More

    2 ದಿನ ಕಳೆದರೂ ಯೂಟ್ಯೂಬಲ್ಲಿ ‘ಕಬ್ಜ’ ಟೀಸರ್ ನಂ.1 ಟ್ರೆಂಡಿಂಗ್; ನಂ.5ನಲ್ಲಿ ‘ಯುಐ’ ಬರ್ತ್​ಡೇ ವಿಷ್​ ಟೀಸರ್

    ಬೆಂಗಳೂರು: ರಿಯಲ್​ ಸ್ಟಾರ್ ಉಪೇಂದ್ರ ಅವರ 54ನೇ ಜನ್ಮದಿನ ಪ್ರಯುಕ್ತ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’ದ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಟೀಸರ್​​ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಅದು ಬಿಡುಗಡೆ ಆಗಿ ಎರಡು ದಿನ ಕಳೆದರೂ ಯೂಟ್ಯೂಬ್​ನಲ್ಲಿ ಇನ್ನೂ ನಂ. 1 ಟ್ರೆಂಡಿಂಗ್​ನಲ್ಲಿದೆ. ಮತ್ತೊಂದೆಡೆ ಉಪ್ಪಿಗೆ ಜನ್ಮದಿನದ ಶುಭಾಶಯ ಕೋರುವ ಸಲುವಾಗಿ ಅವರ ನಿರ್ದೇಶನದ ‘ಯುಐ’ ಚಿತ್ರತಂಡ ಬಿಡುಗಡೆ ಮಾಡಿದ್ದ ಟೀಸರ್​ ಯೂಟ್ಯೂಬ್​ನಲ್ಲಿ ಇನ್ನೂ ಟ್ರೆಂಡಿಂಗ್​ನಲ್ಲಿದ್ದು, ನಂ. 5 ಸ್ಥಾನದಲ್ಲಿದೆ.

    ಆರ್.ಚಂದ್ರು ನಿರ್ದೇಶನ, ಉಪೇಂದ್ರ-ಸುದೀಪ್-ಶ್ರೀಯಾ ಶರನ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಕಬ್ಜ’ ಚಿತ್ರದ ಟೀಸರ್ ಸೆ. 18ರಂದು ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಅಂದರೆ 24 ಗಂಟೆಗಳ ಒಳಗೆ 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿದ್ದಲ್ಲದೆ, ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿ ನಂ. 1 ಸ್ಥಾನ ತಲುಪಿತ್ತು. ಮಾತ್ರವಲ್ಲ, ಬಿಡುಗಡೆ ಆಗಿ ಎರಡು ದಿನ ಕಳೆದರೂ ಅದು ಯೂಟ್ಯೂಬ್​ನಲ್ಲಿ ಇನ್ನೂ ನಂ. 1 ಸ್ಥಾನ ಕಾಯ್ದುಕೊಂಡಿದ್ದು, 2 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

    2 ದಿನ ಕಳೆದರೂ ಯೂಟ್ಯೂಬಲ್ಲಿ 'ಕಬ್ಜ' ಟೀಸರ್ ನಂ.1 ಟ್ರೆಂಡಿಂಗ್; ನಂ.5ನಲ್ಲಿ 'ಯುಐ' ಬರ್ತ್​ಡೇ ವಿಷ್​ ಟೀಸರ್

    ಇನ್ನೊಂದೆಡೆ ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ‘ಯುಐ’ ಚಿತ್ರತಂಡ ಉಪ್ಪಿ ಜನ್ಮದಿನ ಪ್ರಯುಕ್ತ ಸೆ.18ರ ಬೆಳಗ್ಗೆ ಟೀಸರ್​​ವೊಂದನ್ನು ಬಿಡುಗಡೆ ಮಾಡಿದ್ದು, ಅದು ಕೂಡ ಯೂ-ಟ್ಯೂಬ್​ನಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದು ಟ್ರೆಂಡಿಂಗ್​ನಲ್ಲಿ ನಂ. 2 ಸ್ಥಾನ ತಲುಪಿತ್ತು. ಇದೀಗ ಜನ್ಮದಿನ ಎರಡು ದಿನ ಕಳೆದರೂ ಅದು ನಂ.5 ಟ್ರೆಂಡಿಂಗ್​​ನಲ್ಲಿದೆ.

    ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

    ‘ಸಾಫ್ಟ್​ವೇರ್ ಹುಡುಗ ಬೇಡ’ ಎಂದು ಮದ್ವೆ ಜಾಹೀರಾತು; ಐಟಿ ಇಂಡಸ್ಟ್ರಿಗೆ ಭವಿಷ್ಯ ಇಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts