More

    ಒಕ್ಕೂಟದ 3 ಸಾವಿರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಲು ಉಪ್ಪಿ ತೀರ್ಮಾನ

    ಬೆಂಗಳೂರು: ಕರೊನಾ ಎರಡನೆಯ ಅಲೆಯಿಂದ ಕನ್ನಡ ಚಿತ್ರರಂಗ ಅಕ್ಷರಶಃ ತತ್ತರಿಸಿದೆ. ಮೊದಲ ಅಲೆಯಿಂದ ನಿಧಾನಕ್ಕೆ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ, ಎರಡನೇ ಅಲೆ ಇನ್ನಷ್ಟು ಹೊಡೆತ ನೀಡಿದೆ.

    ಇದನ್ನೂ ಓದಿ: ಕತ್ರಿನಾ ಕೈಫ್ ಜತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಹೀಗಿರುವಾಗಲೇ, ಸಂಕಷ್ಟದಲ್ಲಿರುವ ಜನರಿಗೆ ಕನ್ನಡದ ಹಲವು ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸುದೀಪ್​ ತಮ್ಮ ಕಿಚ್ಚ ಚಾರಿಟಬಲ್​ ಟ್ರಸ್ಟ್​ನಿಂದ 30 ಆಕ್ಸಿಜನ್​ ಸಿಲಿಂಡರ್​ಗಳನ್ನು ಕೊಟ್ಟಿದ್ದಾರೆ. ಶ್ರೀಮುರಳಿ ಭಾನುವಾರ ಐದು ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗೆ ಊಟ ವಿತರಿಸಿದ್ದಾರೆ. ರಾಗಿಣಿ, ಸಂಜನಾ ಸೇರಿದಂತೆ ಹಲವರು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ.

    ಈಗ ಉಪೇಂದ್ರ ಸಹ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ. ಮೊದಲ ಲಾಕ್​ಡೌನ್​ ಸಮಯದಲ್ಲಿ ಒಕ್ಕೂಟದ ಎಲ್ಲ ಸಂಘಗಳ ಸದಸ್ಯರುಗಳಿಗೆ ಧನಸಹಾಯ ಮಾಡಿದ್ದ ಉಪೇಂದ್ರ, ಈ ಬಾರಿ ರೇಷನ್​ ಕಿಟ್​ಗಳನ್ನು ವಿತರಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಅವರು ಘೋಷಿಸಿದ್ದಾರೆ.

    ಇದನ್ನೂ ಓದಿ: ಮಕ್ಕಳ ಶಿಕ್ಷಣಕ್ಕೆ ಕಿಚ್ಚನ ಆಸರೆ; ಚಾಮರಾಜನಗರದಲ್ಲಿ ಮಡಿದ ಕುಟುಂಬಕ್ಕೆ ನೆರಳು

    ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ತರನ್ನು ಸಂಪರ್ಕಿಸಿ ಎಂದು ಉಪೇಂದ್ರ ಹೇಳಿದ್ದಾರೆ.

    ಬಿಗ್​ಬಾಸ್ ಮುಗೀತು.. ಪ್ರಸಾರ ಮುಗಿದಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts