More

    ಪರೀಕ್ಷೆಗಳ ಮರು ನಿಗದಿಗೆ ಮುಂದಾದ ಯುಪಿಎಸ್​ಸಿ, ಮೇ 3ರ ನಂತರ ಶುರುವಾಗಲಿದೆ ಸಂದರ್ಶನ

    ನವದೆಹಲಿ: ದೇಶಾದ್ಯಂತ ಎರಡನೇ ಹಂತದ ಲಾಕ್​ಡೌನ್​ ಮೇ 3ರವರೆಗೆ ಘೋಷಿಸಲಾಗಿದೆ. ಆ ಬಳಿಕ ನಿರ್ಬಂಧಗಳನ್ನು ತೆರವು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಆನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಸಭೆ ನಡೆಸಿದೆ.

    ಎಲ್ಲಕ್ಕಿಂತ ಮುಖ್ಯವಾಗಿ ಸ್ಥಗಿತಗೊಂಡಿರುವ ಸಂದರ್ಶನಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕಾದ ಹೊಣೆಗಾರಿಕೆ ಯುಪಿಎಸ್​ಸಿ ಮೇಲಿದೆ. ಫೆ.13ರಿಂದ ಏಪ್ರಿಲ್​ 13ರವರೆಗೆ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಸಂದರ್ಶನ ನಿಗದಿ ಮಾಡಲಾಗಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆ ಮಾರ್ಚ್​ನಲ್ಲಿ ಸಂದರ್ಶನಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೇ 3ರ ನಂತರ ವ್ಯಕ್ತಿತ್ವ ಪರೀಕ್ಷೆಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ.

    ಅಖಿಲ ಭಾರತ ಇಂಜಿನಿಯರಿಂಗ್​ ಸೇವೆ ಹಾಗೂ ಜಿಯೋಲಾಜಿಸ್ಟ್​ ಸೇವೆಗಳ ಪೂರ್ವಭಾವಿ ಪರೀಕ್ಷೆಗಾಗಿ ದಿನಾಕ ಪ್ರಕಟಿಸಲಾಗಿದ್ದು, ಇದನ್ನು ಮರುನಿಗದಿಪಡಿಸಿದಲ್ಲಿ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್​ಸಿ ತಿಳಿಸಿದೆ.

    ಇದಲ್ಲದೆ, ಭಾರತೀಯ ಅರ್ಥಶಾಸ್ತ್ರ ಸೇವೆ, ಲೆಕ್ಕಶಾಸ್ತ್ರ ಸೇವೆ ಹಾಗೂ ಕಂಬೈನ್ಡ್​ ಮೆಡಿಕಲ್​ ಸರ್ವೀಸ್​ ಹಾಗೂ ಸಿಎಪಿಎಫ್​ನ ಅಸಿಸ್ಟೆಂಟ್​ ಕಮಾಡೆಂಟ್​ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸುವುದನ್ನು ಯುಪಿಎಸ್​ಸಿ ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.
    ನೇರ ನೇಮಕಾತಿ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದನ್ನು ಮುಂದೂಡಲಾಗಿದೆ. ಈ ಎಲ್ಲ ಚಟುವಟಿಕೆಗಳಿಗೆ ದಿನ ನಿಗದಿ ಮಾಡಬೇಕಿದೆ. ಜತೆಗೆ, ಇದರಿಂದ ಮುಂಬರುವ ಪರೀಕ್ಷೆ ಅಥವಾ ನೇಮಕಾತಿ ಪ್ರಕ್ರಿಯೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯೂ ಯುಪಿಎಸ್​ಸಿಗಿದೆ.

    ವಿವಿಗಳಿಗೆ ‘ಏಕರೂಪ ಕಾಯ್ದೆ’ ವಿಧೇಯಕ ಮರುಪರಿಶೀಲನೆಗೆ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts