More

    16ನೇ ತಾರೀಕಿನೊಳಗೆ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೇ ಬರಬೇಡಿ; ನೌಕರರಿಗೆ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ದೆಹಲಿ: ಕರೊನಾ ನಿಯಂತ್ರಣ ಹಾಗೂ ತಡೆ ನಿಟ್ಟಿನಲ್ಲಿ ಇದೀಗ ದೆಹಲಿ ಸರ್ಕಾರ ಕಟ್ಟುನಿಟ್ಟಿನ ಆದೇಶವೊಂದನ್ನು ಹೊರಡಿಸಿದ್ದು, ಕಡೇಪಕ್ಷ ಮೊದಲ ಡೋಸ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೇ ಬರಬೇಡಿ ಎಂದು ತಾಕೀತು ಕೂಡ ಮಾಡಿದೆ.

    ಸರ್ಕಾರದ ಎಲ್ಲ ಉದ್ಯೋಗಿಗಳು ಅ. 16ರ ಒಳಗೆ ಕಡೇಪಕ್ಷ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂಬುದಾಗಿ ದೆಹಲಿ ಸರ್ಕಾರ ಆದೇಶ ಮಾಡಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ಆದೇಶವನ್ನು ಹೊರಡಿಸಿದೆ.

    ಇದನ್ನೂ ಓದಿ: ಹೊಸ ಜಿಲ್ಲಾ ಪಂಚಾಯತ್ ಸಿಇಒ ನೇಮಕದ ಬೆನ್ನಿಗೇ ಎತ್ತಂಗಡಿ; ಅಧಿಕಾರ ಸ್ವೀಕಾರಕ್ಕೂ ಮೊದಲೇ ಆದೇಶ ಬದಲು

    ಒಂದೇ ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿರದ ಸರ್ಕಾರದ ಎಲ್ಲ ನೌಕರರನ್ನು ರಜೆ ಎಂದೇ ಪರಿಗಣಿಸಲಾಗುವುದು. ಶಿಕ್ಷಕರು ಹಾಗೂ ಕರೊನಾ ಕಾರ್ಯನಿರ್ವಹಣೆಯಲ್ಲಿ ಇರುವ ಎಲ್ಲರಿಗೂ ಇದು ಅನ್ವಯಿಸಲಿದ್ದು, ಅವರು ಮೊದಲ ಡೋಸ್ ಲಸಿಕೆ ಪಡೆದುಕೊಳ್ಳುವವರೆಗೂ ರಜೆ ಎಂದೇ ಪರಿಗಣಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ.

    ಇದನ್ನೂ ಓದಿ: ತಾಯಿಯ ತೆವಲಿಗೆ ಬಲಿಯಾದ ಮಗ; ಅಕ್ರಮ ಸಂಬಂಧಕ್ಕೆ ಅಡ್ಡಿಯಾದವನನ್ನು ಪ್ರಿಯಕರನಿಂದ ಕೊಲ್ಲಿಸಿದ ಅಮ್ಮ!

    ಅ.15ರ ಬಳಿಕವೂ ಒಂದೇ ಒಂದು ಡೋಸ್ ಕೂಡ ಲಸಿಕೆ ಹಾಕಿಸಿಕೊಂಡಿರದಿದ್ದರೆ ಅಂಥವರನ್ನು ಅವರ ಕಚೇರಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಆರೋಗ್ಯ ಸೇತು ಆ್ಯಪ್​ ಮೂಲಕ ಲಸಿಕೆ ಹಾಕಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂಬುದಾಗಿಯೂ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶಕ್ಕೆ ದೆಹಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹಿ ಮಾಡಿದ್ದು, ಕೇಂದ್ರ ಸರ್ಕಾರದ ನೌಕರರನ್ನು ಕೂಡ ನಿರ್ಬಂಧಿಸಬಹುದು ಎಂದು ಆದೇಶಲ್ಲಿ ತಿಳಿಸಲಾಗಿದೆ.

    ರಾಜಧಾನಿಯ ನಿದ್ದೆ ಕೆಡಿಸಿದ ಕಟ್ಟಡ ಕುಸಿತ; ಬೆಂಗಳೂರಿನಲ್ಲಿ ಕುಸಿದು ಬಿತ್ತು ಮೂರು ಮಹಡಿಯ ಬಿಲ್ಡಿಂಗ್..

    ‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts