More

    ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವರ್ಗಾವಣೆಗೆ ಆಗ್ರಹ

    ಅಂಕೋಲಾ: ಇಲ್ಲಿಯ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಅವರನ್ನು ವರ್ಗಾಹಿಸುವಂತೆ ಅಂಕೋಲಾ ತಾಲೂಕು ಮೀನುಗಾರರ ಒಕ್ಕೂಟ ಹೋರಾಟ ಸಮಿತಿಯವರು ಬುಧವಾರ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
    ತಾಲೂಕು ಮೀನುಗಾರರ ಒಕ್ಕೂಟ ಹೋರಾಟ ಸಮಿತಿಯ ಅಧ್ಯಕ್ಷ ಸುಂದರ ಖಾರ್ವಿ ಮಾತನಾಡಿ, ಮೀನುಗಾರಿಕೆ ಸಹಾಯಕಿ ನಿರ್ದೇಶಕಿ ರೆನಿಟಾ ಡಿಸೋಜಾ ಅವರು ಮೀನುಗಾರರಿಗೆ ಸರ್ಕಾರದಿಂದ ಬರುವಂತ ಯೋಜನೆ ಕುರಿತು ಸರಿಯಾದ ಮಾಹಿತಿ ನೀಡದೆ ತೊಂದರೆ ನೀಡುವುದು, ದೋಣಿ ಮತು ಬೋಟ್ ಮಾಲೀಕರಿಗೆ ದೋಣಿ ನವೀಕರಣ ಮಾಡುವ ಸಂದರ್ಭದಲ್ಲಿ ಅನೇಕ ಬಾರಿ ಕಚೇರಿಗೆ ಅಲೆದಾಡಿಸುವುದು ಇತ್ಯಾದಿ ತೊಂದರೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಯಲ್ಲಿ ಅಂಕೋಲಾದಿಂದ ಅವರನ್ನು 7 ದಿನದೊಳಗಾಗಿ ವರ್ಗಾವಣೆ ಮಾಡುವಂತೆ ಉಸ್ತುವಾರಿ ಸಚಿವರಲ್ಲಿ ವಿನಂತಿಸುತ್ತೇವೆ. ಒಂದು ವೇಳೆ ವರ್ಗಾವಣೆ ಮಾಡದೆ ಇದ್ದಲ್ಲಿ ಇಲ್ಲಿಯ ಮೀನುಗಾರಿಕೆ ಇಲಾಖೆ ಎದುರಿನಲ್ಲಿ ಪ್ರತಿಭಟನೆ ಹಮ್ಮಿ ಕೊಳ್ಳಬೇಕಾಗುತ್ತದೆ ಎಂದರು.
    ಅರವಿಂದ ಖಾರ್ವಿ, ಗಣಪತಿ ಖಾರ್ವಿ, ಮಾರುತಿ ಯಾದು ಖಾರ್ವಿ, ಆಕಾಶ ವಿಷ್ಣು ಖಾರ್ವಿ, ಆಕಾಶ ಖಾರ್ವಿ, ಪ್ರಭಾಕರ ಸದಾನಂದ ಖಾರ್ವಿ, ಹೇಮಂತ ತುಕರಾಮ ಖಾರ್ವಿ, ಸಂದೀಪ ಜಾನು ಖಾರ್ವಿ, ಉಮೇಶ ಎಸ್. ಟಾಕೇಕರ, ನಾಗೇಶ ಬಿ.ಕುರ್ಲೆ, ಸೂರಜ ವಿ. ಬಾನಾವಳಿಕರ, ಉಲ್ಲಾಸ ದೇವರಾಯ ಬಾನವಳಿಕರ, ಗಿರಿಧರ ಬಾನವಳಿಕರ, ಹರೀಶ ಚಂದ್ರಕಾಂತ ಖಾರ್ವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts