More

    ಮಾಜಿ ಗಂಡನಿಗೆ ತಿಂಗಳಿಗೆ 2 ಸಾವಿರ ರೂ. ಜೀವನಾಂಶ ನೀಡಲು ಮಹಿಳೆಗೆ ಕೋರ್ಟ್​ ಆದೇಶ..!

    ಲಖನೌ: ಮಾಜಿ ಗಂಡನಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂ. ಜೀವನಾಂಶ ನೀಡುವಂತೆ ಮಹಿಳೆಯೊಬ್ಬಳಿಗೆ ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

    ಟೀ ಅಂಗಡಿ ಹೊಂದಿರುವ ಕಿಶೋರಿ ಲಾಲ್​ ಸೊಹಂಕರ್ (62)ಗೆ ಯಾವುದೇ ಶಾಶ್ವತ ಆದಾಯ​ದ ಮೂಲವಿಲ್ಲ. ಹೀಗಾಗಿ ಇತ್ತೀಚೆಗಷ್ಟೇ ಸೇನೆಯಿಂದ ನಿವೃತ್ತಿ ಹೊಂದಿದ ಮುನ್ನಿ ದೇವಿ ಎಂಬ ಮಹಿಳೆಗೆ ಮಾಜಿ ಗಂಡನಿಗೆ ತಿಂಗಳಿಗೆ 2 ಸಾವಿರ ರೂ. ನೀಡುವಂತೆ ಕೋರ್ಟ್​ ಆದೇಶ ಹೊರಡಿಸಿದೆ.

    ಕಿಶೋರಿ ಲಾಲ್​ ಮುಜಾಫರ್​ನಗರದ ಖತೌಲಿ ಪಟ್ಟಣದಲ್ಲಿ ಸಣ್ಣ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಮಾಜಿ ಪತ್ನಿ ಮುನ್ನಿ ದೇವಿ ಸೇನೆಯಿಂದ ನಿವೃತ್ತಿ ಹೊಂದಿದ್ದು, ತಿಂಗಳಿಗೆ 12 ಸಾವಿರ ಪಿಂಚಣಿ ಬರುತ್ತಿದೆ.

    ಇದನ್ನೂ ಓದಿ: ಅಮ್ಮನಿಗೆ ಹೊಡೆಯುತ್ತಿದ್ದ ಅಪ್ಪನನ್ನೇ ಬಡಿದು ಸಾಯಿಸಿದ 16ರ ಹುಡುಗಿ; ಅಷ್ಟಕ್ಕೇ ಸುಮ್ಮನಾಗಲಿಲ್ಲ..

    ತನ್ನ ಪತ್ನಿ ಮರಳಿ ಮನೆಗೆ ಬರುವಂತೆ ನಿರ್ದೇಶನ ನೀಡಲು ಆರಂಭದಲ್ಲಿ ಕಿಶೋರಿ ಲಾಲ್​ ಕೌಟುಂಬಿಕ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ಆದರೆ, ಪತಿಯೊಂದಿಗೆ ತೆರಳಲು ಮುನ್ನಿ ದೇವಿ ನಿರಾಕರಿಸಿದ್ದರು. ಬಳಿಕ ತನಗೆ ಯಾವುದೇ ಆದಾಯ ಇರದಿರುವುದರಿಂದ ಜೀವನಾಂಶ ಕೊಡಿಸಿ ಎಂದು ಕಿಶೋರಿ ಲಾಲ್​ ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದರು. ಹೀಗಾಗಿ ಅವರ ಪರವಾಗಿ ತೀರ್ಪು ಬಂದಿದ್ದು, ಜೀವನಾಂಶ ನೀಡುವಂತೆ ಮುನ್ನಿ ದೇವಿಗೆ ಆದೇಶಿಸಲಾಗಿದೆ.

    ಇನ್ನು ಮಾಜಿ ಪತಿಗೆ ಮಹಿಳೆಯರು ಜೀವನಾಂಶ ನೀಡುವ ಪ್ರಕರಣ ದೇಶದಲ್ಲಿ ತುಂಬಾ ವಿರಳ. ಹೀಗಾಗಿಯೂ ನ್ಯಾಯಾಲಯ ಮುನ್ನಿ ದೇವಿಗೆ ಮನದಟ್ಟು ಮಾಡಿಸಿ, ಜೀವನಾಂಶ ನೀಡುವಂತೆ ಆದೇಶಿಸಿದೆ. ಆಕೆಯು ಕೂಡ ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    ಮ್ಯಾನೇಜ್​ಮೆಂಟ್​ ಕೋಟಾದವರು ಸ್ವರ್ಗದಿಂದ ಇಳಿದವರೆ? ವೈದ್ಯರ ವಿರುದ್ಧ ಹೈಕೋರ್ಟ್​ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts