More

    ಕಾರ್ವಿುಕರಿಗೆ ನೆರವು ನೀಡಿ: ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆಯಿಂದ ಸೂಚನೆ

    ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿರುವ ಕಟ್ಟಡ ಕೂಲಿ ಮತ್ತು ವಲಸೆ ಕಾರ್ವಿುಕರಿಗೆ ಆಹಾರ, ಆರೋಗ್ಯ ಹಾಗೂ ಆಶ್ರಯ ಸೌಲಭ್ಯ ಕಲ್ಪಿಸುವಂತೆ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

    ಹೈಕೋರ್ಟ್ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ 17 ಸೂಚನೆಗಳನ್ನು ಒಳಗೊಂಡ ಸುತ್ತೋಲೆಯನ್ನು ಬಿಬಿಎಂಪಿಗೆ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆಯಿಂದ ಈಗಾಗಲೇ ಗುರುತಿಸಲಾದ 100 ವಿದ್ಯಾರ್ಥಿ ವಸತಿನಿಲಯಗಳಲ್ಲಿ 9 ಸಾವಿರ ಹಾಸಿಗೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ನಿರಾಶ್ರಿತರು ಹಾಗೂ ಕಾರ್ವಿುಕರಿಗೆ ಸೌಲಭ್ಯ ಒದಗಿಸುವಂತೆ ತಿಳಿಸಿದ್ದಾರೆ.

    ತಾತ್ಕಾಲಿಕ ಶೆಡ್​ಗಳು ಮತ್ತು ಇತರೆಡೆ ವಾಸ ಮಾಡುವ ಕಾರ್ವಿುಕ ಕುಟುಂಬಗಳಿಗೆ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು, ಧಾನ್ಯಗಳನ್ನು ಒಳಗೊಂಡ 3 ವಾರಕ್ಕೆ ಸಾಕಾಗುವಷ್ಟು ಧಾನ್ಯಗಳನ್ನು ಒಳಗೊಂಡ ದಿನಸಿ ಕಿಟ್ ವಿತರಣೆ ಮಾಡಬೇಕು. ಈ ವ್ಯವಸ್ಥೆಗೆ ವಲಯವಾರು ಜಂಟಿ ಆಯುಕ್ತರನ್ನು ಹಾಗೂ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ನೆರವಿನ ಅಗತ್ಯವಿದ್ದರೆ ಪೊಲೀಸ್ ಇಲಾಖೆ ಸಹಾಯ ಪಡೆಯಬಹುದು. ಜತೆಗೆ ನಗರದ ಎಲ್ಲ ಶೌಚಗೃಹ ತೆರೆದು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶೌಚಗೃಹ ಸಿಬ್ಬಂದಿಗೆ ಅಗತ್ಯ ರಕ್ಷಣಾ ಪರಿಕರಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ.

    ಬೆಂಗಳೂರು ದಕ್ಷಿಣ ಪೊಲೀಸ್ ವಿಭಾಗದಲ್ಲಿ ಅಗತ್ಯ ಸಾಮಗ್ರಿ ತಲುಪಿಸಲು ಸಹಾಯವಾಣಿ ಆರಂಭ | ಎಲ್ಲ ವಾರ್ಡ್​ಗಳಲ್ಲೂ ಸೌಕರ್ಯದ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts