ಪಂದ್ಯಗಳನ್ನು ಆಡಿಸುವ ಪ್ರಸ್ತಾಪವಿದೆ. ಪಂದ್ಯದ ವೇಳೆ ಬಾಲ್ ಕಿಡ್‌ಗಳಾಗಿ ಮಕ್ಕಳನ್ನು ಬಳಸದೆ, ವಯಸ್ಕರನ್ನೇ ಈ ಕೆಲಸಕ್ಕೆ ಬಳಸಿಕೊಳ್ಳುವ ಬಗ್ಗೆಯೂ ಯುಎಸ್ ಓಪನ್ ಸಂಘಟಕರು ಚಿಂತನೆ ನಡೆಸಿದ್ದಾರೆ.

    ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಬಾಕ್ಸರ್‌ಗೆ ಕರೊನಾ ಪಂಚ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts