More

    ಉಳ್ಳಾಲ ಉರುಸ್ ಎರಡು ತಿಂಗಳು ಮುಂದೂಡಿಕೆ

    ಉಳ್ಳಾಲ: ಡಿ.23ರಿಂದ ಜ.16ರವರೆಗೆ ನಡೆಯಬೇಕಿದ್ದ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಉರುಸ್ ಎರಡು ತಿಂಗಳ ಅವಧಿಗೆ ಮುಂದೂಡಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ.

    ಉರುಸ್ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಬಹುತೇಕ ವ್ಯವಸ್ಥೆಗಳು ಪೂರ್ಣಗೊಂಡಿದೆ. ಜನರೂ ದರ್ಗಾಕ್ಕೆ ಬರುತ್ತಿದ್ದು ಹರಕೆಯ ರೂಪದಲ್ಲಿ ನಗದು, ವಿವಿಧ ವಸ್ತುಗಳನ್ನು ನೀಡುತ್ತಿದ್ದಾರೆ. ಆಡು, ಕುರಿಗಳು ಬಂದು ತಲುಪಿವೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಗಡಿಭಾಗವಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಆರ್‌ಟಿಪಿಸಿಆರ್ ಕಡ್ಡಾಯಗೊಳಿಸಲಾಗಿದ್ದು, ಈ ಸ್ಥಿತಿಯಲ್ಲಿ ಉರುಸ್ ನಡೆದರೆ ಹೊರರಾಜ್ಯಗಳ ಜನರು ಆಗಮಿಸಲು ಕಷ್ಟವಾಗಲಿದೆ. ಉರುಸ್ ನಿಗದಿತ ದಿನದಲ್ಲೇ ನಡೆಯಬೇಕೆನ್ನುವ ನಿಯಮ ಇಲ್ಲದ ಕಾರಣ ಒಂದೆರೆಡು ತಿಂಗಳು ಮುಂದೂಡಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

    ಉಳ್ಳಾಲದ ಉರುಸ್ ಎಂದರೆ ಕೇವಲ ಉಳ್ಳಾಲಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಸಂಬಂಧಿಸಿದೆ. ಜಿಲ್ಲಾಧಿಕಾರಿ ಮನವಿ ಹಿನ್ನೆಲೆಯಲ್ಲಿ ಶುಕ್ರವಾರ ಆಡಳಿತ ಸಮಿತಿ ಸಭೆ ಸೇರಿ ಎರಡು ತಿಂಗಳ ಮಟ್ಟಿಗೆ ಉರುಸ್ ಮುಂದೂಡಲು ತೀರ್ಮಾನಿಸಿದ್ದು, ಅದರಂತೆ ಫೆಬ್ರವರಿಯಲ್ಲಿ ನಡೆಸಲು ಯೋಚಿಸಲಾಗಿದೆ. ಇದನ್ನು ಅರ್ಥೈಸಿಕೊಂಡು ಹೊರರಾಜ್ಯದಿಂದ ಬರಲು ಸಿದ್ಧರಾಗಿರುವ ಭಕ್ತರು, ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts